ಕಾಳಿಕಾ ಸೊಸೈಟಿ ಸದಸ್ಯರಿಗೆ ನಾಳೆ ಆಹಾರ ಕಿಟ್..

481

ಶಿವಮೆಗ್ಗ: ಕೊರೋನಾ ವೈರಸ್ ಹಾವಳಿಯಿಂದ ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಬಹಳಷ್ಟು ಜನರು ಆರ್ಥಿಕ ಸಂಕಷ್ಟಕ್ಕೆ ಈಡಾಗಿ ಹಸಿವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿವಮೆಗ್ಗದ ಪ್ರತಿಷ್ಠಿತ ಶ್ರೀ ಕಾಳಿಕಾ ಪರಮೇಶ್ವರಿ ಕೋ-ಆಪರೇಟಿವ್ ಸೊಸೈಟಿಯು ಸದಸ್ಯರ ನೆರವಿಗೆ ಧಾವಿಸಿದ್ದು, ಮೇ ೧ರ ನಾಳೆ ಬೆಳಿಗ್ಗೆ ೯ ಗಂಟೆಗೆ ಸುಮಾರು ೨ವರೆ ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಿದೆ.
ಗಾಂಧಿಬಜರ್, ಬಸವೇಶ್ವರ ದೇವಸ್ಥಾನ ಆವರಣದ ಬಸವ ಭವನದಲ್ಲಿ ಕಾಳಿಕಾ ಸೊಸೈಟಿಯ ಸದಸ್ಯರಿಗೆ ಒಟ್ಟಾರೆ ೧೫ ಲಕ್ಷ ರೂ.ಗಳ ಮಲ್ಯದ ಆಹಾರ ಕಿಟ್ ವಿತರಿಸಲಿದ್ದು, ಸೊಸೈಟಿ ಅಧ್ಯಕ್ಷ ಎ.ಸತೀಶ್ ಅಧ್ಯಕ್ಷತೆ ವಹಿಸುವರು. ವೀರಶೈವ ಸಮಾಜದ ಅಧ್ಯಕ್ಷರು ಹಾಗೂ ಮಾಜಿ ನಗರಸಭೆ ಅಧ್ಯಕ್ಷರೂ ಆದ ಎನ್.ಜೆ. ರಾಜಶೇಖರ್, ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್, ಸಹಕಾರ ಸಂಘಗಳ ಉಪನಿಬಂಧಕರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಪ್ರಪ್ರಥಮ ಬಾರಿಗೆ ಸೊಸೈಟಿ ಯೊಂದು ಭಾರೀ ಮಲ್ಯದ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್‍ಯಕ್ಕೆ ಮುಂದಾಗಿದೆ. ಈ ಹಿರಿಮೆ ಕಾಳಿಕಾ ಪರಮೇಶ್ವರಿ ಸೊಸೈಟಿಯದ್ದಾಗಿದೆ ಎಂದು ನಿರ್ದೇಶಕ ಎಸ್. ರಮೇಶ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸೊಸೈಟಿಯ ಎಲ್ಲ ಸದಸ್ಯರು ಪಾಲ್ಗೊಳ್ಳುವಂತೆ ಸೊಸೈಟಿ ಕಾರ್ಯದರ್ಶಿ ಎಸ್.ಆರ್. ಚಂದ್ರಶೇಖರರಾಜು ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಕೋರಿದ್ದಾರೆ.