ಕಿಮ್ ಆರೋಗ್ಯವಾಗಿದ್ದಾರೆ: ಊಹಾಪೋಹಗಳಿಗೆ ಬ್ರೇಕ್!

843

ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಅನಾರೋಗ್ಯ ಮತ್ತು ನಿಗೂಢ ಕಣ್ಮರೆ ಪ್ರಕರಣ ಭಾರೀ ಸುದ್ದಿಯಾಗಿರು ವಾಗಲೇ ಅವರು ಜೀವಂತವಾಗಿದ್ದಾರೆ ಮತ್ತು ಸುರಕ್ಷಿತವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರ ಉನ್ನತ ಮಟ್ಟದ ಭದ್ರತಾ ಸಲಹೆಗಾರರೊಬ್ಬರು ಮಾಹಿತಿ ನೀಡಿದ್ದಾರೆ. ಇದರಿಂದ ಉತ್ತರ ಕೊರಿಯಾ ಅಧ್ಯಕ್ಷರ ಅನಾರೋಗ್ಯ ಮತ್ತು ನಾಪತ್ತೆಗೆ ಸಂಬಂಧಿದಂತೆ ಹಬ್ಬಿದ್ದ ಊಹಾಪೋಹದ ಸುದ್ದಿಗಳಿಗೆ ತೆರೆ ಬಿದ್ದಂತಾಗಿದೆ.
ಕಿಮ್ ಅವರು ಉತ್ತರ ಕೊರಿಯಾದ ಪೂರ್ವ ಭಾಗದಲ್ಲಿರುವ ರೆಸಾರ್ಟ್ ಪಟ್ಟಣ ವೋನ್ಸನ್‌ನಲ್ಲಿ ಕಳೆದ ಏ.೧೩ರಿಂದ ವಾಸ್ತವ್ಯ ಹೂಡಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆಯಷ್ಟೇ ರೆಸಾರ್ಟ್‌ನಲ್ಲಿ ಕಿಮ್ ಅವರ ವಿಶೇಷ ರೈಲು ನಿಂತಿರುವುದು ಉಪಗ್ರಹ ಚಾನೆಲ್‌ನಲ್ಲಿ ಪತ್ತೆಯಾ ಗಿತ್ತು. ಕಳೆದ ಏ.೧೧ರಂದು ಕಿಮ್, ವರ್ಕರ್ಸ್ ಪಾರ್ಟಿ ಪಾಲಿಟ್ ಬ್ಯೂರೋ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಉತ್ತರ ಕೊರಿಯಾ ಸಂಸ್ಥಾಪಕ ಮತ್ತು ತಮ್ಮ ತಾತ ಕಿಮ್ ಇಲ್ ಸಂಗ್ ಅವರ ಜನ್ಮ ದಿನಾಚರಣೆ ದಿನವಾದ ಏ.೧೩ರಂದು ನಡೆದ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.
ಆನಂತರ ಅವರು ಯಾವುದೇ ಸಾರ್ವಜನಿಕವಾಗಿ ಕಾಣಿಸಿಕೊಂಡಿ ರಲಿಲ್ಲ. ಆಗಿನಿಂದ ಅವರ ಅನಾರೋಗ್ಯ ಮತ್ತು ಸಾವಿನ ಬಗ್ಗೆ ಅನೇಕ ಊಹಾಪೋಹಗಳು ವಿಶ್ವದಾದ್ಯಂತ ಹಬ್ಬಿದ್ದವು.