ಕಾಂಗ್ರೆಸ್ ಯುವಮುಖಂಡ ರಂಗನಾಥ್ ನೇತೃತ್ವ: ಹೊಸಮನೆ ಬಡಾವಣೆಯಲ್ಲಿ ೩ದಿನಗಳ ಕಾಲ ಕೋವಿಡ್ ತಪಾಸಣಾ ಶಿಬಿರ

505

ಶಿವಮೊಗ್ಗ: ದಿನೇದಿನೇ ನಗರದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಹೊಸಮನೆ ಬಡಾವಣೆಯಲ್ಲಿ ಸಹ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಶ್ರೀರಾಮನಗರ ಇವರ ಸಹಯೋಗದೊಂದಿಗೆ ಹೊಸಮನೆ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಆ.೩ರಿಂದ ಮೂರು ದಿನಗಳ ಕಾಲ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೨ಗಂಟೆವರೆಗೆ ಕೊರೋನಾ ಟೆಸ್ಟ್ ನಡೆಸಲಾಗುವುದು.
ಬಡಾವಣೆಯಲ್ಲಿ ಕೆಮ್ಮು, ಶೀತ, ಜ್ವರ ಲಕ್ಷಣಗಳು ಇರುವಂತಹ ನಾಗರಿಕರು ಕೊರೋನ ಟೆಸ್ಟ್ ಮಾಡಿಸುವ ಮುಖಾಂತರ ಆರೋಗ್ಯ ಕುರಿತು ಜಾಗೃತಿ ವಹಿಸಬೇಕೆಂದು ಮಹಾನಗರ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಕೋರಿದರು.
ಈ ಸಂದರ್ಭದಲ್ಲಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶ್ರೀಧರ್, ಕಾಂಗ್ರೆಸ್ ಯುವ ಮುಖಂಡ ಕೆ.ರಂಗನಾಥ್, ಪ್ರಾಥಮಿಕ ಆರೋಗ್ಯ ಮಹಿಳಾ ಸಹಾಯಕಿ ವಿಜಯ ಮತ್ತು ಸಿಬ್ಬಂದಿಗಳು ಹಾಗೂ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.