ಕಲಾವಿದೆ ವಿದುಷಿ ಮಾನಸಿ ಸುಧೀರ್ ದಂಪತಿಗೆ ಅಭಿನಂದನೆ …

793

ಸಾಗರ: ಕಲಾ ಪ್ರಕಾರಗಳ ಆಸ್ವಾದನೆಯಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯ ಎಂದು ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ಮತ್ತು ರೋಟರಿ ಚಾರಿಟಬಲ್ ಟ್ರಸ್ಟ್‌ನಿಂದ ಕಲಾವಿದೆ ವಿದುಷಿ ಮಾನಸಿ ಸುಧೀರ್ ದಂಪತಿ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೃತ್ಯ, ಸಂಗೀತ, ನಾಟಕ ಮುಂತಾದ ಕಲಾ ಪ್ರಕಾರಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು, ಬುದ್ಧಿಗೆ ಹೊಸ ಚೈತನ್ಯ ಬರುತ್ತದೆ. ದೈಹಿಕ, ಮಾನಸಿಕ, ಸೈಕಾಲಜಿ ಉತ್ತೇಜನಕ್ಕೆ ಸಂಗೀತ, ನೃತ್ಯ ಕಲೆಗಳು ಪೂರಕವಾಗಿವೆ. ಇವು ಸರಿ ಯಾಗಿದ್ದರೆ ಮನುಷ್ಯ ಆರೋಗ್ಯ ದಿಂದಿರಬಹುದು ಎಂದರು.
ರೋಟರಿ ಸಂಸ್ಥೆಯ ಗುರುಪ್ರಸಾದ್ ವಿದುಷಿ ಮಾನಸಿ ಸುಧೀರ್ ಮತ್ತು ವಿದ್ವಾನ್ ಸುಧೀರರಾವ್ ಅವರನ್ನು ಪರಿಚಯಿಸಿ ಮಾತನಾಡಿ, ವಿದುಷಿ ಮಾನಸಿ ಸುಧೀರ್ ತಮ್ಮ ಭಾವಾಭಿನಯದ ಮೂಲಕ ಮನೆಮಾತಾಗಿzರೆ. ಸಂಗೀತ, ನಾಟಕ, ಕಿರುಚಿತ್ರ, ಚಲನಚಿತ್ರ, ಭರತನಾಟ್ಯ ಹೀಗೆ ಅನೇಕ ಕಲಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿzರೆ. ಮಹಾಭಾರತ, ಸೀತೆ, ರಾಘವೇಂದ್ರ ವೈಭವ, ಅಂತಃಪುರ, ಪ್ರೀತಿ ಎಂಬ ಮಾಯೆ ಮುಂತಾದ ಧಾರಾವಾಹಿಗಳಲ್ಲಿ, ರಮ್ಯಚೈತ ಕಾಲ, ಬಾನಾಡಿ, ರಂಗೋಳು, ನೆರಳು, ಶಂಕರ ಪುಣ್ಯಕೋಟಿ, ಕಂಚಿಲ್ಧ ಬಾಲೆ, ರಿಜರ್ವೇಶನ್ ಮುಂತಾದ ಚಲನ ಚಿತ್ರಗಳಲ್ಲಿ ನಟಿಸಿzರೆ. ರಿಜರ್ವೇಶನ್ ಕಲಾತ್ಮಕ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಕಂಚಿಲ್ಧ ಬಾಲೆ ತಮಿಳು ಚಿತ್ರಕ್ಕೆ ಶ್ರೇಷ್ಠ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಲಭಿಸಿದೆ . ಕೊರೋನಾ ಸಂದರ್ಭದಲ್ಲಿ ತಮ್ಮ ಕಾವ್ಯಾಭಿನಯದ ಚಾನಲ್ ಮೂಲಕ ದೇಶವಿದೇಶಗಳ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡ ಮೇರು ಕಲಾವಿದೆಯಾಗಿzರೆ. ಭರತನಾಟ್ಯ ತರಬೇತಿ ನೀಡುತ್ತಿzರೆ ಎಂದರು.
ವಿದ್ವಾನ್ ಸುಧೀರರಾವ್ ಅವರು ಹರಿಕಥೆ, ನಾಟಕ, ಸಂಗೀತ, ಯಕ್ಷಗಾನ, ಭರತನಾಟ್ಯ ಮುಂತಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿzರೆ. ಕಳೆದ ೩೦ ವರ್ಷಗಳಿಂದ ನೃತ್ಯನಿಕೇತನ ಕೊಡವೂರು ಸಂಸ್ಥೆಯ ಗುರುವಾಗಿ, ನಿರ್ದೇಶಕರಾಗಿ ಕೆಲಸ ಮಾಡುತ್ತಿzರೆ. ನೃತ್ಯಕಲಾಸಿಂಧು, ನೃತ್ಯಭೂಷಣ, ಬಾನ್ಸುರಿ ಪ್ರಶಸ್ತಿ, ಕೃಷ್ಣಾನುಗ್ರಹ ಪ್ರಶಸ್ತಿ, ಪದ್ಮಕಮಲ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ ಎಂದರು.
ನೃತ್ಯವಾತ್ಸಲ್ಯ ಕಾರ್ಯಕ್ರಮದ ಮೂಲಕ ಅನೇಕ ವೃದ್ಧಾಶ್ರಮ, ಅನಾಥಾಶ್ರಮ, ಬುದ್ಧಿಮಾಂದ್ಯ ಶಾಲೆ ಮತ್ತು ಕಿವುಡ ಮೂಕ ಮಕ್ಕಳ ಶಾಲೆಗಳಿಗೆ ಉಚಿತ ನೃತ್ಯ ಕಾರ್ಯಕ್ರಮ ನೀಡಿzರೆ. ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಸಂಸ್ಥೆಯ ಕಲಾವಿದರು ಕೃಷ್ಣ ಗೋಪಿಕೆಯರ ವೇಷ ಧರಿಸಿ ಬೆಳಗಿನಿಂದ ರಾತ್ರಿಯವರೆಗೆ ಉಡುಪಿ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಅಲ್ಲಿ ನೃತ್ಯ ಪ್ರದರ್ಶನ ನೀಡಿ ಸಂಗ್ರಹಿಸಿದ ಸುಮಾರು ೧ ಲಕ್ಷ ೭೫ ಸಾವಿರದಷ್ಟು ಹಣವನ್ನು ಸಮಾಜದಲ್ಲಿರುವ ಬಡರೋಗಿಗಳಿಗೆ, ನೊಂದವರಿಗೆ ನೀಡಿ ಈ ಸಂಸ್ಥೆ ಸಾಮಾಜಿಕ ಕಳಕಳಿ ಮೆರೆದಿದೆ ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ನರೇಂದ್ರ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಯ ಜಿ.ಎಸ್. ವೆಂಕಟೇಶ್, ಎಲ್.ಟಿ.ತಿಮ್ಮಪ್ಪ, ಶಾಂತಕುಮಾರ್, ಕೆ.ನ್.ಶ್ರೀಧರ್, ಅಶ್ವತ್ಥನಾರಾಯಣ, ಜಗದೀಶ್ ಎ.ಎಸ್., ರೋಟರಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸುಶೀಲಾ ವೆಂಕಟೇಶ್, ಕಾರ್ಯದರ್ಶಿ ಪೂರ್ಣಿಮಾ ಗುರುಪ್ರಸಾದ್, ಉದ್ಯಮಿ ಹರೀಶ್ ಎ.ಎಸ್., ರೋಟರಿ ಸಂಸ್ಥೆ ಸದಸ್ಯರು, ಇನ್ನರ್‌ವ್ಹೀಲ್ ಸಂಸ್ಥೆ ಸದಸ್ಯೆಯರು, ನತ್ಯನಿಕೇತನ ಕೊಡವೂರು ಸಂಸ್ಥೆಯ ವಿದ್ಯಾರ್ಥಿನಿಯರು ಹಾಜರಿದ್ದರು.
ರೋಟರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹೇಶ್ ಅಂಕದ ಸ್ವಾಗತಿಸಿ ದರು. ಕಾರ್ಯದರ್ಶಿ ಆದಿತ್ಯ ಬಿ.ಸಿ.ವಂದಿಸಿದರು. ಡಾ.ನಿರಂಜನ ಹೊಸಬಾಳೆ ನಿರೂಪಿಸಿದರು.
ನಂತರ ವಿದುಷಿ ಮಾನಸಿ ಸುಧೀರ್ ಮತ್ತು ವಿದ್ವಾನ್ ಸುಧೀರರಾವ್ ನಿರ್ದೇಶನದಲ್ಲಿ ನತ್ಯನಿಕೇತನ ಕೊಡವೂರು ಸಂಸ್ಥೆ ವಿದ್ಯಾರ್ಥಿನಿಯರು ಗಣಪತಿ ಸ್ತುತಿಯ ನಂತರ ಕೃಷ್ಣ ಮತ್ತು ಶಿವನ ಕುರಿತ ನೃತ್ಯರೂಪಕ ಪ್ರದರ್ಶಿಸಿದರು.