ಏ.೧೦ ರಿಂದ ಮೈಸೂರು-ತಾಳುಗುಪ್ಪ ಮತ್ತೊಂದು ಹೊಸ ರೈಲು ಸಂಚಾರ

302

ಶಿವಮೊಗ್ಗ: ಮೈಸೂರಿನಿಂದ ತಾಳುಗುಪ್ಪಕ್ಕೆ ಮತ್ತೊಂದು ಹೊಸ ರೈಲು ಸಂಚರಿಸಲಿದೆ. ಏ.೧೦ ರಿಂದ ಈ ರೈಲಿನ ಸೇವೆ ಲಭ್ಯವಾಗಲಿದ್ದು, ಏ.೧೦ರ ಬೆಳಿಗ್ಗೆ ೧೦.೧೫ಕ್ಕೆ ಮೈಸೂರು ಬಿಡಲಿದ್ದು, ಸಂಜೆ ೩-೩೫ಕ್ಕೆ ಶಿವಮೊಗ್ಗ ತಲುಪಲಿದೆ. ೩-೫೦ಕ್ಕೆ ಶಿವಮೊಗ್ಗ ಬಿಡಲಿದ್ದು, ಸಂಜೆ ೬ಗಂಟೆಗೆ ತಾಳುಗುಪ್ಪ ಸೇರಲಿದೆ
ಮರುದಿನ ಬೆಳಿಗ್ಗೆ ೮.೪೫ಕ್ಕೆ ತಾಳಗುಪ್ಪ ರೈಲ್ವೆ ನಿಲ್ದಾಣ ಬಿಡಲಿದ್ದು, ೧೦.೫೫ಕ್ಕೆ ಶಿವಮೊಗ್ಗ ತಲುಪಲಿದೆ. ೧೧.೧೦ಕ್ಕೆ ಶಿವಮೊಗ್ಗ ನಿಲ್ದಾಣ ಬಿಡುವ ಈ ರೈಲು ಸಂಜೆ ೪.೫೦ ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಹೊರಡುವ ರೈಲು ೦೬೨೨೫ ಸಂಖ್ಯೆಯಾಗಿದ್ದರೆ, ತಾಳುಗುಪ್ಪದಿಂದ ಹೊರಡುವ ರೈಲಿನ ಸಂಖ್ಯೆ ೦೬೨೨೬ ಆಗಿದೆ.
ಮೈಸೂರಿನಿಂದ ಹೊರಡುವ ರೈಲು ಕೆ.ಆರ್.ನಗರ, ಬೀರನಹಳ್ಳಿ, ಮಂದಕೆರೆ, ಹೊಳೆನರಸೀಪುರ, ಹಾಸನ, ಬಾಣಾವರ, ದೇವನೂರು, ಕಡೂರು, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಹಳೇ ನಿಲ್ದಾಣ(ವಿದ್ಯಾನಗರ), ಶಿವಮೊಗ್ಗದ ಹೊಸ ನಿಲ್ದಾಣ ತಲುಪಲಿದೆ. ಶಿವಮೊಗ್ಗದಿಂದ ಹೊರಡುವ ರೈಲು, ಹಾರನಹಳ್ಳಿ, ಕುಂಸಿ, ಅರಸನಾಳು, ಆನಂದಪುರಂ, ಸಾಗರ ಜಂಬಗಾರು ಮೂಲಕ ತಾಳಗುಪ್ಪ ಸೇರಲಿದೆ.
ಎಕ್ಸ್ ಪ್ರೆಸ್ ರೈಲು ಇದಾಗಿದ್ದರೂ ಸಹ ಪ್ರಯಾಣಿಕರಿಗೆ ಈ ರೈಲಿನಲ್ಲಿ ಸಂಚರಿಸಲು ನಿಲ್ದಾಣಗಳಲ್ಲಿಯೇ ಟಿಕೇಟ್ ದೊರೆಯಲಿದೆ. ಆದರೆ ಮೊದಲ ಫೇಸ್‌ನ ನಿಲ್ದಾಣಗಳಲ್ಲಿ ಕನಿಷ್ಠ ೩೦ ರೂ. ನಿಗದಿಪಡಿಸಲಾಗಿದೆ. ಅಲ್ಲದೆ ಈ ರೈಲಿಗೆ ಮಕ್ಕಳಿಗೆ, ಹಿರಿಯ ನಾಗರೀಕರಿಗೆ ಯಾವುದೇ ಪ್ರಯಾಣ ದರದಲ್ಲಿ ವಿನಾಯಿತಿಗಳಿರುವುದಿಲ್ಲ. ಎಲ್ಲರಿಗೂ ಒಂದೇ ದರ ನಿಗದಿ ಪಡಿಸಲಾಗಿದೆ. ಶಿವಮೊಗ್ಗದಿಂದ ಮೈಸೂರಿಗೆ ದರ ೧೧೦ ರೂ ನಿಗದಿಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.