ಕೃಷಿ ಮಾರುಕಟ್ಟೆ ಶುಲ್ಕ ಶೇ.೦.೩೫ಕ್ಕೆ: ಸಿಎಂಗೆ ಅಭಿನಂದನೆ

510

ಶಿವಮೊಗ್ಗ: ಕೃಷಿ ಮಾರುಕಟ್ಟೆ ಶುಲ್ಕವನ್ನು ಶೇ.೧ ರಿಂದ ಶೇ.೦.೩೫ಕ್ಕೆ ಇಳಿಸಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ eನೇಂದ್ರ ಅಭಿನಂದನೆ ಸಲ್ಲಿಸಿzರೆ.
ಎಪಿಎಂಸಿ ಸೆಸ್ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಗೊಂದಲ ಉಂಟಾಗಿತ್ತು. ಎಪಿಎಂಸಿ ವರ್ತಕರುತಮ್ಮ ವ್ಯಾಪಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿ ದ್ದರು. ಈ ವಿಷಯ ತಮ್ಮ ಗಮನಕ್ಕೆ ಬಂದು ಸಚಿವ ಕೆ.ಎಸ್.ಈಶ್ವರಪ್ಪನವರ ಸಲಹೆಯಂತೆ ಸಂಸದರ ಜೊತೆಗೂಡಿ ಎಪಿಎಂಸಿ ವರ್ತಕರೊಡನೆ ನಿಯೋಗ ಹೋಗಿ ಮುಖ್ಯಮಂತ್ರಿಗಳಿಗೆ ಮತ್ತು ಕೃಷಿ ಸಚಿವರಿಗೆ ಮನವಿ ಮಾಡಿದೆವು ಎಂದರು.
ನಂತರ ಜು.೨೩ ರಂದು ನಡೆದ ಸಚಿವಸಂಪುಟ ಸಭೆಯಲ್ಲಿ ನಮ್ಮ ಮನವಿಯನ್ನು ಮನ್ನಿಸಿದ ಸರ್ಕಾರ ಮಾರುಕಟ್ಟೆ ಶುಲ್ಕವನ್ನು ಶೇ.೦.೩೫ಕ್ಕೆ ಇಳಿಸಿದೆ. ಇದರಿಂದ ವ್ಯಾಪಾರಸ್ಥರಿಗೆ ಸಂತೋಷವಾಗಿದೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಜರಿಗೆ ತಂದಿದ್ದು, ರೈತರಿಗೆ ಅನುಕೂಲವಾಗಲಿ ಎಂದು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಒಳಗೆ ಅಥವಾ ಮಾರುಕಟ್ಟೆಯ ಹೊರಗೆ ಮಾರಾಟ ಮಾಡುವುದರಿಂದ ದುಪ್ಪಟ್ಟು ಬೆಲೆ ಸಿಗಬಹುದು ಎಂದು ಜರಿಗೆ ತಂದಿತ್ತು. ಆದರೆ ಕೃಷಿ ಮಾರುಕಟ್ಟೆಗಳಲ್ಲಿ ಸೆಸ್ ಇಲ್ಲದಿದ್ದರೆ ಅಥವಾ ಜಸ್ತಿ ಇದ್ದರೆ ರೈತರು ಮಾರುಕಟ್ಟೆ ಅಂಗಳಕ್ಕೆ ಬರುವುದಿಲ್ಲ ಎಂದು ಗಮನಿಸಿ ಈ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಟೆಂಡರ್‌ಗಳು ಹೆಚ್ಚಾಗಿ ರೈತರಿಗೂ ಕೂಡ ಒಳ್ಳೆಯ ಬೆಲೆ ಸಿಗುತ್ತದೆ. ಮಾರುಕಟ್ಟೆಗೂ ಕೂಡ ಒಳ್ಳೆಯ ಬೆಲೆ ಸಿಗುತ್ತದೆ ಎಂದರು.
ದೇಶದಲ್ಲಿಯೇ ಇದೊಂದು ಒಳ್ಳೆಯ ನಿರ್ಧಾರವಾಗಿದೆ. ಶಿವಮೆಗ್ಗ ಜಿಯಿಂದಲೇ ಇದು ಆರಂಭ ವಾಗಿದೆ. ಈಗ ಸೋಮವಾರದಿಂದ ಎಪಿಎಂಸಿಗಳು ತಮ್ಮ ಮಾರಾಟವನ್ನು ಪುನಃ ಆರಂಭ ಮಾಡುತ್ತವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಡಿ.ಎಂ.ಶಂಕರಪ್ಪ, ಪ್ರಮುಖರಾದ ಡಿ.ಎಸ್.ಅರುಣ್, ಶ್ರೀಕಾಂತ್, ವಾಸುದೇವ್, ವಿರೂಪಾಕ್ಷಪ್ಪ, ಈಶ್ವರ್ ಸೇರಿದಂತೆ ಹಲವರಿದ್ದರು.