ಕಸಾಪದಿಂದ ಹಸರೀಕರಣ ಹೆಚ್ಚಿಸುವ ಕಾರ್ಯ ನಿರಂತರ: ಡಿ.ಬಿ. ಶಂಕರಪ್ಪ

430

ಶಿವಮೊಗ್ಗ: ಜಿದ್ಯಂತ ಹಸರೀಕರಣ ಹೆಚ್ಚಿಸುವ ದಿಸೆಯಲ್ಲಿ ಇಲಾಖೆ ಸಹಯೋಗದಲ್ಲಿ ಸಂಘ ಸಂಸ್ಥೆಗಳು ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಉಪ ಸಂರಕ್ಷಣಾಧಿಕಾರಿ ಜಿ.ಯು.ಶಂಕರಪ್ಪ ಹೇಳಿದರು.
ನಗರದ ಗೋಪಿಶೆಟ್ಟಿಕೊಪ್ಪ ದಲ್ಲಿರುವ ಸಾಹಿತ್ಯ ಭವನದಲ್ಲಿ ಜಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಹಸರೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸರೀಕರಣದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಸಸಿಗಳನ್ನು ನೆಡುವ ಜತೆಯಲ್ಲಿ ಮುಂದಿನ ದಿನಗಳಲ್ಲಿ ಅವುಗಳ ಪೋಷಣೆ ಮಾಡುವ ಕೆಲಸ ಕೂಡ ಮಾಡಬೇಕು. ಇದರಿಂದ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ಸಾಹಿತ್ಯ ಭವನದಲ್ಲಿ ಡಿಜಿಟಲ್ ಗ್ರಂಥಾಲಯ ರೂಪಿಸುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಆಯೋಜಿಸಲಾಗು ತ್ತದೆ. ಸಾಹಿತ್ಯ ಕೃಷಿ ನಡೆಸಲು ಪೂರಕ ವಾಗಿರುವಂತೆ ಸಾಹಿತ್ಯ ಭವನದ ಪರಿಸರ ನಿರ್ಮಾಣ ಮಾಡಲಾಗುತ್ತದೆ ಎಂರಲ್ಲದೇ, ಹಸರೀಕರಣ ಹೆಚ್ಚಿಸುವ ಕಾರ್ಯ ನಿರಂತರವಾಗಿರುತ್ತದೆ ಎಂದರು.
ಉತ್ತಿಷ್ಠ ಭಾರತ, ಶಿವಮೊಗ್ಗ ಕ್ರಿಕೆಟ್ ಅಕಾಡೆಮಿ ಹಾಗೂ ಪರೋಪಕಾರಂ ತಂಡದ ಸಹಯೋಗದಲ್ಲಿ ಆಯೋಜಿಸಿದ್ದ ಹಸರೀಕರಣ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯೆ ಲಕ್ಷ್ಮಮ್ಮ ಶಂಕರನಾಯ್ಕ ಚಾಲನೆ ನೀಡಿದರು.
ಕೃಷಿ ಇಲಾಖೆ ಉಪನಿರ್ದೇಶಕ ಡಿ.ಎಂ. ಬಸವರಾಜ, ಪ್ರವಾಸೋ ದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್.ರಾಮಕಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್, ಜಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆ. ಬಸವನ ಗೌಡ್ರು, ಜಿ ಕಸಾಪ ಕಾರ್ಯದರ್ಶಿ ಎಂ.ಎನ್. ಸುಂದರ್ ರಾಜ್, ರುದ್ರಮುನಿ ಸಜ್ಜನ್, ಕೋಶಾಧ್ಯಕ್ಷೆ ಎಸ್.ವಿ. ಚಂದ್ರಕಲಾ ಅರಸ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಪತ್‌ಕುಮಾರ್, ತಾಲೂಕು ಕಸಾಪ ಕಾರ್ಯದರ್ಶಿ ಚನ್ನಬಸಪ್ಪ ನ್ಯಾಮತಿ, ಜಿ.ಎಸ್. ಅನಂತ್ ಹಾಗೂ ಹಸನ್ ಬೆಳ್ಳಿಗ ನೂಡು ಮತ್ತಿತರರು ಉಪಸ್ಥಿತರಿದ್ದರು.