ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಿ : ಬಿವೈಆರ್

510

ಶಿವಮೊಗ್ಗ : ಕೇಂದ್ರ ಪುರಸ್ಕೃತ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜಿಯ ಬ್ಯಾಂಕ್ ಅಧಿಕಾರಿ-ಸಿಬ್ಬಂಧಿಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿರು ವುದು ಅಭಿನಂದನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಜಿ ಮಾರ್ಗದರ್ಶಿ ಬ್ಯಾಂಕ್‌ನ ಸಭಾಂಗಣ ದಲ್ಲಿ ಏರ್ಪಡಿಸಿದ್ದ ಪ್ರಧಾನಮಂತ್ರಿ ಸಾಮಾಜಿಕ ಭದ್ರತಾ ಯೋಜನೆ ಗಳಡಿಯಲ್ಲಿ ಫಲಾನುಭವಿಗಳಿಗೆ ಸಾಲಸೌಲಭ್ಯ ಹಾಗೂ ಸಹಾಯಧನದ ಚೆಕ್‌ನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅನೇಕ ಸಮಸ್ಯೆ ಸವಾಲುಗಳ ಮದ್ಯೆಯೂ ಬ್ಯಾಂಕಿನ ಸಿಬ್ಬಂಧಿಗಳ ಸೇವೆ ನಿರಂತರವಾಗಿದೆ ಎಂದ ಅವರು ಮಾನ್ಯ ಪ್ರಧಾನಮಂತ್ರಿಗಳು ಜನಸಾಮಾನ್ಯರಿಗೆ ತ್ವರಿತಗತಿಯಲ್ಲಿ ಸೇವೆಯನ್ನು ಸಲ್ಲಿಸುವ ಸದುದ್ದೇಶದಿಂದ ರಾಷ್ಟ್ರೀಯ ಬ್ಯಾಂಕುಗಳನ್ನು ವಿಲೀನ ಮಾಡಿ, ಅನವಶ್ಯಕ ಖರ್ಚು-ವೆಚ್ಚ ಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದವರು ನುಡಿದರು.
ಜಿಯಲ್ಲಿ ಜನ್‌ಧನ್ ಯೋಜನೆ ಯಡಿ ಈಗಾಗಲೆ ೧.೮೦ಲಕ್ಷ ಖಾತೆಗಳು ಆರಂಭವಾಗಿವೆ. ಜೀರೋ ಬ್ಯಾಲೆನ್ಸ್ ಹೊಂದಿರುವ ಖಾತೆದಾರರಿಗೆ ಓವರ್ ಡ್ರಾಫ್ಟ್ ಸೌಲಭ್ಯ ಅಂದರೆ ೫, ೧೦ ಅಥವಾ ೨೦ಸಾವಿರ ರೂ.ಗಳ ಸಾಲದ ಮೆತ್ತ ದೊರೆಯಲಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಸಹಾಯಧನ ಸೌಲಭ್ಯ ವಿತರಿಸಲಾ ಗಿದೆ. ಖಾತೆ ಆರಂಭಿಸಿದ ಫಲಾನುಭವಿ ಗಳು ಕಾಲಕಾಲಕ್ಕೆ ಖಾತೆಯನ್ನು ನವೀಕರಿಸಿಕೊಳ್ಳಬೇಕು. ಸಾಲಸೌಲಭ್ಯ ಪಡೆದ ಫಲಾನುಭವಿಗಳು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಸರ್ಕಾರದ ಯೋಜನೆಗಳು ಸಫಲಗೊಳ್ಳುವಲ್ಲಿ ಸಹಕರಿಸಬೇಕು. ಇದರಿಂದಾಗಿ ಯೋಜನೆಗಳು ಮುಂದುವರೆದು ಇತರರಿಗೆ ಪ್ರಯೋಜನ ಲಭಿಸಲಿದೆ ಎಂದವರು ನುಡಿದರು.
