ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ನಿರ್ದೇಶನ

676

ದಾವಣಗೆರೆ ಮಾ.೨೪ :

      ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾಜ್ಯಾದ್ಯಂತ ಜಿಲ್ಲಾಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತು ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ ಹಾಗೂ ಇತರೆ ಅಧಿಕಾರಿಗಳು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ನಿರ್ದೇಶನ ನೀಡಿದರು.

                ಮೊದಲನೇಯದಾಗಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳಿಗೆ ಕಟ್ಟುನಿಟ್ಟಾಗಿ ಚಿಕಿತ್ಸೆ ನೀಡಬೇಕು

                ಸೋಂಕಿತರ ಪ್ರಾಥಮಿಕ  ಸಂಪರ್ಕದಲ್ಲಿರುವವರ(ಪ್ರೈಮರಿ ಕಾಂಟ್ಯಾಕ್ಟ್) ಕುಟುಂಬದ ನಿಗಾ ವಹಿಸಬೇಕು

                ವಿದೇಶ ಪ್ರಯಾಣ ಮಾಡಿ ಬಂದವರ ಕೈಗೆ ಸೀಲ್ ಹಾಕಬೇಕು ಹಾಗೂ ಅವರ ಮನೆ ಮುಂದೆ ವಿದೇಶ ಪ್ರಯಾಣ ಮಾಡಿ ಬಂದಿರುವ ಬಗ್ಗೆ ಪೋಸ್ಟರ್ ಅಂಟಿಸಬೇಕು

                ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ಸರ್ಕಾರ ನೀಡಿರುವ ನಿರ್ದೇಶನಗಳನ್ನು ಜಿಲ್ಲಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು

                ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ತೆರೆದು ವೈದ್ಯಕೀಯ ಸೇವೆ ನೀಡಬೇಕು

                ಆಸ್ಪತ್ರೆಗಳನ್ನು ಎಲ್ಲ ಸಾಮಗ್ರಿಗಳೊಂದಿಗೆ ತಯಾರಿಟ್ಟುಕೊಳ್ಳಬೇಕು

                ಅವಶ್ಯಕ ವೆಂಟಿಲೇಟರ್‌ಗಳನ್ನು ತಯಾರಿಟ್ಟುಕೊಳ್ಳಬೇಕು

                ಎಲ್ಲ ಅಗತ್ಯವಸ್ತುಗಳ ಅಂಗಡಿಗಳು ಲಭ್ಯವಿರಲಿದ್ದು ಜನರು ಭೀತಿಗೆ ಒಳಗಾಗುವ ಅವಶ್ಯಕತೆ ಇಲ್ಲ

                ಅಂತರರಾಜ್ಯ ಸರಕು ಸೇವೆಗೆ ನಿರ್ಬಂಧ ಇಲ್ಲ

                ತರಕಾರಿ, ಹಣ್ಣುಗಳ ದರ ಹೆಚ್ಚಿಸುವಂತಿಲ್ಲ

                ರೈತರ ಉತ್ಪನ್ನಗಳು ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣಿಕೆಗೆ ತೊಂದರೆ ಮಾಡಬಾರದು

                ಕಾರ್ಮಿಕರು ಗೈರು ಅಥವಾ ರಜೆ ಇದ್ದಲ್ಲಿ ಅವರ ಸಂಬಳ ಕಟಾವಣೆ ಮಾಡಬಾರದು

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‌ಪಿ ಹನುಮಂತರಾಯ, ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.