ಉದ್ಯೋಗಖಾತ್ರಿ ಯೋಜನೆ ಬಡಜನರಿಗೆ ಸಂಜೀವಿನಿಯಂತಿದೆ: ಎಂಪಿಆರ್

446

ಹೊನ್ನಾಳಿ: ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ತಲೆದೋರಿ ರುವ ಆರ್ಥಿಕ ಹಿನ್ನಡೆಯ ಸಂದರ್ಭ ದಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಡ ಜನರಿಗೆ ಸಂಜೀವಿನಿಯಂತಿದೆ ಎಂದು ಸಿಎಂ ರಾಜಕೀಯ ಕಾರ್‍ಯದರ್ಶಿ ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ೨.೩೦ ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನೆಲೆ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಹಾಗಾಗಿ, ಗ್ರಾಮೀಣ ಭಾಗಗಳ ಬಡಜನರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆಗೆ ಪ್ರಧಾನಿ ಮೋದಿ ಅವರು ಸಾಕಷ್ಟು ಅನುದಾನ ಒದಗಿಸಿzರೆ. ಖಾತ್ರಿ ಯೋಜನೆಯಡಿ ಕೂಲಿಯ ಪ್ರಮಾಣ ವನ್ನೂ ಹೆಚ್ಚಿಸಿzರೆ. ಇದರಿಂದ ಬಡಜನರಿಗೆ ಹೆಚ್ಚಿನ ಅನುಕೂಲ ವಾಗಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಕೊರೊನಾ ವೈರಸ್ ಸೋಂಕಿನ ವಿರುದ್ಧ ಸಮರ ಸಾರಿzರೆ. ಈ ನಡುವೆಯೇ ೨೦ ಲಕ್ಷ ಕೋಟಿ ರೂ.ಗಳ ಮೆಗಾ ಪ್ಯಾಕೇಜ್ ಘೋಷಿಸಿzರೆ. ಬೆಳೆಗಳಿಗೆ ಬೆಂಬಲ ಬೆಲೆ ನೀಡಿzರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸಮಾಜದ ಪ್ರತಿಯೊಂದು ವರ್ಗಗಳ ಜನರಿಗೂ ೫ ಸಾವಿರ ರೂ.ಗಳ ಧನಸಹಾಯ ಒದಗಿಸಿzರೆ. ಪಿಎಂ ಕಿಸಾನ್ ಸಮ್ಮಾನ್ ಮಾದರಿಯಲ್ಲಿ ಸಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ವಾರ್ಷಿಕ ೪ ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡುತ್ತಿzರೆ. ಲಾಕ್‌ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ತರಕಾರಿ-ಹೂವು ಬೆಳೆಗಾರರಿಗೆ ಪರಿಹಾರ ಧನ ನೀಡಿzರೆ. ಮೆಕ್ಕೆಜೋಳ ಬೆಳೆಗಾರರಿಗೆ ೫ ಸಾವಿರ ರೂ.ಗಳ ಧನಸಹಾಯ ಒದಗಿಸಿzರೆ. ಇಂಥ ಸಂದರ್ಭದಲ್ಲಿ ರಾಜ್ಯದ ಜನತೆ ಸರಕಾರದ ಮಾರ್ಗ ದರ್ಶಿ ಸೂತ್ರಗಳನ್ವಯ ನಡೆದುಕೊಳ್ಳುವ ಮೂಲಕ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಈ ಹಿಂದೆ ಕತ್ತಿಗೆ ಗ್ರಾಮದಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಯಡಿ ೬೨ ಲಕ್ಷ ರೂ.ಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನ ಗೊಳಿಸಲಾಗಿತ್ತು. ೨೭ ಲಕ್ಷ ರೂ.ಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ಸಮುದಾಯ ಭವನಕ್ಕೆ ೬ ಲಕ್ಷ ರೂ.ಗಳನ್ನು ಒದಗಿಸ ಲಾಗಿತ್ತು ಎಂದು ಹೇಳಿದ ಎಂ.ಪಿ. ರೇಣುಕಾಚಾರ್ಯ ಮುಂದಿನ ದಿನಗಳಲ್ಲಿಯೂ ಅಭಿವದ್ಧಿಗೆ ಹೆಚ್ಚಿನ ಅನುದಾನ ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದರು.
ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ೯೫ ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ರೇಣುಕಾಚಾರ್ಯ ಶಂಕುಸ್ಥಾಪನೆ ನೆರವೇರಿಸಿದರು. ೪೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಿಸಿ ರಸ್ತೆ ಉದ್ಘಾಟಿಸಿದರು. ತಾಲೂಕಿನ ದೊಡ್ಡೆರೇಹಳ್ಳಿ ಗ್ರಾಮದಲ್ಲಿ ೧.೮೨ ಕೋಟಿ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿ ಸಿದರು. ತಾಲೂಕಿನ ಮಾದೇನಹಳ್ಳಿ ಗ್ರಾಮದಲ್ಲಿ ೨೫ ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ೩೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ ಸಿಸಿ ರಸ್ತೆಯನ್ನು ಉದ್ಘಾಟಿಸಿದರು. ಜೀನಹಳ್ಳಿ ಗ್ರಾಮದಲ್ಲಿ ೧೫ ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಗುಡ್ಡೇಹಳ್ಳಿ ಗ್ರಾಮದಲ್ಲಿ ೫೦ ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಜಿಪಂ ಸದಸ್ಯ ಎಂ.ಆರ್. ಮಹೇಶ್, ಎಪಿಎಂಸಿ ಅಧ್ಯಕ್ಷ ಕೆಂಚಿಕೊಪ್ಪದ ಜಿ.ಎಸ್. ಸುರೇಶ್, ತಾಪಂ ಪ್ರಭಾರ ಅಧ್ಯಕ್ಷ ಕುಳಗಟ್ಟೆ ಕೆ.ಎಲ್. ರಂಗನಾಥ್, ಸದಸ್ಯರಾದ ಸಿ.ಆರ್. ಶಿವಾನಂದ್, ಗಿರಿಜಮ್ಮ, ನ್ಯಾಮತಿ ತಾಪಂ ಉಪಾಧ್ಯಕ್ಷ ಡಿ. ಮರಿಕನ್ನಪ್ಪ, ಕತ್ತಿಗೆ ಗ್ರಾಪಂ ಸದಸ್ಯರಾದ ಮಾದೇನಹಳ್ಳಿ ಕೆ.ಇ. ನಾಗರಾಜ್, ಕುಬೇರಪ್ಪ, ಶೇಖರಪ್ಪ, ಪಿಡಿಒ ಸುರೇಶ್, ಯು.ಜಿ. ಮೀನಾಕ್ಷಿ, ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಜಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲಹೊನ್ನೆ ಮಂಜುನಾಥ್, ಮುಖಂಡರಾದ ಪಿ. ಬಸವರಾಜಪ್ಪ, ಜೀನಹಳ್ಳಿ ಚನ್ನೇಶ್, ಪರಮೇಶ್ವರಪ್ಪ, ಚಂದ್ರಶೇಖರ್, ಮಹೇಶ್ವರಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಎಂ. ಮಂಜುಳಾ, ಎಚ್.ಇ. ಲತಾ, ಸಹಾಯಕಿ ತಿಮ್ಮೇಶಮ್ಮ, ಆಶಾ ಕಾರ್ಯಕರ್ತೆಯರಾದ ಎಸ್. ರಾಧಮ್ಮ, ವನಜಕ್ಷಮ್ಮ ಮತ್ತಿತರರು ಉಪಸ್ಥಿತರಿದ್ದರು.