ಕೃಷಿ ಉತ್ಪನ್ನಗಳನ್ನು ಕೇಂದ್ರ ಗೋದಾಮಿನಲ್ಲಿ ಸಂಗ್ರಹಿಸಿ ಅಡಮಾನ ಸಾಲ ಪಡೆಯಿರಿ..

579

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ದಾವಣಗೆರೆ :ಕೋವಿಡ್-೧೯ ಲಾಕ್‌ಡೌನ್ ಹಿನ್ನಲೆ ಜಿಲ್ಲೆಯ ರೈತರು ತಾವು ಬೆಳೆದ ಬೆಳೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡದೆ, ಕೇಂದ್ರ ಅಥವಾ ರಾಜ್ಯ ಉಗ್ರಾಣ ನಿಗಮ ಹಾಗೂ ಖಾಸಗಿ ಗೋದಾಮುಗಳಲ್ಲಿ ಸಂಗ್ರಹಿಸಿ ಉಗ್ರಾಣದ ರಸೀದಿಗಳ ಆಧಾರದ ಮೇಲೆ ಬ್ಯಾಂಕುಗಳಿಂದ ಅಡಮಾನ ಸಾಲ (ಪ್ಲಡ್ಜ್ ಲೋನ್) ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ವ್ಯವಹಾರ ನಿರೀಕ್ಷಿತ ಮಟ್ಟಕ್ಕೆ ಆಗದಿರುವುದರಿಂದ ಅನಿವಾರ್ಯವಾಗಿ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಿದ್ದು. ರೈತರಿಗಾಗುವ ನಷ್ಟವನ್ನು ತಪ್ಪಿಸಲು ಕರ್ನಾಟಕ ಕೃಷಿ ಬೆಲೆ ಆಯೋಗವು ರಾಜ್ಯ ಮಟ್ಟದ ಬ್ಯಾಂಕರ್‍ಸ್ ಕಮಿಟಿ (ಎಸ್‌ಎಲ್‌ಬಿಸಿ)ಯ ಸಮನ್ವಯ ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ಅಡಮಾನ ಸಾಲ ನೀಡಲು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೇಂದ್ರ / ರಾಜ್ಯ ಉಗ್ರಾಣ ನಿಗಮ ಅಥವಾ ಸಂಬಂಧಪಟ್ಟ ಬ್ಯಾಂಕ್‌ಗಳನ್ನು ಸಂರ್ಪಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ.