ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಮ್ಮಖದಲ್ಲಿ ಜಿಲ್ಲೆಯ ಸಹಕಾರಿ ಧುರೀಣ ಆರ್‌ಎಂಎಂ ಕಾಂಗ್ರೆಸ್ ಸೇರ್ಪಡೆ

68

ಬೆಳಗಾವಿ: ಶಿವಮೊಗ್ಗ ಜಿಲ್ಲೆಯ ಪ್ರಭಾವಿ ಸಹಕಾರಿ ಧುರೀಣ ಆರ್.ಎಂ. ಮಂಜುನಾಥಗೌಡ, ಎಪಿಎಂಸಿ ಅಧ್ಯಕ್ಷ ದುಗ್ಗಪ್ಪಗೌಡ, ಸಮಾಜ ಸೇವಕ ಶಂಕರಘಟ್ಟದ ಧೀನ ತತ್ವಬಂಧು ರಮೇಶ್ ಸೇರಿದಂತೆ ಹಲವರು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಕಳೆದ ಹಲವು ದಿನಗಳಿಂದ ಆರ್.ಎಂ. ಮಂಜುನಾಥಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಗೌಡರು ಕೂಡ ಸುಳಿವು ನೀಡಿದ್ದರು. ನಿರೀಕ್ಷೆಯಂತೆ ಆರ್.ಎಂ. ಮಂಜುನಾಥಗೌಡರು ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇವರೊಂದಿಗೆ ದುಗ್ಗಪ್ಪಗೌಡ, ತೀರ್ಥಹಳ್ಳಿ ತಾಲ್ಲೂಕು ಜನತಾದಳದ ಅಧ್ಯಕ್ಷ ಟಿ.ಎಲ್. ಸುಂದರೇಶ್, ಮುಖಂಡರಾದ ಕೊಲ್ಲೂರಯ್ಯ, ಶಂಕರಘಟ್ಟದ ರಮೇಶ್, ಹಾಲಗz ಉಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್, ಕಟ್ಟೆಹಕ್ಲು ಕಿರಣ್, ಮಕ್ಕಿನಮನೆ ರಾಮಚಂದ್ರ, ಮಂಡಗzಯ ಮಖಾನ್, ಉಲ್ಫಿಕರ್, ಕುರುವಳ್ಳಿ ನಾಗರಾಜ್, ಹೊಸಕೆರೆ ರವಿ, ಸಿ.ಕೆ. ಪ್ರಸನ್ನ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್‌ಗೆ ಜಿಗಿದಿದ್ದಾರೆ.
ಬೆಳಗಾವಿಯ ಜಿ ಕಾಂಗ್ರೆಸ್ ಭವನದಲ್ಲಿ ನಿನ್ನೆ ಸಂಜೆ ನಡೆದ ಸರಳ ಸಮಾರಂಭದಲ್ಲಿ ತೀರ್ಥಹಳ್ಳಿ ಮತ್ತು ಸುತ್ತಮುತ್ತಲ ಊರಿನ ಮುಖಂಡರುಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್, ಶಿವಮೊಗ್ಗ ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಪ್ರಧಾನ ಕಾರ್ಯದರ್ಶಿ ಎಲ್,ಪಿ. ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಆರ್.ಎಂ. ಮಂಜುನಾಥಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅವರ ವೈಯಕ್ತಿಕ ವಿರೋಧವಿತ್ತು. ಆದರೆ, ಈಗ ರಾಜ್ಯ ಕಾಂಗ್ರೆಸ್ ಮುಖಂಡರ ಮಾತುಕಥೆಯ ನಂತರ ಮಂಜುನಾಥಗೌಡರಿಗೆ ಮಾರ್ಗದರ್ಶನ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಪತ್ರ ಕೆಪಿಸಿಸಿಗೆ ಬರೆದಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ಎಂ. ಮಂಜುನಾಥಗೌಡರು, ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ಮಾಡಲಾಗವುದು. ಕಾಂಗ್ರೆಸ್ ಸೇರುವ ಮೊದಲು ತಮ್ಮ ಅಭಿಮಾನಿಗಳ, ಅಪಾರ ಬೆಂಬಲಿಗರ ಒಪ್ಪಿಗೆ ಪಡೆದುಕೊಂಡು ಸೇರುತ್ತಿ ದ್ದೇನೆ. ನನ್ನ ಜೊತೆ ಅವರೆಲ್ಲರೂ ಬರುತ್ತಿzರೆ ಎಂದು ತಿಳಿಸಿzರೆ.
ಕಾಂಗ್ರೆಸ್ ಸೇರಿರುವ ಪತ್ರಕರ್ತ ಶಂಕರಘಟ್ಟದ ಎಂ. ರಮೇಶ್ ಇವರು ಟೈಮ್ಸ್ ಆಫ್ ದೀನಬಂಧು ಪತ್ರಿಕೆ ಸಂಪಾದಕರಾಗಿದ್ದು, ಈ ಹಿಂದೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ೧೯೮೨ ರಲ್ಲಿಯೇ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿರುವ ಇವರು ಈಗ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿzರೆ.