ಕನ್ನಡ ಸಾಹಿತ್ಯ ಪರಿಷತ್‌ಚುನಾವಣೆ: ಸಾಹಿತ್ಯಾಸಕ್ತರೆಲ್ಲ ಸೇರಿ ಪ್ರಾಮಾಣಿಕ ಆಯ್ಕೆಗೆ ಮುಂದಾಗೋಣ

441

ಹೊಸನಾವಿಕ
ಚುನಾವಣೆ… ಇದನ್ನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಹುಮತದ ಆಯ್ಕೆ ಪ್ರಕ್ರಿಯೆ ಎನ್ನಬಹುದು.
ರಾಜಕೀಯ ಚುನಾವಣೆಗೂ ಹಾಗೂ ಇತರೆ ಅಭಿವೃದ್ಧಿ ಪರ ಚಿಂತನಾ ಸಂಸ್ಥೆ, ವೇದಿಕೆಗಳಿಗೆ ನಡೆಯುವ ಚುನಾವಣೆಗಳಿಗೂ ಬಹಳಷ್ಠು ವ್ಯತ್ಯಾಸವಿದೆ. ಮುಖ್ಯವಾಗಿ ಇಂದು ಅದನ್ನು ನಾವು ಅರಿಯ ಬೇಕಿದೆ.
ಆದರೆ ಚುನಾವಣೆ ಎಂದಾಕ್ಷಣ ನಮ್ಮ ಕಣ್ಮುಂದೆ ಬರುವುದು ಭ್ರಷ್ಠತೆ , ಧರ್ಮಾಂದತೆ, ವಾಮ ಮಾರ್ಗ, ಅಧಿಕಾರ ಪಿಪಾಸಿತ್ವ , ಹಣ ಸಂಪಾದನೆಯ ಸುಲಭ ಮಾರ್ಗ ಎಂದೇ ಭ್ರಮಿಸಿದ್ದು , ಶೈಕ್ಷಣಿಕ ಸಾಮಾಜಿಕ ಮಾನದಂಡನೆಗಳಿಲ್ಲದಾಗಿವೆ.
ಕನ್ಬಡ ಸಾಹಿತ್ಯ ಪರಿಷತ್ತು ಒಂದು ಭಾಷಾ ಪ್ರೌಢಿಮೆ ಬೆಳೆಸುವ , ಕನ್ನಡ ನಾಡು ನುಡಿ ಸಂಸ್ಕೃತಿ ಶ್ರೇಯೋಭಿವೃಧ್ಧಿಗಾಗಿ ಶ್ರಮಿಸುವ , ಕನ್ನಡಿಗರ ಅಭಿಮಾನ ಗೌರವದ ಪ್ರತೀಕವಾಗಿದ್ದು ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿರುವವರೆಲ್ಲರೂ ಪ್ರಭುದ್ಧತೆ ಹೊಂದಿದವರೇ… ಹಿಂದಿನ ಪರಿಷತ್ತಿನ ಚರಿತ್ರೆ ಅವಲೋಕಿಸಿದಾಗ ಅಧಿಕಾರ ಲಾಲಸೆಯಿಂದ ಮುಕ್ತರಿದ್ದು ನಾಡು ನುಡಯ ಏಳ್ಗೆಗೆ ಪ್ರಾಣ ಕೊಟ್ಟ ಇತಿಹಾಸ ಕಾಣ ಬಹುದಾಗಿದೆ.
ಆದರೆ ಇಂದೇನಾಗಿದೆ ರಾಜಕೀಯ ಚುನಾವಣೆಗಿಂತ ಭಿನ್ನತೆಯೇನೂ ಕಾಣದು. ಹಲವಾರು ತಾಲೂಕು, ಹೋಬಳಿ, ಜಿ ಅಷ್ಢೇ ಏಕೆ , ರಾಜ್ಯ ಹಂತದ ಪರಿಷತ್‌ನಲ್ಲಿ ಸಾಹಿತ್ಯದ ಗಂಧವೇ ಇಲ್ಲದ, ಸಾಹಿತ್ಯ ಕೃತಿಗಳನ್ನೇ ರಚಿಸದ, ಪ್ರಭುದ್ಧತೆಯಿಂದ ಮಾತನಾಡಲು ಬಾರದವರು ಅಧ್ಯಕ್ಷ , ಪಧಾಧಿಕಾರಿಗಳಾಗಿ ಹಣ ಹಾಗೂ ಅಧಿಕಾರ ರಾಜಕೀಯ ಬಲ ಪ್ರದರ್ಶನದಲ್ಲಿ ಕಂಡು ಬರುತ್ತಿರುವುದು ವಿಷಾದನೀಯ ಸಂಗತಿ.
ಇಲ್ಲಿ ಆಸಕ್ತಿ ಹಾಗೂ ಸೇವಾ ಮನೋಭಾವ ಇದ್ದರೆ ಮಾತ್ರ ಪ್ರಗತಿ ಸಾಧ್ಯ. ನನ್ನ ಗಮನಕ್ಕೆ ಬಂದ ಹಾಗೆ ಚುನಾವಣಾ ಸಂದರ್ಭದಲ್ಲಿ ಮನೆಯನ್ನ ಹುಡುಕಿಕೊಂಡು ಬಂದು ಬೇಡಿಕೊಂಡು ಅಧಿಕಾರ ಪಡೆದವರು. ವಿಷೇಶ ಕಾರ್ಯಕ್ರಮಗಳಲ್ಲಿ ತಮ್ಮ ಹಿಂಬಾಲಕರಿಗೆ ಸಾಹಿತ್ಯದ ಅನುಭವ ಇಲ್ಲದ್ದಿದ್ದರೂ ಪ್ರಭಾವ ಮೆರೆಯುವ ಮೂಲಕ ತಾಲೂಕು ಜಿ ಹಾಗೂ ರಾಜ್ಯದ ಕಾರ್ಯಕ್ರಮಗಳಲ್ಲಿ ನೈಜ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಬೆಲೆ ಇಲ್ಲದಾಗಿದೆ. ಪರಿಷತ್ತಿನ ಹಣ ಬಂದರೆ ಮಾತ್ರ ಕಾರ್ಯಕ್ರಮ ಇಲ್ಲದಿದ್ದರೆ ಇಲ್ಲ. ಅದೂ ಕೇವಲ ಕಾಟಾಚಾರಕ್ಕೆಂಬಂತೆ ನಡೆಸಿದ ಉದಾಹರಣೆಗಳು ಸಾಕಷ್ಠಿವೆ. ಹಾಗಾಗಬಾರದು.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಘೋಷಣೆಯಾಗಿದೆ. ನಿಜವಾದ ಸಾಹಿತಿ ಹಾಗೂ ಸಾಹಿತ್ಯಾಸಕ್ತರು ಯೋಗ್ಯ ಹಾಗೂ ಸಾಹಿತ್ಯ ಮತ್ತು ಸಾಹಿತಿಗಳ ಅಭ್ಯುದಯಕ್ಕೆ ಶ್ರಮಿಸುವ, ಸೇವಾ ಮನೋಭಾವ ಹೊಂದಿದವ ಪ್ರಾಮಾಣಿಕ ವ್ಯಕ್ತಿಯನ್ನು ಆರಿಸುವ ಹೊಣೆ ನಮ್ಮದು. ಈ ನಿಟ್ಟಿನಲ್ಲಿ ನಾವು ನೀವು ಪ್ರಾಮಾಣಿಕವಾಗಿ ಪ್ರಯತ್ತಿಸೋಣ.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ನ ಉಮೇದುವಾರಿಕೆಯ ಆಕಾಂಕ್ಷಿಗಳಾಗಿ ನಾಡೋಜ ಡಾ|ಮಹೇಶ್ ಜೋಷಿಯವರು ಚಿರಪರಿಚಿತರು. ಚಂದನವಾಹಿನಿಯ ನಿರ್ದೇಶಕರಾಗಿ, ರಾಜ್ಯದ ಉನ್ನತ ಹುzಗಳಲ್ಲಿ ಸೇವೆ ಸಲ್ಲಿಸಿ, ಸಾಮಾನ್ಯರೊಂದಿಗೆ ಬೆರೆತು ಕನ್ನಡ ತಾಯಿ ಭುವನೇಶ್ವರಿಯ ಸೇವೆಮಾಡಿದವರು. ಈಗಾಗಲೇ ಒಂದು ವರ್ಷದಿಂದಲೇ ಸರ್ವ ಸಾಹಿತಿ ಕವಿ ಮನಗಳನ್ನು ಮತ್ತು ಪರಿಷತ್ತಿನ ಸದಸ್ಯರನ್ನು ತಲುಪುವ ಹಾಗೂ ಪ್ರಾಮಾಣಿಕ ಸೇವೆಗೆ ಅವರ ಹೃದಯಾಂತರದ ಭಾವನೆಯಿಂದ ಅವಕಾಶ ಕೋರಿರುತ್ತಾರೆ.
ಹಾಗೇನೇ ನಮ್ಮ ಬಳ್ಳಾರಿ ಜಿಯಲ್ಲೂ ಈ ಬಾರಿ ಮಹಿಳಾ ಆಕಾಂಕ್ಷಿಯಾಗಿ ಸಾಹಿತಿ, ಉಪನ್ಯಾಸಕಿ, ಸರಳ ಸಜ್ಜನಿಕೆಯ ಸಹೋದರಿ ಶ್ರೀಮತಿ ವಿನೋದಾಕರ್ಣಂ ಆಸಕ್ತರಿzರೆ ಎಂಬುದು ಸಂತಸದ ಸಂಗತಿ. ಮಹಿಳೆಯರಿಗೂ ಒಂದು ಅವಕಾಶ ಹಾಗೂ ಆದ್ಯತೆ ನೀಡುವುದರಲ್ಲಿ ತಪ್ಪಿಲ್ಲ.
ಈಗಾಗಲೇ ಕನ್ನಡಪರ ಸಾಕಷ್ಟು ಸಂಘಟಣೆ, ಸಂಸ್ಥೆಗಳಲ್ಲಿ ಸಾಹಿತ್ತಿಕವಾಗಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದು , ಹಲವಾರು ಸಾಹಿತ್ಯ ಕೃತಿಗಳ ಅರ್ಪಣೆ ಮಾಡಿರುವರು. ಹೋರಾಟದ ಮನೋಭಾವನೆ.. ಸಂಘಟನಾ ಚತುರತೆ .. ಕಾರ್ಯಕ್ರಮಗಳ ಆಯೋಜನಾ ಚತುರತೆ.., ಸಮಾನ ಮನಸ್ಥಿತಿ ಹೊಂದಿದ್ದು ಗಣಿನಾಡಿನಲ್ಲಿ ಸಾಹಿತ್ಯದ ಪರಿಮಳವ ಪಸರಿಸುವ ಮೂಲಕ ಅಮೂಲ್ಯ ಸೇವೆ ಮಾಡ ಬಹುದೆಂಬ ಆಶಯ ನನ್ನದು.
ಉತ್ತಮ ಸಾಹಿತಿ, ಸೇವಾಭಾವದ ವ್ಯಕ್ತಿಗಳನ್ನು ಆರಿಸು ಮೂಲಕ ತಾಯಿ ಭುವನೇಶ್ವರಿ ಸೇವೆಗೆ ಅವಕಾಶ ಮಾಡಿ ಕೊಡೋಣ. ಶುಭವಾಗಲಿ..