ಕೃಷಿಯಿಂದ ಕೇವಲ ಆಹಾರ ಸುರಕ್ಷತೆ ಮಾತ್ರವಲ್ಲ ಇಂಧನ ಸುರಕ್ಷತೆಯೂ ಸಾಧ್ಯ: ಡಾ| ನಾಯಕ್

401

ಶಿವಮೊಗ್ಗ : ಹಸಿರು ಇಂಧನ ಮುಂದಿನ ದಿನದ ಅಗತ್ಯ. ಬರೀ ಆಹಾರ ಸುರಕ್ಷತೆಯಷ್ಟೆ ಅಲ್ಲ ಇಂಧನ ಸುರಕ್ಷತೆಯೂ ಕೃಷಿಯಿಂದ ಸಾಧ್ಯ ವಾದರೆ ಸುಸ್ಥಿರ ಅಭಿವೃದ್ದಿ ಸಾಧ್ಯಎಂದು ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ. ಎಂ.ಕೆ. ನಾಯಕ್ ತಿಳಿಸಿದರು.
ಕೃಷಿ ವಿವಿಯಲ್ಲಿ ಸಿಬ್ಬಂದಿಗೆ ತರಬೇತಿ ಹಾಗೂ ರೈತ ತರಬೇತಿ ಘಟಕ ಒಳಗೊಂಡಂತೆ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ ಪ್ರಾರಂಭಿಸಿ ಇಂದು ಆ ವಿಭಾಗದ ಮೊದಲ ಕಾರ್ಯ ಕ್ರಮವಾಗಿ ಸಿಬ್ಬಂದಿಗಳಿಗಾಗಿ ಜೈವಿಕ ಡೀಜೆಲ್ ತಯಾರಿಕೆ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಈ ವರ್ಷ ಬಾರಿ ಬೆಳೆ ಬಂದಿದೆ. ಇದನ್ನು ಇಂಧನಕ್ಕೆ ಬಳಸುವ ಬಗ್ಗೆ ಸೂಕ್ತವಾಗಬಹುದೇ ಎಂಬ ಚಿಂತನೆಗೆ ಚಾಲನೆ ನೀಡಬೇಕಿದೆ ಎಂದರು.
ತುಮಕೂರಿನ ಸಿದ್ದಗಂಗಾ ತಂತ್ರeನ ಸಂಸ್ಥೆ, ಸಿದ್ದಪಡಿಸಿದ್ದ ಪುಟ್ಟ ಜೈವಿಕ ಇಂಧನ ಘಟಕ ವಿಸ್ತರಣೆ ಕಾರ್ಯಗಳಿಗೆ ಸೂಕ್ತವಾಗಿದೆ ಹಾಗೆ ಶಿಕ್ಷಣದಲ್ಲಿ ಪ್ರಾಯೋಗಿಕ ತರಗತಿಗಳಿಗೆ ಬಳಸಲು ಸಹ ಸೂಕ್ತವಾಗಿದೆ. ಇಂತಹ ಘಟಕಗಳನ್ನು ನಮ್ಮ ಕೃಷಿ ವಿಜನ ಕೇಂದ್ರಗಳಿಗೆ ಹಾಗೂ ಕಾಲೇಜುಗಳಲ್ಲಿ ಬಹು ಉಪಯೋಗಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ನಿರ್ದೇಶಕ ಡಾ. ಕೆ.ಸಿ. ಶಶಿಧರ್ ಮಾತನಾಡಿ, ಸಿದ್ದಗಂಗಾ ತಂತ್ರeನ ಸಂಸ್ಥೆ ಮತ್ತು ನಮ್ಮ ವಿಶ್ವವಿದ್ಯಾಲಯ ಒಡಂಬಡಿಕೆಯಡಿ ಹಲವು ಸಂಶೋಧನೆಗಳನ್ನು ಮಾಡಿದೆ ಇಂದು ನಮಗಾಗಿ ಪುಟ್ಟ ಜೈವಿಕ ಡೀಜೆಲ್ ಘಟಕ ಮಾಡಿದ್ದಾರೆ ಎಂದರು.
ಸಿದ್ದಗಂಗಾ ತಂತ್ರeನ ಸಂಸ್ಥೆಯ ಪ್ರಾಧ್ಯಾಪಕರುಗಳಾದ ಡಾ.ಆರ್. ಸುರೇಶ್ ಹಾಗೂ ಬಿ.ಆರ್. ಓಂಕಾ ರೇಶ್ ಅವರು ಪ್ರಾಯೋಗಿಕ ಕಾರ್ಯಾಗಾರಗಳನ್ನು ನಡೆಸಿ ಮಾತನಾಡಿ, ಮುಂದೆ ಕೃಷಿ ಮತ್ತು ತೋಟಗಾರಿಕೆ ವಿವಿ ಹಸಿರು ಇಂಧನ ಬಂಕ್ ಪ್ರಾರಂಭವಾಗಲಿ ಎಂದು ಆಶಿಸಿದರು. ಇದಕ್ಕೆ ಸಿದ್ದಗಂಗಾ ತಂತ್ರeನ ಸಂಸ್ಥೆ ಸಹಕಾರ ಒದಗಿಸಲಿದೆ ಎಂದರು. ಡಾ. ಸತೀಶ್ ನಾಯಕ್ ಸ್ವಾಗತಿಸಿದರು. ಹಾಗೂ ಸಿಬ್ಬಂದಿ ತರಬೇತಿ ಘಟಕದ ಮುಖ್ಯಸ್ಥ ಡಾ.ಎಸ್. ಯು.ಪಾಟೀಲ್ ವಂದಿಸಿದರು.