ಒಂಟಿಯಾದ ಹೊಟ್ಯಾಪುರ ಪೂಜ್ಯರು

452

ಹೊನ್ನಾಳಿ: ರಾಂಪುರ ಮತ್ತು ಹೊಟ್ಯಾಪುರ ಮಠಗಳು ಕೂದಳತೆ ಯ ಇದ್ದು, ಈ ಎರಡೂ ಮಠದ ಪೂಜ್ಯರು ಯಾವಾಗಲು ಒಟ್ಟೊಟ್ಟಾಗಿ ಇರುತ್ತಿದ್ದುದನ್ನು ಕಂಡು ಪೂಜ್ಯದ್ವಯರು ಧಾರ್ಮಿಕ ಜೋಡೆತ್ತುಗಳೆಂದೆ ಈ ಭಾಗದಲ್ಲಿ ಗುರುತಿಸಿಕೊಂಡಿದ್ದರು.
ಶ್ರೀ ವಿಶ್ವೇಶ್ವರ ಶಿವಾಚಾರ್ಯರ ಅಂತ್ಯಸಂಸ್ಕಾರದ ನಂತರ ಮಾರ್ಗ ಮಧ್ಯದಲ್ಲಿದ್ದ ಪ್ರಸಿದ್ದ ಹೊಟ್ಯಾಪುರ ಹಿರೇಮಠಕ್ಕೆ ನಮ್ಮ ಹೊಸನಾವಿಕ ಪತ್ರಿಕಾ ತಂಡ ಭೇಟಿ ನೀಡಿ, ಅಲ್ಲಿರುವ ಪೂಜ್ಯರ ದರ್ಶನಾಶೀರ್ವಾದದ ನಂತರ ಸ್ವಾಮೀಜಿಯವರ ಪೋಟೋ ಕ್ಲಿಕ್ಕಿಸಿzರೆ.
ಪೂಜ್ಯ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ಅಂತ್ಯ ಕ್ರಿಯೆ ಮುಗಿದು ಸರಿಸುಮಾರು ೬ ಗಂಟೆಯಾಗಿದ್ದರೂ ಸಹಾ ಹೊಟ್ಯಾಪುರದ ಗುರುಗಳು ತಮ್ಮ ಸ್ನೇಹಿತರೂ ಅತ್ಯಂತ ಆತ್ಮೀಯರೂ ಆಗಿದ್ದ ವಿಶ್ವೇಶ್ವರ ಶಿವಾಚಾರ್ಯರ ದಿಡೀರ್ ನಿಧನದ ಆಘಾತದಿಂದ ಹೊರಬರದೆ ಅದೇ ಚಿಂತನೆಯಲ್ಲಿ ಮುಳುಗಿದ್ದು ಕಂಡುಬಂದಿತು.
ಗುರುಗಳೇ ಹೇಳಿದಂತೆ ಅವರಿಗೆ ಅಂದು ಸಂಜೆ ೫.೨೦ಕ್ಕೆ ಭಕ್ತರೊಬ್ಬರು ಫೋನ್ ಮಾಡಿ ಬುದ್ದಿ ರಾಂಪುರ ಗುರುಗಳು ಕೊರೊನಾಕ್ಕೆ ಬಲಿಯಾಗಿzರೆ ಎಂದಾಗ ನನ್ನ ಎದೆ ದಸಕ್ ಎಂದಿತು. ನಂಬಲಿಕ್ಕೆ ಸಾಧ್ಯವೇ ಆಗಲಿಲ್ಲ. ನಂತರ ಸುಧಾರಿಸಿಕೊಂಡು ರಾಂಪುರ ಮಠದ ಗುರುಗಳ ಸಹೋದರರಿಗೆ ಪೋನ್ ಮಾಡಿ ತಿಳಿದುಕೊಂಡು ಅಂತ್ಯಕ್ರಿಯೆಗೆ ಸಂಬಂಧಿಸಿದ ಕಾರ್ಯಕೈಗೋಳ್ಳಲು ಮುಂದಾದೆವು ಎಂದು ಭಾವುಕರಾಗಿ ನುಡಿದರು.