ಕಳೆದೊಂದು ತಿಂಗಳಲ್ಲಿ ಕರ್ನಾಟಕದ ರೆಡ್ ಝೆನ್ ೧ರಿಂದ ೬ಕ್ಕೆ ಏರಿಕೆ!

495

ಬೆಂಗಳೂರು: ದೇಶದ ಮೊದಲ ಕೊರೊನಾ ಸಾವು ಸಂಭವಿಸಿರುವುದು ರಾಜ್ಯದ ಕಲಬುರಗಿಯಲ್ಲಿ. ಆದರೆ ಅಲ್ಲಿಂದ ಬಳಿಕ ರಾಜ್ಯ ಸರಕಾರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಸಂಘಟಿತ ಹೋರಾಟದ ಫಲವಾಗಿ ಕೊರೊನಾ ವೈರಸ್ ಒಂದು ಹಂತದ ವರೆಗೆ ನಿಯಂತ್ರಿಸುವಲ್ಲಿ ಯಶಸ್ವಿ ಯಾಗಿದೆ. ಆದರೂ ಇತ್ತೀಚಿನ ದಿನಗಳಲ್ಲಿ ರೆಡ್ ಝೆನ್‌ಗಳ ಸಂಖ್ಯೆ ೧ರಿಂದ ೬ಕ್ಕೆ ಏರಿಕೆಯಾಗಿದೆ.
ಲಾಕ್‌ಡೌನ್ ಆರಂಭದ ವೇಳೆ ರಾಜ್ಯದಲ್ಲಿ ರೆಡ್ ಝೋನ್ ಪಟ್ಟಿಯಲ್ಲಿ ಒಂದೇ ಒಂದು ಜಿಲ್ಲೆ ಮಾತ್ರ ಗುರುತಿಸಿಕೊಂಡಿತ್ತು. ಇದು ಏ.೨೭ರ ವೇಳೆಯಾಗುವಾಗ ಆರಕ್ಕೆ ಏರಿಕೆಯಾಗಿದೆ.