ಏ.೧೨: ಅಮವಾಸ್ಯೆ; ೧೩ರಂದು ಚಂದ್ರ ದರ್ಶನ

257

ನ್ಯಾಮತಿ: ಏ.೧೨ರ ಸೋಮ ವಾರ ಅಮಾವಾಸ್ಯೆ ಪೂಜ, ಏ.೧೩ರ ಮಂಗಳವಾರ ಚಂದ್ರ ದರ್ಶನವಾಗ ಲಿದೆ ಎಂದು ಪುರೋಹಿತರಾದ ಎಂ.ಎಸ್. ಶಾಸ್ತ್ರೀಹೊಳೆಮಠ್ ತಿಳಿಸಿzರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಹೊಳೆಮಠ್, ಏ. ೧೧ ರ ಭಾನುವಾರ ಬೆಳಿಗ್ಗೆ ೬.೧೦ ರಿಂದ ಅಮಾವಾಸ್ಯೆ ಪ್ರಾರಂಭವಾಗಲಿದ್ದು ಏ. ೧೨ ರ ಸೋಮವಾರ ಬೆಳಿಗ್ಗೆ ೮ ಗಂಟೆಗೆ ಮುಗಿಯಲಿದೆ. ಏ.೧೩ರ ಮಂಗಳವಾರ ಬೆಳಿಗ್ಗೆ ೧೦.೨೦ಕ್ಕೆ ಯುಗಾದಿ ಪಾಡ್ಯ ಮುಕ್ತಾಯವಾ ಗುತ್ತದೆ. ಅಭ್ಯಂಗ ಸ್ನಾನ ಬೇವು,ಬೆಲ್ಲ ಸಿಹಿ-ಕಹಿ ಸವಿದು ಆಚರಣೆ ಮಾಡಿ ಏ.೧೨ರ ಸೋಮವಾರ ಬೆಳಿಗ್ಗೆ ೮.೧೦ ರಿಂದ ನೂತನ ಪ್ಲವ ನಾಮ ಸಂವತ್ಸರವು ಆರಂಭಗೊಳ್ಳಲಿದ್ದು ಏ.೧೩ರ ಮಂಗಳವಾರ ಸಂಜೆ ೬.೪೫ ಚಂದ್ರದರ್ಶನವಾಗಲಿದೆ ಎಂದು ತಿಳಿಸಿದ್ದಾರೆ.
ಯುಗಾದಿ ಪೂಜ ಮೂಹೂರ್ತ ಏ.೧೩ರ ಮಂಗಳವಾರ ನೂತನ ಪ್ಲವ ನಾಮ ಸಂವತ್ಸರ ಆರಂಭಗೊಳ್ಳುತ್ತಿದ್ದು ವಿವಿಧ ಮಠ, ದೇವಾಲಯಗಳಲ್ಲಿ ಧ್ವಜರೋಹಣ ಪಂಚಾಗ ಶ್ರವಣ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಇದನ್ನು ಗಮನಿಸ ಬೇಕೆಂದು ಪುರೋಹಿತರಾದ ಶಾಸ್ತ್ರೀ ಹೊಳೆಮಠ್ ತಿಳಿಸಿzರೆ.