ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ ಚಿಕ್ಕಬಳ್ಳಾಪುರ ಫಸ್ಟ್, ಬಾಲಕಿಯರೇ ಬೆಸ್ಟ್

458

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿzರೆ.
ಕೋವಿಡ್ ಸಂಕಷ್ಟದಿಂದಾಗಿ ಪೂರ್ವ ನಿಗದಿತ ಪರೀಕ್ಷೆ ಮುಂದೂಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಇವೆಲ್ಲದರ ನಡುವೆ ಇಂದು ರಾಜ್ಯದಲ್ಲಿ ಒಟ್ಟಾರೆ ಶೇ.೭೧.೮೦ರಷ್ಟು ಫಲಿತಾಂಶ ಬಂದಿದೆ.
ಒಟ್ಟು ೫,೮೨,೩೧೬ ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದು, ಆರು ವಿದ್ಯಾರ್ಥಿಗಳು ೬೨೫ ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿzರೆ. ಜಿ.ಕೆ.ಅಮೋಘ್, ಚಿರಾಯು, ನಿಖಿಲೇಶ್, ಮಂಡ್ಯದ ರಜ್ ಕಡ್ಡಿ, ಸುಳ್ಯದ ಅನುಷ್, ಚಿಕ್ಕಮಗಳೂರಿನ ತನ್ಮಯ್ ೬೨೫ ಅಂಕಗಳನ್ನು ಗಳಿಸಿ ಟಾಪರ್‌ಗಳಾಗಿzರೆ.
ಈ ಬಾರಿ ಎ, ಬಿ, ಸಿ ಎಂದು ಜಿಗಳ ಫಲಿತಾಂಶವನ್ನು ವರ್ಗೀಕರಿಸಲಾಗಿದೆ. ೧೧ ವಿದ್ಯಾರ್ಥಿ ಗಳು ೬೨೪ ಅಂಕ ಪಡೆದಿದ್ದರೆ, ೪೩ ವಿದ್ಯಾರ್ಥಿಗಳು ೬೨೩ ಅಂಕ ಪಡೆದಿzರೆ. ಜಿವಾರು ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಪ್ರಥಮ ಸ್ಥಾನವನ್ನು ಬೆಂಗಳೂರು ಗ್ರಾಮಾಂತರ, ದ್ವಿತೀಯ ಸ್ಥಾನವನ್ನು ಮಧುಗಿರಿ ತತೀಯ ಸ್ಥಾನ ಪಡೆದಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ನಗರ ಪ್ರದೇಶದಲ್ಲಿ ಶೇ.೭೩.೪೧, ಗ್ರಾಮೀಣ ಪ್ರದೇಶದಲ್ಲಿ ೭೭.೪೮, ಕನ್ನಡದ ಮಾಧ್ಯಮದಲ್ಲಿ ೭೪.೪೯ , ಸರ್ಕಾರಿ ಶಾಲೆಗಳಲ್ಲಿ ೭೨.೭೯ರಷ್ಟು ಫಲಿತಾಂಶ ಬಂದಿದೆ. ಇಂದು ಮಧ್ಯಾಹ್ನ ೩ ಗಂಟೆಗೆ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಪ್ರಕಟಿಸಿದರು.
ವಿದ್ಯಾರ್ಥಿಗಳ ಮೆಬೈಲ್‌ಗೆ ನೇರವಾಗಿ ಫಲಿತಾಂಶ ಬಂದಿದ್ದು, karresults.nic.in / www.karresults.nic.inವೆಬ್‌ಸೈಟ್‌ನಲ್ಲೂ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಕಳೆದ ಜೂ.೨೫ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿ ಜುಲೈ ೩ಕ್ಕೆ ಕೊನೆಗೊಂಡಿತ್ತು. ಈ ಬಾರಿ ೮,೪೮,೧೯೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.