ಕೊರೊನಾ : ಶಾಸಕ ಜಮೀರ್‌ಗೆ ನೆಗೆಟಿವ್…

515

ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅವರು ಕೊರೊನಾ ಪರೀಕ್ಷೆ ಮಾಡಿದ್ದು ಫಲಿತಾಂಶ ನೆಗೆಟಿವ್ ಬಂದಿದೆ.ಈ ಕುರಿತು ಟ್ವೀಟ್ ಮಾಡಿರುವ ಜಮೀರ್, ಕಳೆದ ಕೆಲವು ದಿನಗಳಿಂದ ನಾನು ಸಾಕಷ್ಟು ಸಂಚಾರ ಮಾಡಿದ್ದೇನೆ, ಜನರ ಒಡನಾಟದಲ್ಲಿದ್ದೇನೆ, ಮೊನ್ನೆ ಅಗತ್ಯ ಮುಂಜಗ್ರತೆಯೊಂದಿಗೆ ಕೊರೊನಾ ಇಂದ ಸಾವಿಗೀಡಾದ ಮಹಿಳೆಯ ಅಂತ್ಯ ಸಂಸ್ಕಾರದಲ್ಲೂ ಭಾಗವಹಿಸಿದ್ದೆ. ಕೊರೊನಾವೆಂಬ ಮಾರಕ ಕಾಯಿಲೆ ಯಾರಿಗೆ ಬೇಕಾದರೂ ಹಬ್ಬುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಬರೆದುಕೊಂಡಿದ್ದಾರೆ.
ಜನರ ಕಷ್ಟಕ್ಕೆ ಸ್ಪಂದಿಸುವುದಷ್ಟೇ ಅಲ್ಲ . ನನ್ನಿಂದ ಇತರರಿಗೆ ಬೇರೆ ಯಾವ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸ್ವತಃ ನಾನೇ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ. ಇದರಿಂದ ಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ಸಹಾಯ ಮಾಡಲು ನನಗೆ ಬಲ ಬಂದಿದೆ ಎಂದು ಹೇಳಿದ್ದಾರೆ.