ಇಂದು ೧೨೬ ಪಾಸಿಟಿವ್; ಮೂವರ ಸಾವು: ಲಾಕ್ಡೌನ್ ಆದೇಶ ರದ್ದು- ಜಿಲ್ಲಾಡಳಿತದಿಂದ ಯೂಟರ್ನ್

458

ಶಿವಮೆಗ್ಗ : ಸಿಎಂ ತವರು ಜಿಯಲ್ಲಿ ಇಂದು ೩ ಮಂಂದಿ ಕೋವಿಡ್-೧೯ಗೆ ಬಲಿಯಾಗಿದ್ದು, ಸೋಂಕಿಗೆ ಒಳಗಾಗಿ ಮೃತಪಟ್ಟವರ ಸಂಖ್ಯೆ ೨೨ಕ್ಕೆ ಏರಿಕೆಯಾಗಿದೆ. ಇಂದು ಜಿಯಲ್ಲಿ ಬರೊಬ್ಬರಿ ೧೨೬ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಜಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ೧೧೪೩ಕ್ಕೆ ಏರಿಕೆಯಾಗಿದೆ. ಈ ಪೈಕಿ ೫೮೯ ಜನರು ಗುಣಮುಖ ರಾಗಿದ್ದು, ಜಿಯಲ್ಲಿ ೫೩೪ ಸಕ್ರಿಯಾ ಪ್ರಕರಣಗಳಿವೆ.
ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಶಿವಮೊಗ್ಗ ನಗರದ ಹಳೆ ಶಿವಮೊಗ್ಗ ನಗರವನ್ನು ಸೀಲ್‌ಡೌನ್ ಮಾಡಲಾಗಿದ್ದು, ಅದರೆ ಇಂದು ಸಚಿವ ಈಶ್ಚರಪ್ಪನವರು ಜಿಧಿಕಾರಿಗಳ ಜೊತೆ ಸಭೆ ನಡೆಸಿ ನಿನ್ನೆಯ ಆದೇಶವನ್ನು ಈ ಆದೇಶವನ್ನು ದಿಢೀರ್ ರದ್ದುಗೊಳಿಸಿzರೆ.
ಗುರುವಾರ ರಾತ್ರಿ ೮.೩೦ಕ್ಕೆ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯ ನ್ನುದ್ದೇಶಿಸಿ ಮಾತನಾಡಿದ ಸಚಿವ ಈಶ್ವರಪ್ಪ, ರಾಜ್ಯದ ಎಡೆ ಲಾಕ್‌ಡೌನ್ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಹಾಗೂ ಸ್ಥಳೀಯರು ತಾವೇ ಕರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವು ದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇನ್ನು ಮುಂದೆ ಕರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬರುವ ಮನೆಗಳನ್ನು ಮಾತ್ರ ಸೀಲ್‌ಡೌನ್ ಮಾಡಲು ನಿರ್ಧರಿಸ ಲಾಗಿದೆ. ಶಿವಮೊಗ್ಗ ನಗರದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ಹೆಚ್ಚಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ವನ್ನು ಕಟ್ಟುನಿಟ್ಟಿನಿಂದ ಪಾಲಿಸುವುದು, ಗುಂಪು ಸೇರದಿರುವುದು, ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬರುವುದು ಮುಂತಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದರು.
