ಉತ್ತರ ಪ್ರದೇಶದಲ್ಲಿ ಅತ್ಯಾಚಾರ- ಕೊಲೆ; ಕರ್ನಾಟಕದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಬ್ಬಾಳಿಗೆಗೆ ಖಂಡನೆ

438

ಶಿವಮೊಗ್ಗ: ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅಮಾನುಷವಾಗಿ ಹಲ್ಲೆ ಮಾಡಿ ಕೊಂದ ಪ್ರಕರಣ ವಿರೋಧಿಸಿ ಸಿಟಿಜನ್ ಯುನೈಟೆಡ್ ಮೂವ್‌ಮೆಂಟ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಉತ್ತರ ಪ್ರದೇಶದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಅಲ್ಲಿನ ಪೊಲೀಸ್ ಇಲಾಖೆ ಅವರ ಮೃತದೇಹವನ್ನು ಕುಟುಂಸ್ಥರಿಗೆ ನೀಡುವುದಿರಲಿ, ಯುವತಿಯ ಮುಖವನ್ನು ಸಹ ನೋಡಲು ನೀಡದೆ ರಾತ್ರಿ ೨ ಗಂಟೆ ವೇಳೆಯಲ್ಲಿ ಶವಸಂಸ್ಕಾರ ಮಾಡಿರುತ್ತಾರೆ. ರಾಷ್ಟ್ರದ ಜನತೆ ತಲೆತಗ್ಗಿಸುವಂತಹ ಹೀನಕೃತ್ಯ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರಮುಖವಾಗಿ ಸಾಕ್ಷಿ ನಾಶಪಡಿಸುವ ಹುನ್ನಾರ ಇದಾಗಿದೆ. ಬಿಜೆಪಿ ಆಡಳಿತದ ಯೋಗಿ ಸರ್ಕಾರ ಬಂದ ಮೇಲೆ ಉತ್ತರಪ್ರದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಹೆಚ್ಚಾಗುತ್ತಿದೆ. ಅಧಿಕಾರ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿಯೂ ಕೂಡ ಬಿಜೆಪಿ ಆಡಳಿತವಿದ್ದು ಮುಖ್ಯಮಂತ್ರಿ ಕುಟುಂಬದ ಭ್ರಷ್ಟಾಚಾರ ಬಯಲಿ ಗೆಳೆದ ಖಾಸಗಿ ಟಿವಿ ವಿರುದ್ದ ದರ್ಪ ತೋರಿಸಲಾಗಿದೆ ಮತ್ತು ಛಾನಲ್ ಸರ್ವರ್ ತೆಗೆದು ಕೊಂಡು ಹೋಗಿ ಧ್ವಂಸ ಮಾಡಿರುವುದು ಖಂಡನೀಯ ಎಂದು ದೂರಿದರು.
ಪ್ರತಿಭಟನೆಯಲ್ಲಿ ಶಹರಾಜ್ ಮುಜಾಯಿದ್ ಸಿದ್ದಿಕಿ, ಜಫರುಲ್ಲಾ, ಮೊಹಮ್ಮದ್ ರಫೀ, ಮಹಮ್ಮದ್ ಲಿಕಾಯಿತ್, ತೌಸಿಫ್ ಅಹಮ್ಮದ್ ಸೇರಿದಂತೆ ಹಲವರಿದ್ದರು.