ಕನ್ನಡದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಗೆದ್ದ ಕನ್ನಡಿಗ ದರ್ಶನ್…

513

ಹಾಸನ: ಕನ್ನಡದ ಯುಪಿಎಸ್‌ಸಿ ಪರೀಕ್ಷೆ ಬರೆದ ಹಾಸನದ ಯುವಕ ೫೯೪ನೇ ರ್‍ಯಾಂಕ್ ಪಡೆದು ಜಿಗೆ ಕೀರ್ತಿ ತಂದಿದ್ದಾನೆ.
ಜಿಯ ಅರಸೀಕೆರೆ ತಾಲೂಕಿನ ಹರಳಕಟ್ಟೆ ಗ್ರಾಮದ ಯುವಕ ದರ್ಶನ್ ೫೯೪ನೇ ರ್‍ಯಾಂಕ್ ಪಡೆದು ಯುಪಿಎಸ್‌ಸಿ ಪರೀಕ್ಷೆ ಪಾಸ್ ಆಗಿzನೆ. ದರ್ಶನ್ ಒಂದರಿಂದ ನಾಲ್ಕನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿದ್ದು, ನಂತರ ೫ನೇ ತರಗತಿಯಿಂದ ೮ನೇ ತರಗತಿವರೆಗೆ ರಾಷ್ಟ್ರೋತ್ತಾನ ಶಾಲೆಯಲ್ಲಿ ಓದಿದ್ದು, ೯ ಮತ್ತು ೧೦ನೇ ತರಗತಿ ತಿಪಟೂರಿನ ಎಸ್‌ವಿಪಿ ಶಾಲೆಯಲ್ಲಿ ವ್ಯಾಸಂಗ ಮಾಡಿzನೆ.
೨೦೦೯ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ ದರ್ಶನ್, ಇನ್ಫೋಸಿಸ್‌ನಲ್ಲಿ ಸುಮಾರು ಆರು ವರ್ಷ, ಎರಡೂವರೆ ವರ್ಷ ಅಮೆರಿಕಾದಲ್ಲೂ ಕೆಲಸ ಮಾಡಿzರೆ. ಇತ್ತೀಚೆಗೆ ಕೆಲಸ ಬಿಟ್ಟು ಯುಪಿಎಸ್‌ಸಿ ತಯಾರಿ ನಡೆಸಿದ್ದರು.
ಇದೀಗ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡು ವಲ್ಲಿ ದರ್ಶನ್ ಸಫಲರಾಗಿzರೆ. ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಮಾಧ್ಯಮದ ಓದಿದ್ದ ದರ್ಶನ್, ಈ ಬಾರಿ ಯುಪಿಎಸ್‌ಸಿ ಆಯ್ಕೆಯಾದವರಲ್ಲಿ ಕನ್ನಡದ ಪರೀಕ್ಷೆ ಬರೆದು ಆಯ್ಕೆಯಾದ ಏಕೈಕ ಪ್ರತಿಭಾನ್ವಿತರಾಗಿದ್ದಾರೆ.