ಕೆಪಿಸಿಸಿ ವೀಕ್ಷಕ ಖಾನ್‌ಗೆ ಕಾಂಗ್ರೆಸ್‌ನಿಂದ ಶ್ರದ್ಧಾಂಜಲಿ

442

ದಾವಣಗೆರೆ: ಕಾಂಗ್ರೆಸ್ ಹಾಗೂ ಮುಸ್ಲಿಂ ಸಮಾಜದ ಪ್ರಮುಖರಾಗಿದ್ದ ಅವಲಿ ಘಾಜೀಖಾನ್ ಅವರ ನಿಧನ ಜಿಲ್ಲಾ ಕಾಂಗ್ರೆಸ್ ಮತ್ತು ಮುಸ್ಲಿಂ ಸಮಾಜಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಕಂಬನಿ ಮಿಡಿದರು.
ನಗರಕ್ಕೆ ಅವಲಿ ಘಾಜೀಖಾನ್‌ರ ಸೇವೆಯನ್ನು ಪರಿಗಣಿಸಿ ಅವರು ವಾಸವಿದ್ದ ಮನೆಯ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಪಾಲಿಕೆ ಸದಸ್ಯರು ಗಳಿಗೆ ಮನವಿ ಮಾಡಲಾಯಿತು. ವಿಪಕ್ಷನಾಯಕ ನಾಗರಾಜ್ ನೇತೃತ್ವದಲ್ಲಿ ಎ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಿ ಅವಲಿ ಘಾಜೀಖಾನ್ ಹೆಸರು ನಾಮಕರಣ ಮಾಡಲು ಶ್ರಮಿಸುವ ಭರವಸೆ ನೀಡಿದರು.
ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ದೇವರಮನಿ ಶಿವಕುಮಾರ್, ಕೆ.ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಬಿ.ಎಚ್. ಉದಯ ಕುಮಾರ್, ಪ್ರಮುಖರಾದ ನಂಜನಾಯ್ಕ, ಉಮೇಶ್, ಅಲಿ ರೆಹಮತ್, ಎಂ.ಕೆ.ಲಿಯಾಕತ್ ಅಲಿ, ಅವಲಿ ಶಹಬಾಜ್, ಇಬ್ರಾಹಿಂ ಖಲೀಲ್, ಮೈನುದ್ಧಿನ್, ದಾದಾಪೀರ್, ಕೊಟ್ರಯ್ಯ, ಅಬ್ದುಲ್ ಜಬ್ಬಾರ್, ರಾಘು ದೊಡ್ಡಮನಿ, ಶಿವಕುಮಾರ್ ಬಾತಿ, ಯುವರಾಜ್, ಇಮ್ತಿಯಾಜ್ ಬೇಗ, ಡಿ. ಶಿವಕುಮಾರ್, ರಮೇಶ್, ಭೀಮೇಶ್ ಇನ್ನಿತರರು ಉಪಸ್ಥಿತರಿದ್ದರು.