ಕಣ್ಣೂರು ಬಹಿರಂಗ ಕ್ಷಮೆಯಾಚಿಸದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ

484

ಸಾಗರ : ತಾಲ್ಲೂಕಿನ ಸಿಗಂದೂರು ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರಿಂದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕಿಕ್‌ಬ್ಯಾಕ್ ಪಡೆದಿzರೆ ಎಂದು ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾಡಿರುವ ಆರೋಪ ನಿರಾಧಾರವಾದದ್ದು ಎಂದು ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗದ ನಾಗರಾಜಸ್ವಾಮಿ ತಿಳಿಸಿzರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗೋಪಾಲಕೃಷ್ಣ ಬೇಳೂರು ಸಿಗಂದೂರು ದೇವಸ್ಥಾನದ ಧರ್ಮ ದರ್ಶಿಗಳು ಮತ್ತು ಪ್ರಧಾನ ಅರ್ಚಕ ರಿಂದ ಯಾವುದೆ ಹಣ ಪಡೆದಿಲ್ಲ ಎಂದು ಸಿಗಂದೂರು ದೇವಿಯ ಎದುರು ಪ್ರಮಾಣ ಮಾಡಲು ಸಿದ್ದರಿ zರೆ ಎಂದರು.
ಮಾಜಿ ಶಾಸಕರಾದ ಬೇಳೂರು ಅವರ ವಿರುದ್ದ ಸುಳ್ಳು ಆರೋಪ ಮಾಡಿರುವ ಎಪಿಎಂಸಿ ಅಧ್ಯಕ್ಷ ಚೇತನರಾಜ್ ಮತ್ತು ಅವರ ಜೊತೆ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದು, ಬೇಳೂರು ಕಿಕ್‌ಬ್ಯಾಕ್ ಪಡೆದಿzರೆ ಎಂದು ಸಮರ್ಥಿಸಿಕೊಂಡಿರುವ ಬಿಜೆಪಿ ನಗರ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಸೇರಿದಂತೆ ಎಲ್ಲರೂ ಸಿಗಂದೂರು ದೇವಸ್ಥಾನಕ್ಕೆ ಬಂದು ಬೇಳೂರು ಹಣ ಪಡೆದಿzರೆ ಎಂದು ಪ್ರಮಾಣ ಮಾಡುವಂತೆ ಸವಾಲು ಹಾಕಿದರು.
ಮಾಜಿ ಶಾಸಕ ಬೇಳೂರು ವಿರುದ್ದ ಆರೋಪ ಮಾಡುವ ನೈತಿಕತೆ ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಅವರಿಗೆ ಇಲ್ಲ. ಅವರು ರಾಜಕೀಯದಲ್ಲಿ ಇನ್ನೂ ಎಳಸು. ಚೇತನರಾಜ್ ಕಣ್ಣೂರು ತಕ್ಷಣ ಸಾರ್ವಜನಿಕವಾಗಿ ಗೋಪಾಲಕೃಷ್ಣ ಬೇಳೂರು ಬಳಿ ಕ್ಷಮೆ ಕೋರದೆ ಹೋದಲ್ಲಿ ಅವರ ಮನೆ ಮತ್ತು ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ. ಚೇತನರಾಜ್ ಕಣ್ಣೂರು ಅವರ ಹೇಳಿಕೆ ವಿರುದ್ದ ಕಾನೂನು ಸಮರದ ಜೊತೆಗೆ ಸಿಗಂದೂರು ದೇವಿಯ ಮೊರೆ ಹೋಗಲಾಗುತ್ತದೆ ಎಂದು ತಿಳಿಸಿದರು.
ಅಭಿಮಾನಿ ಬಳಗದ ಇನ್ನೋರ್ವ ಮುಖಂಡ ಅಶೋಕ್ ಬೇಳೂರು ಮಾತನಾಡಿ, ಗೋಪಾಲಕೃಷ್ಣ ಬೇಳೂರು ಅವರಿಗೆ ದೇವಸ್ಥಾನಗಳಿಂದ ಕಿಕ್‌ಬ್ಯಾಕ್ ಪಡೆಯುವಷ್ಟು ಹೀನಾಯ ಸ್ಥಿತಿ ಬಂದಿಲ್ಲ. ಚೇತನರಾಜ್ ಕಣ್ಣೂರು ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ತಮ್ಮ ನಾಯಕರನ್ನು ಸಂತಪ್ತಗೊಳಿಸಲು ಇಂತಹ ಸುಳ್ಳು ಆರೋಪ ಹೊರಿಸುತ್ತಿzರೆ. ಗೋಪಾಲಕಷ್ಣ ಅವರು ಎರಡು ಅವಧಿಯಲ್ಲಿ ಶಾಸಕರಾಗಿzಗ ಮತ್ತು ಶಾಸಕರು ಅಲ್ಲದೇ ಇzಗಲೂ ಸಾವಿರಾರು ಕುಟುಂಬಗಳ ನೆರವಿಗೆ ನಿಂತಿzರೆ. ತಮ್ಮ ಸ್ವಂತ ಹಣದಲ್ಲಿ ಸಂಕಷ್ಟದಲ್ಲಿರುವ ಜನರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿಕೊಂಡು ಬಂದಿzರೆ. ಕಿಕ್‌ಬ್ಯಾಕ್ ಪಡೆದಿzರೆ ಎನ್ನುವ ಸುಳ್ಳು ಆರೋಪ ಮಾಡಿರುವ ಚೇತನರಾಜ್ ಕಣ್ಣೂರು ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಯಶವಂತ ಪಣಿ, ರಮೇಶ್ ಚಂದ್ರಗುತ್ತಿ, ಜಗದೀಶ್ ಕುರಡೇಕರ್, ಸೋಮಶೇಖರ್ ವೀರಾಪುರ, ಜಯರಾಮ್ ಸೂರನಗz, ಕಿರಣ್ ದೊಡ್ಮನಿ, ಸುಧೀರ್ ಇನ್ನಿvರರಿದ್ದರು.