ಉತ್ತರ ಕೋರಿಯಾ ಸರ್ವಾಧಿಕಾರಿ ಕಿಮ್ ಕುರಿತ ವರದಿಗಳು ಇನ್ನೂ ನಿಗೂಢ…

586

ಸಿಯೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಂಗ್ ಉನ್ ಅನಾರೋಗ್ಯ ಮತ್ತು ನಿಗೂಢ ಕಣ್ಮರೆ ಪ್ರಕರಣ ಕಗ್ಗಂಟಾಗಿರುವಾಗಲೇ ಅವರ ವಿಶೇಷ ರೈಲು ರೆಸಾರ್ಟ್ ಬಳಿ ಪತ್ತೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಏಷ್ಯಾದ ಅತ್ಯಂತ ಕ್ರೂರ ವ್ಯಕ್ತಿ ಎಂದೇ ಕುಖ್ಯಾತಿ ಪಡೆದಿರುವ ೩೬ ವರ್ಷದ ಕಿಮ್ ಬದುಕಿದ್ದಾರೆಯೇ ಅಥವಾ ಸತ್ತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿರುವ ಸಂದರ್ಭದಲ್ಲದೆ ಉತ್ತರ ಕೊರಿಯಾದ ಪೂರ್ವ ಕರಾವಳಿ ಪ್ರದೇಶದ ರೆಸಾರ್ಟ್‌ನ ಆವರಣದಲ್ಲಿ ಕಳದೊಂದು ವಾರದಿಂದ ಕಿಮ್ ಅವರ ಸ್ಪೆಷಲ್ ರೈಲು ನಿಂತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.
ಇತ್ತೀಚಿನ ಕೆಲ ದಿನಗಳಿಂದ ಕಿಮ್ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಈ ನಡುವೆ ಯಾವುದೇ ಗಂಭೀರ ರೋಗದಿಂದ ಅವರು ಶಸ್ತ್ರಕ್ರಿಯೆಗೆ ಒಳಗಾದರು. ಸರ್ಜರಿ ನಂತರ ಅವರ ಆರೋಗ್ಯ ಸ್ಥಿತಿ ವಿಷಮವಾಗಿದೆ ಎಂದು ಊಹಾಪೋಹಗಳು ಸೃಷ್ಟಿಯಾಗಿದ್ದವು. ಅಲ್ಲದೆ ಕೆಲ ಮೂಲಗಳ ಪ್ರಕಾರ ಕಿಮ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಕೊರಿಯಾ ವಿದ್ಯಮಾನಗಳನ್ನು ಹೊರ ಜಗತ್ತಿಗೆ ತಿಳಿಸುತ್ತಿರುವ ೩೮ ನಾರ್ತ್ ಎಂಬ ವೈಬ್‌ಸೈಟ್ ಸ್ಯಾಟ್‌ಲೈಟ್ ಇಮೇಜ್ ಗಳನ್ನು ಬಿಡುಗಡೆ ಮಾಡಿದ್ದು, ಈ ಸುದ್ದಿ ಜಲದಲ್ಲಿ ಕಿಮ್ ಆರೋಗ್ಯದ ಬಗ್ಗೆಯಾಗಲಿ ಅಥವಾ ಅವರ ನಾಪತ್ತೆ ಕುರಿತಾಗಲೇ ಯಾವುದೇ ಮಾಹಿತಿ ನೀಡಿಲ್ಲ. ಈ ಕಾರಣದಿಂದಲೇ ಕಿಮ್ ಕುರಿತ ಎಲ್ಲ ಮಾಹಿತಿಗಳೂ ನಿಗೂಢವಾಗಿವೆ.