ಕೊರೊನಾ ಕಂಟ್ರೋಲ್‌ಗೆ ಸಾಥ್ ನೀಡಿದ ಸಾರ್ವಜನಿಕರು..

291

(ಹೊಸ ನಾವಿಕ ನ್ಯೂಸ್)
ಸಾಸ್ವೆಹಳ್ಳಿ: ದಿನದಿಂದ ದಿನಕ್ಕೆ ಕೋವಿಡ್-೧೯ ರೋಗವು ಉಲ್ಭಣವಾಗುತ್ತಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಕಾಯಿಲೆಯನ್ನು ಸ್ವಯಂ ನಿಯಂತ್ರಣದಿಂದ ಹತೋಟಿಗೆ ತರಲು ಸಾಧ್ಯ. ಆದ್ದರಿಂದ ಸರ್ಕಾರ ವಾರದ ಕರ್ಪ್ಯೂ ಜರಿ ಮಾಡಿದೆ. ಇದಕ್ಕೆ ಜನರು ಉತ್ತಮವಾಗಿ ಪ್ರತಿಕ್ರಿಯಿಸಿzರೆ ಎಂದು ಹೊನ್ನಾಳಿ ತಹಶಿಲ್ದಾರ್ ಬಸವನಗೌಡ ಕೋಟೂರು ಹೇಳಿದರು.
ಸಾಸ್ವೆಹಳ್ಳಿ, ಬೆನಕನಹಳ್ಳಿ, ಕಮ್ಮಾರ ಗಟ್ಟೆ, ಉಜ್ಜನಿಪುರ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಅಲ್ಲಲ್ಲಿ ಕುಳಿತಿದ್ದ ಜನರಿಗೆ ಮನೆ ಸೇರುವಂತೆ ಎಚ್ಚರಿಕೆ ನೀಡಿದರು.
ಹೊನ್ನಾಳಿ ಪಟ್ಟಣ ಸೇರಿದಂತೆ ಎ ಊರುಗಳಲ್ಲಿಯೂ ನಾನು ಗಮನಿಸಿದಂತೆ ಗ್ರಾಹಕರು ವರ್ತಕರು ಎಚ್ಚೆತ್ತು ಕೊಂಡಿzರೆ ಎಂದರು.
ಕಂದಾಯ ಇಲಾಖೆಯ ಉಪತಹಶಿಲ್ದಾರ್ ಎಸ್. ಪರಮೇಶ್ ನಾಯ್ಕ್ ಇದ್ದರು.