ಹಳೇ ಶಿವಮೊಗ್ಗ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಸೀಲ್‌ಡೌನ್ ಮಾಡಿದ್ದು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಸಹ ಇಲ್ಲ ಹೀಗಿರುವಾಗ ಹಳೇ ಶಿವಮೊಗ್ಗ ಸೀಲ್ ಡೌನ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳೂ ಎದ್ದಿದ್ದವು. ಇಂದು ಮಧ್ಯಾಹ್ನ ಪಾಲಿಕೆ ಸಿಬ್ಬಂದಿಗಳು ಬಿ.ಹೆಚ್. ರಸ್ತೆಗೆ ಸೇರುವ ಎಲ್ಲಾ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಕಟ್ಟಿ ಏಕಾಏಕಿ ರಸ್ತೆಗಳನ್ನು ಬಂದ್ ಮಾಡಿದ್ದರು. ಬೆಳಿಗ್ಗೆ ಮನೆಯಿಂದ ಕೆಲಸಕಾರ್ಯಗಳಿಗೆ ಹೊರಹೋಗಿದ್ದ ಸಾರ್ವಜನಿಕರು ಮನೆಗೆ ಹಿಂತಿರುಗಲಾಗದೆ ಪಾಲಿಕೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಿವಮೊಗ್ಗನಗರದಲ್ಲಿ ಒಂದು ರೀತಿಯ ತೊಘಲಕ್ ದರ್ಬಾರ್ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ್ದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ದಕ್ಷ ಆಡಳಿತ ನೀಡಬೇಕಿದ್ದ ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಕೊರೋನಾ ಕಂಟ್ರೋಲ್‌ಗಾಗಿ ನಿನ್ನ ಬೆಳಿಗ್ಗೆ ಸುದ್ದಿಗೋಷ್ಟಿ ನಡೆಸಿ ಆದೇಶಿಸಿದ್ದ ಒಂದುವಾರದ ಲಾಕ್‌ಡೌನ್‌ನ್ನು ಏಕಾಏಕಿ ಇಂದು ರಾತ್ರಿ ರದ್ದುಗೊಳಿಸುವ ಮೂಲಕ ಯೂಟರ್ನ್ ಹೊಡೆದಿದ್ದಾರೆ. ಅದೂ ಅಲ್ಲದೆ ಇಂದು ಬರೋಬ್ಬರಿ ೧೨೬ ಮಂದಿಗೆ ಸೋಂಕು ತಗುಲಿದ್ದು, ಕೊರೋನಾ ಕಂಟ್ರೋಲ್ ಮಾಡಲು ದಿಟ್ಟ ನಿಲುವು ತಳೆಯುವಲ್ಲಿ ಮತ್ತೊಮ್ಮೊ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೊರೊನಾ ಕಿಟ್ ಖರೀದಿಯಲ್ಲಿ
ಅವ್ಯವಹಾರ ನಡೆದಿಲ್ಲ:
ಕೊರೊನಾ ವಿರುದ್ಧ ಸರ್ಕಾರ ಸಾಕಷ್ಟು ಹೋರಾಟ ನಡೆಸುತ್ತಿದೆ. ಇದರಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ. ಕಾಂಗ್ರೆಸ್‌ನಲ್ಲಿ ಬಿಜೆಪಿ ಮೇಲೆ ಆರೋಪ ಮಾಡಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆಯೇ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಮೇಲೆ ಆರೋಪ ಮಾಡುವುದೇ ಇವರ ಕೆಲಸವಾಗಿದೆ ಎಂದರು.
ಕೊರೊನಾ ವಿಚಾರದಲ್ಲಿ ಪ್ರತಿಪಕ್ಷಗಳು ಟೀಕೆ ಮಾಡುವುದನ್ನು ಬಿಡಬೇಕು. ಉತ್ತಮವಾಗಿ ಕಾರ್ಯ ನಿರ್ವಹಿಸುವ ಸರ್ಕಾರದ ವಿರುದ್ದ ಮಾತನಾಡಿದರೆ ಜನ ನಿಮ್ಮನ್ನು ಕ್ಷಮಿಸಲ್ಲ ಎಂದರು.
ವಿಧಾನಪರಿಷತ್ ಸದಸ್ಯರ
ಆಯ್ಕೆ ಸಂತಸ ತಂದಿದೆ:
ಬಿಜೆಪಿಯಿಂದ ವಿಧಾನಪರಿಷತ್‌ಗೆ ಆಯ್ಕೆಯಾದವರ ಬಗ್ಗೆ ಸಂತಸವಿದೆ. ಸಮಾಜಕ್ಕೆ ದುಡಿದವರನ್ನು ನಮ್ಮ ಪಕ್ಷ ಗುರುತಿಸಿ, ಪರಿಷತ್‌ಗೆ ಕಳುಹಿಸಿದೆ ಎಂದರು. ಇನ್ನೂ ಮಂತ್ರಿಸ್ಥಾನ ಬೇಕು ಅಂತ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದರು.
ಜಿಧಿಕಾರಿ ಕೆ.ಬಿ. ಶಿವಕುಮಾರ್, ಎಸ್ಪಿ ಕೆ.ಎಂ. ಶಾಂತರಾಜು, ಜಿ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತೇಶ್ ಉಪಸ್ಥಿತರಿದ್ದರು.