ಎಚ್ಚರ: ಮನೆಯಿಂದ ಹೊರಡುವ ಮುನ್ನ ಹೆಲ್ಮೆಟ್- ಮಾಸ್ಕ್ ಎರಡನ್ನೂ ಮರೆಯದಿರಿ…

592

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ಶಿವಮೊಗ್ಗ: ಕಿಲ್ಲರ್ ಕೊರೋನ ನಿಯಂತ್ರಣದ ಲಾಕ್‌ಡೌನ್ ಹಿನ್ನಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತಷ್ಟು ಆಕ್ಟೀವ್ ಆಗಿದೆ. ಪಾಲಿಕೆಯ ಆರೋಗ್ಯ ಅಧಿಕಾರಿಗಳು ದಿಢೀರ್ ಎಂದು ನಡೆಸಿರುವ ಕಾರ್ಯಾಚರಣೆಗೆ ಸಾರ್ವಜನಿಕರು ಬೆಸ್ತು ಬಿದ್ದಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವಾಗ ಯಾರೂ ಉಗಿಯ ಬಾರದು ಎಂಬ ತಿಳುವಳಿಕೆ ನೋಟೀಸ್‌ನ್ನ ಸಾರ್ವಜನಿಕರಿಗೆ ಪಾಲಿಕೆ ವತಿಯಿಂದ ಈ ಮೊದಲೇ ತಿಳಿಸಲಾಗಿತ್ತು ಎಂದು ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಮಾಧ್ಯಮದ ಮುಂದೆ ಹೇಳಿದ್ದು, ಕೊರೋನ ಹಿನ್ನಲೆಯಲ್ಲಿ ಸರ್ಕಾರ ತಿಳಿಸಿರುವಂತೆ ಸಾರ್ವಜನಿಕ ಸ್ಥಳದಲ್ಲಿ ೫ ರಿಂದ ಹೆಚ್ಚಿನ ಜನ ಇರಬಾರದು, ಸಿಗರೇಟು ಹಾಗೂ ತಂಬಾಕು ಸೇವನೆ ನಿಷೇಧ, ಮಾಸ್ಕ್ ಖಡ್ಡಾಯವಾಗಿ ಧರಿಸಬೇಕೆಂದು ಖಡಕ್ ಸೂಚನೆ ರವಾನಿಸಿರುವ ಪಾಲಿಕೆ ಇಂದು ಕಾರ್ಯಾಚರಣೆಗೆ ಇಳಿದಿದೆ. ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿ ಡಾ. ಮದಕರಿ ನಾಯಕ್ ಕೊರೋನ ನಿಯಮ ಉಲ್ಲಂಘಿಸಿದವರ ವಿರುದ್ಧ ಭರ್ಜರಿಯಾಗಿಯೇ ಭೇಟೆ ಆರಂಭಿಸಿದ್ದಾರೆ.
ಸಾರ್ವಜನಿಕರು ಸೇಫ್ ಆಗಿರಬೇಕೆಂಬ ಉದ್ದೇಶದಿಂದ ಪಾಲಿಕೆ ಈ ಕ್ರಮ ಜರುಗಿಸಿರುವುದಾಗಿ ಹೇಳಿದೆ. ಪಾಲಿಕೆ ಆರೋಗ್ಯ ಅಧಿಕಾರಿ ಡಾ | ಮದಕರಿ ನಾಯಕ್ ರವರ ನೇತೃತ್ವದಲ್ಲಿ, ನಗರದ ಲಕ್ಷ್ಮೀ ಟಾಕೀಸ್, ಗೋಪಿ ಸರ್ಕಲ್, ಶಿವಪ್ಪನಾಯಕ ಸರ್ಕಲ್‌ಗಳಲ್ಲಿ ಪಾಲಿಕೆ ಅಧಿಕಾರಿಗಳು ಬರ್ಜರಿಯಾಗಿಯೇ ಫೀಲ್ಡ್‌ಗೆ ಇಳಿದಿದ್ದು , ಸುಮಾರು ೨೫ ಕ್ಕೂ ಹೆಚ್ಚು ಪ್ರಕರಣಗಳನ್ನ ದಾಖಲಿಸಿ ಅಂದಾಜು ೪ ಸಾವಿರಕ್ಕೂ ಹೆಚ್ಚು ಮೊತ್ತ ಕಲೆಕ್ಟ್ ಮಾಡುವ ಮೂಲಕ ನಗರದ ಟ್ರಾಫಿಕ್ ಪೊಲೀಸರನ್ನೇ ಹಿಂದಿಕ್ಕಿ, ಈ ಭೇಟೆ ಇಂದಿಗೆ ಮುಗಿದಿಲ್ಲ ನಿತ್ಯವೂ ಮುಂದುವರೆಯಲಿದೆ ಎಂಬ ಎಚ್ಚರಿಕೆಯನ್ನ ನೀಡಿದ್ದಾರೆ.
ಅದರಂತೆ ನಾಳೆಯು ಡಾ.ಮದಕರಿ ನಾಯ್ಕ ರವರ ನೇತೃತ್ವದ ತಂಡ ಫೀಲ್ಡ್ ಗೆ ಇಳಿಯಲಿದೆ. ಮಾಸ್ಕ್ ಧರಿಸದಿದ್ದರೆ ಮೊದಲ ಬಾರಿಗೆ ಕೇವಲ ೧೦೦ ರೂ. ಉಗುಳಿದರೆ ೫೦೦ ರೂ. ದಂಡ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಹಾಗೂ ತಂಬಾಕು ಸೇವನೆ ಮಾಡುತ್ತಿದ್ದರೆ ೫೦೦ ದಂಡ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಮೊದಲಿಗೆ ೨೦೦ ರೂ. ದಂಡ ಹಾಗೂ ದಂಡ ತೆತ್ತಿದ ವ್ಯಕ್ತಿ ಮತ್ತೆ ಅದೇ ತಪ್ಪನ್ನ ಮಾಡಿದರೆ ದಂಡದ ಪ್ರಮಾಣ ಡಬಲ್! ನಾಳೆ ಮನೆಯಿಂದ ಕಾಲಿಡುವ ಮುಂಚೆ ಸಾರ್ವಜನಿಕರು ತಮ್ಮ ಜೇಬು ಗಟ್ಟಿ ಇದೆಯೋ ಒಮ್ಮೆ ನೋಡಿಕೊಳ್ಳಬೇಕಿದೆ. ಅತ್ತ ದರಿ ಇತ್ತ ಪುರಿ ಎಂಬಂತೆ ಅತ್ತ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಪೊಲೀಸರು ಇತ್ತ ಕೋವಿಡ್ ರೂಲ್ಸ್ ಬ್ರೇಕ್ ಮಾಡಿದ್ರೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಲು ಕಾಯುತ್ತಿರುತ್ತಾರೆ ಎಚ್ಚರ.