ಪ್ರಧಾನಮಂತ್ರಿ ಆತ್ಮನಿರ್ಬರ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾ ಗುತ್ತಿದ್ದು, ಸರ್ಕಾರ ಯೋಜನೆಯನ್ನು ಘೋಷಿಸಿದ ಅತ್ಯಲ್ಪ ಅವಧಿಯಲ್ಲಿ ಶೇ.೭೦ರಷ್ಟು ಜನರಿಗೆ ಯೋಜನೆಯ ಲಾಭ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಜಿಯ ೫೦೦೦ಜನರಿಗೆ ೧೦೭ಕೋಟಿ ರೂ.ಗಳ ಸಾಲಸೌಲಭ್ಯ ವಿತರಿಸಲಾಗಿದೆ ಎಂದರು.
ಪ್ರಧಾನ ಮಂತ್ರಿ ಜೀವನಜ್ಯೋತಿ ಬಿಮಾಯೋಜನೆಯಡಿ ವಿಮಾದಾರನ ಮರಣದ ನಂತರ ಅವರ ಕುಟುಂಬದ ಅವಲಂಬಿತರಿಗೆ ೨ಲಕ್ಷ ರೂ.ಗಳ ಮೆತ್ತವನ್ನು ಪಾವತಿಸಲಾಗುತ್ತದೆ. ತಲಾ ೨ಲಕ್ಷ ರೂ.ಗಳಂತೆ ಜಿಯ ೧೧ಜನರಿಗೆ ೨೨ಲಕ್ಷ ರೂ.ಗಳ ಸೌಲಭ್ಯವನ್ನು ವಿತರಿಸಲಾಗಿದೆ ಎಂದ ಅವರು, ರೂ.೧೨/- ಸದಸ್ಯತ್ವ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದವರಿಗೆ ಈ ಯೋಜನೆಯಿಂದ ಆಪತ್ಕಾಲದಲ್ಲಿ ನೆರವು ದೊರೆಯಲಿದೆ ಎಂದರು.
ಅಲ್ಲದೇ ಬೀದಿಬದಿ ವ್ಯಾಪಾರ ಗಳಿಗೆ ಶೇ.೪ರ ಬಡ್ಡಿದರದಲ್ಲಿ ರೂ.೧೦,೦೦೦ಗಳ ಬಂಡವಾಳ ಸಾಲ ನೀಡಲಾಗುತ್ತಿದೆ. ಕಿಸಾನ್ ಕಷಿ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಯಾವುದೇ ಅಡಮಾನವಿಲ್ಲದೆ ೧.೫ಲಕ್ಷ ರೂ. ಗಳವರೆಗೆ ಸಾಲಸೌಲಭ್ಯ ದೊರೆಯ ಲಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ೧.೫೦ಲಕ್ಷ ರೂ.ಗಳವರೆಗೆ ಕುಟುಂಬ ಗಳು ಹೆಸರು ನೋಂದಾಯಿಸಿ ಕೊಂಡಿzರೆ. ಇದರಿಂದಾಗಿ ರಾಜ್ಯ ದಲ್ಲಿ ೧೮ನೇ ಸ್ಥಾನದಲ್ಲಿದ್ದ ಜಿ ೨ನೇ ಸ್ಥಾನ ಪಡೆದಿದೆ ಎಂದ ಅವರು, ಈ ಎ ಯೋಜನೆಗಳಡಿಯಲ್ಲಿ ಸಾರ್ವ ಜನಿಕರು ಸೌಲಭ್ಯ ಪಡೆದು ಜೀವನ ಗುಣಮಟ್ಟ ಸುಧಾರಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಧಿಕಾರಿ ಕೆ.ಬಿ.ಶಿವಕುಮಾರ್, ಜಿ ಮಾರ್ಗದರ್ಶಿ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಸುಧಾಕರ್ ಕೊಟಾರಿ, ಶ್ರೀಮತಿ ಪೂರ್ಣಿಮ ಎನ್.ರಾವ್, ಡಿ.ಎಸ್.ಅರುಣ್ ಮುಂತಾದವರು ಉಪಸ್ಥಿತರಿದ್ದರು.