ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

493

ದಾವಣಗೆರೆ :ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹರಿಹರ ಇಲ್ಲಿ ತಂತ್ರeನ ತರಬೇತಿಗಳ ಸಂಸ್ಥೆಗಳಿಗೆ ನೆರವಿನ ಯೋಜನೆಯಡಿಯಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಲ್ಲಿ ಪ.ಜತಿ/ ಪಂಗಡ ದವರಿಗೆ ಉಚಿತ ತರಬೇತಿ ನೀಡಲಾಗುವುದು.
೧೮ ರಿಂದ ೩೫ ವರ್ಷದೊಳಗಿನ ನಿರುದ್ಯೋಗಿ ಯುವಕ/ಯುವತಿ ಯರಿಗಾಗಿ ಉದ್ಯೋಗಾವಕಾಶ ಕಲ್ಪಿಸಲು ಎಸ್.ಎಸ್.ಎಲ್.ಸಿ./ಐ.ಟಿ.ಐ/ಡಿಪ್ಲೊಮಾ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ೩ ತಿಂಗಳ ಅವಧಿಯ ಸಿಎನ್‌ಸಿ ಟೆಕ್ನಲಾಜಿಸ್ಟ್, ಸಿಎನ್‌ಸಿ ಪ್ರೋಗ್ರಾಂ ಆಪರೇಟರ್ ವರ್ಟಿಕಲ್ ಮಶೀನಿಂಗ್ ಸೆಂಟರ್/ಕನ್‌ವೆನ್‌ಶನಲ್ ಮಿಲ್ಲಿಂಗ್/ಟರ್ನಿಂಗ್ ಆಪರೇಟರ್ ಉಚಿತ ತರಬೇತಿ ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಜು.೩೦ ಕೊನೆಯ ದಿನವಾಗಿರುತ್ತದೆ. ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಶಿಷ್ಯವೇತನ ಸಹ ನೀಡಲಾಗುವುದು.
ಮಾಹಿತಿಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ, ೨೨ ಅ ಆ, ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯ ಹರ್ಲಾಪುರ, ಕೆಎಎಸ್‌ಆರ್‌ಟಿಸಿ ಡಿಪೋ ಹತ್ತಿರ, ಹರಿಹರ, ದೂರವಾಣಿ ಸಂಖ್ಯೆ : ೦೮೧೯೨-೨೪೩೯೩೭. ೭೦೧೯೬ ೦೦೬೭೬, ೮೭೧೧೯೧೩೯೪೭, ೮೮೮೪೪ ೮೮೨೦೨ ಇವರನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.