ಕನ್ನಡಿಗ ವಿಜಯ್‌ರಿಗೆ ಶಿವಮೊಗ್ಗ ಐಎಫ್‌ಎಸ್‌ಎಂಎನ್‌ನಿಂದ ಅಭಿಮಾನದ ಸನ್ಮಾನ

451

ಬೆಂಗಳೂರು: ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ (ರಿ), ನವದೆಹಲಿಯ ೩೫ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಹಾಗೂ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಹಾಪ್ರಧಾನ ಕಾರ್ಯದರ್ಶಿಗಳ ಚುನಾವಣೆಯು ಇಲ್ಲಿನ ಗಾಂಧಿ ಭವನದ ಕಸ್ತೂರ್ಬಾ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಳ್ಳಲು ವಿವಿಧೆ ಡೆಗಳಿಂದ ಬಂದಿದ್ದ ಎಲ್ಲಾ ಪತ್ರಕರ್ತರಿಗೆ ಕೋವಿಡ್-೧೯ ರ್‍ಯಾಪಿಡ್ ಟೆಸ್ಸ್ ನಡೆಸಲಾಯಿತು.
ವಾರ್ಷಿಕ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಸರ್ವ ಸದಸ್ಯರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯಲಾಯಿತು. ನಂತರ ಚುನಾವಣಾ ಪ್ರಕ್ರಿಯೆಗಳು ಆರಂಭವಾಯಿತು. ಅಧ್ಯಕ್ಷರಾಗಿ ಸರಳ ಸಜ್ಜನಿಕೆ ವ್ಯಕ್ತಿತ್ವದ ಹಿರಿಯ ಪತ್ರಕರ್ತ ಬೆಂಗಳೂರಿನ ಬಿ.ಜಿ. ವಿಜಯ್ ಹಾಗೂ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ಗುಜರಾತ್‌ನ ಲಕ್ಷ್ಮಣ್ ಪಟೇಲ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಜೀವನ್ ಪಿ.ಡಿ. ಸ್ಟೀಫನ್ ಅವರು ಇವರುಗಳ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ಅಧ್ಯಕ್ಷ ಸ್ಥಾನಕ್ಕೆ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಜನಾರ್ಧನ್ ಅವರು ನಾಮಪತ್ರ ಸಲ್ಲಿಸಿದ್ದು, ಅವರ ನಾಮಪತ್ರ ಕ್ರಮಬದ್ಧವಾಗಿರದೇ ಇದ್ದ ಕಾರಣದಿಂದಾಗಿ ಅದು ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಇಬ್ಬಾಗವಾಗಿದ್ದ ಬಲಿಷ್ಠ ಸಂಘಟನೆ:
ಸಣ್ಣ ಮತ್ತು ಮದ್ಯಮ ಪತ್ರಿಕೆಗಳ ಮಾಲೀಕರು, ಸಂಪಾದಕರು ಹಾಗೂ ಪ್ರಕಾಶಕರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಸ್ಥಾಪನೆಗೊಂಡಿದ್ದ ಈ ಒಕ್ಕೂಟವು ಆರಂಭದಿಂದಲೂ ಯಶಸ್ವಿ ಯಾಗಿ ಕಾರ್ಯನಡೆಸುತ್ತಿತ್ತು. ಆದರೆ ಇತ್ತೀಚೆಗೆ ನಾನಾ ಕಾರಣಗಳಿಂದ ಇಬ್ಭಾಗವಾಗುವ ಮೂಲಕ ಒಡೆದ ಮನೆಯಂತಾಗಿತ್ತು. ಎರಡೂ ಬಣಗಳ ಪ್ರಮುಖರು ಹಲವಾರು ಸುತ್ತಿನ ಮಾತುಕತೆಯ ನಂತರ ಇಬ್ಬಾಗವಾಗಿದ್ದ ಪ್ರತಿಷ್ಠಿತ ಸಂಘಟನೆಯು ಒಂದುಗೂಡಿದೆ ಎಂದು ನೂತನವಾಗಿ ಆಯ್ಕೆಯಾದ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ. ವಿಜಯ್ ಅವರು ಸಭೆಯಲ್ಲಿ ಘೋಷಣೆ ಮಾಡಿದರು.
ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟವು ಒಂದಾಗಿರುವ ಈ ಶುಭಸಂದರ್ಭದಲ್ಲಿ ಜನವರಿ ತಿಂಗಳ ೩ನೇ ವಾರದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲು ಸಭೆಯಲ್ಲಿ ನಿರ್ಧರಿಸ ಲಾಗಿದ್ದು, ಇದರ ಉಸ್ತುವಾರಿಯನ್ನು ಹಿರಿಯ ಸದಸ್ಯ ಹ್ಯಾರಿ ಡಿಸೋಜ ಸೇರಿದಂತೆ ಕೆಲ ಪ್ರಮುಖ ಸದಸ್ಯರಿಗೆ ವಹಿಸಲಾಯಿತು.
ಈ ಹಿಂದೆ ಕೆಲವರ ದುಡುಕಿನ ನಿರ್ಧಾರಗಳು ಹಾಗೂ ಸಂಘ ವಿರೋಧಿ ಚಟುವಟಿಕೆಗಳಿಂದಾಗಿ ಬಲಿಷ್ಠವಾಗಿದ್ದ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ಇಬ್ಬಾಗವಾಗಿದ್ದ ಕಾರಣದಿಂದ ಪತ್ರಕರ್ತರಿಗೆ ಸರ್ಕಾರದಿಂದ ದೊರಬೇಕಿದ್ದ ಹತ್ತು ಹಲವು ಸವಲತ್ತುಗಳು ಕೈತಪ್ಪಿದ್ದು, ಇದೀಗ ಸಮಾನ ಮನಕ್ಕರ ಸತತ ಪ್ರಯತ್ನ ದಿಂದಾಗಿ ಒಡೆದ ಮನೆಯಂತಿದ್ದ ಒಕ್ಕೂಟವು ಒಂದಾಗಿದೆ ಎಂದ ರಾಷ್ಟ್ರೀಯ ಅಧ್ಯಕ್ಷರು, ಮುಂದಿನ ದಿನ ಗಳಲ್ಲಿ ಎಲ್ಲರೂ ಒಟ್ಟಾಗಿ ಪತ್ರಕರ್ತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸೋಣ ಎಂದರು.
ಶಿಸ್ತು ಸಮಿತಿ ರಚನೆಗೆ ನಿರ್ಧಾರ:
ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ಯಾವುದೇ ಸದಸ್ಯರು/ ಪದಾಧಿಕಾರಿಗಳು ಶಿಸ್ತು ಮೀರಿದರೆ ಅವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಭಿನಂದನೆ:
ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ನೂತನ ಸಾಲಿನ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬಿ.ಜಿ. ವಿಜಯ್ ಅವರನ್ನು ಶಿವಮೊಗ್ಗ ಘಟಕದ ಅಧ್ಯಕ್ಷ ರಾಕೇಶ್ ಡಿಸೋಜ ಹಾಗೂ ಪ್ರಧಾನ ಕಾರ್ಯದರ್ಶಿ ಷಡಾಕ್ಷರಪ್ಪ ಅವರ ನೇತೃತ್ವದಲ್ಲಿ ಮೈಸೂರು ಪೇಟ, ಶಾಲು ಹಾಗೂ ಹೂ ಗುಚ್ಚ ನೀಡಿ ಆತ್ಮೀಯವಾಗಿ ಅಭಿನಂದಿಸಲಾಯಿತು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಘಟಕದ ಪ್ರಮುಖರಾದ ವೆಂಕಟೇಶ್‌ಮೂರ್ತಿ, ಲಿಯೋ ಅರೋಜ, ಗಣೇಶ್ ಬಿಳಗಿ, ಶಿವಕುಮಾರ್ (ಅಗ್ನಿ ಶಿವು), ಅರುಣ್‌ಕುಮಾರ್, ಪಿಯುಸ್ ರೋಡ್ರಿಗಸ್, ನಾಗರಾಜು, ನಗರ ರಾಘವೇಂದ್ರ, ಪ್ರಶಾಂತ್, ಶೇಖಬ್ಬ, ವಿಜಯಕುಮಾರ್, ಕಮಲಾಕ್ಷ ಎಸ್.ಡಿ, ತೀರ್ಥೇಶ್, ವಿಜಯ್‌ಶಂಕರ್, ವೀರೇಶ್ ಮೂರ್ತಿ, ಮಂಜಪ್ಪ ಸೇರಿದಂತೆ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.
ಘಟಕಗಳ ವಿಸರ್ಜನೆ:
ಐಎಫ್‌ಎಸ್‌ಎಂಎನ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಜಿ. ವಿಜಯ್ ಅವರು ರಾಷ್ಟ್ರದಾ ದ್ಯಂತ ಇರುವ ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜಿಸಿರುವು ದಾಗಿ ಘೋಷಿಸಿದರು.ಮುಂದಿನ ೧೫ ದಿನದೊಳಗೆ ರಾಷ್ಟ್ರೀಯ ಘಟಕದ ಪದಾಧಿಕಾರಿಗಳ ನೇಮಕ ಮಾಡಿ ನಂತರದ ದಿನಗಳಲ್ಲಿ ಭಾರತದಾದ್ಯಂತ ಎಲ್ಲಾ ರಾಜ್ಯದ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗು ವುದು ಎಂದು ತಿಳಿಸಿದರು.