ಇತರೆಡೆಗಳಿಂದ ಧಾವಿಸುವವರ ಮಾಹಿತಿ ಸಂಗ್ರಹಿಸಿ

458

ಶಿಕಾರಿಪುರ: ಪಟ್ಟಣಕ್ಕೆ ಬೆಂಗಳೂರು ಸಹಿತ ಇತರೆ ರಾಜ್ಯ ಗಳಿಂದ ಧಾವಿಸಿದವರ ಬಗ್ಗೆ ಸವಿವರ ಮಾಹಿತಿ ಸಂಗ್ರಹಿಸಿ ಪುರಸಭೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪರಸ್ಥಳದಿಂದ ಆಗಮಿಸಿದವರ ಬಗ್ಗೆ ಮಾಹಿತಿ ನೀಡುವಂತೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಜಕುಮಾರ್ ತಿಳಿಸಿದರು.
ಪಟ್ಟಣದ ತಾ.ಪಂ ಸಭಾಂಗಣ ದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಕೊವಿಡ್ ೧೯ ನಿಯಂತ್ರಣ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಪುರಸಭೆ ವತಿಯಿಂದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಆನ್‌ಲೈನ್ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ ನಿಯೋಜನೆಗೊಂಡಿರುವ ಎಲ್ಲ ವಾರ್ಡ ಮಟ್ಟದ ಕಾರ್ಯಪಡೆ ಸಮಿತಿ ಸದಸ್ಯರು ಅವರ ವ್ಯಾಪ್ತಿಯಲ್ಲಿನ ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ಕೊವಿಡ್-೧೯ ಬಗ್ಗೆ ಅರಿವು ಮೂಡಿಸುವುದು, ಬಾಧಿತ ವಲಯದಲ್ಲಿ ಪ್ರತಿಯೊಬ್ಬರೂ ಕಡ್ಡಾಯ ವಾಗಿ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದಕೊಳ್ಳುವುದು ಮತ್ತು ಸಾರ್ವಜನಿಕರು ಮನೆಯಿಂದ ಹೊರಗೆ ಬಾರದಂತೆ ಜಾಗೃತಿ ವಹಿಸಬೇಕಾಗಿದೆ ಎಂದರು.
ಬೆಂಗಳೂರು ಸಹಿತ ಹೊರ ರಾಜ್ಯ ದಿಂದ ಧಾವಿಸಿದವರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ೧೪ ದಿನಗಳ ಕಾಲ ಕಡ್ಡಾಯವಾಗಿ ಗೃಹಬಂಧನದಲ್ಲಿ ರುವಂತೆ ತಿಳುವಳಿಕೆಯನ್ನು ನೀಡುವುದು ಬಹು ಮಹತ್ವದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ ಅವರು, ಪರಸ್ಥಳದವರ ಬಗ್ಗೆ ಪುರಸಭೆ ಯಲ್ಲಿ ದಿನಪೂರ್ತಿ ಕಾರ್ಯನಿರ್ವ ಹಿಸುವ ಸಹಾಯವಾಣಿ ಸಂಖ್ಯೆ ೨೨೨೭೭೧ಗೆ ಕರೆ ಮಾಡಿ ಮಾಹಿತಿ ಯನ್ನು ನೀಡುವಂತೆ ತಿಳಿಸಿದರು.
ಇದೇ ಸಂದರ್ಬದಲ್ಲಿ ಪುರಸಭೆ, ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ, ಮತಗಟ್ಟೆ ಮಟ್ಟದ ಅಧಿಕಾರಿ, ಅಂಗನವಾಡಿ ಕಾರ್ಯಕರ್ತ, ಸ್ವಸಹಾಯ ಸಂಘದ ತಲಾ ಓರ್ವ ಸದಸ್ಯರ ವಾರ್ಡ ಮಟ್ಟದ ಕಾರ್ಯ ಪಡೆ ಸಮಿತಿಯನ್ನು ರಚಿಸಲಾಯಿತು.
ಕಾರ್ಯಾಗಾರದಲ್ಲಿ ಪುರಸಭೆಯ ಕಂದಾಯ ಅಧಿಕಾರಿ ಪರಶುರಾಮ, ಕಿರಿಯ ಅಭಿಯಂತರ ಲೋಕೇಶ, ಕಿರಿಯ ಆರೋಗ್ಯ ನಿರೀಕ್ಷಕ ರಂಜಿತ್, ಪ್ರವೀಣ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಪೂಜಾರ್ ಸಹಿತ ಮತಗಟ್ಟೆ ಮಟ್ಟದ ಅಧಿಕಾರಿಗಳು ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ ಹಾಜರಿದ್ದರು.