ಇಂದು ಪತ್ತೆಯಾದ ಕೊರೋನ ಸೋಂಕಿತರ ಸಂಖ್ಯೆ ೧೩೮!

493

ಶಿವಮೊಗ್ಗ: ಆ.೯ರ ಭಾನುವಾರ ಜಿಯಲ್ಲಿ ೧೩೮ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, ಈವರೆಗೆ ೨೮೪೭ ಒಟ್ಟು ಸೋಂಕಿತರು ಎಂದು ಜಿ ಹೆಲ್ತುಬುಲಿಟಿನ್‌ನಲ್ಲಿ ಪ್ರಕಟವಾಗಿದೆ.
ಇಂದು ನಾಲ್ವರು ಸೋಂತಿಕರು ಸಾವು ಕಂಡಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಜಿಯಲ್ಲಿ ಒಟ್ಟು ಸಾವಿನ ಸಂಖ್ಯೆ ೫೯ ಕ್ಕೇರಿದೆ. ಜಿಯಲ್ಲಿ ಇದುವರೆಗೂ ೩೩,೭೦೮ ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ೨೯,೬೫೫ ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. ೨,೮೪೭ ಜನರಿಗೆ ಕೊರೋನ ಪಾಸಿಟಿವ್ ಎಂದು ವರದಿ ಪ್ರಕಟವಾಗಿದೆ.
ಇಂದು ಜನ ೫೧ ಮಂದಿ ಸೋಂಕಿನಿಂದ ಗುಣಮುಖರಾಗಿ ಮೆಗ್ಗಾನ್ ಮತ್ತು ಕೋವಿಡ್ ಕೇರ್ ಸೆಂಟರ್ ನಿಂದ ಬಿಡುಗಡೆಗೊಂಡಿ zರೆ. ಇದರಿಂದ ಒಟ್ಟು ಗುಣಮುಖರಾಗಿರುವವರ ಸಂಖ್ಯೆ ೧,೭೩೧ಕ್ಕೇರಿದೆ. ೨೨೩ ಮಂದಿ ಸೋಂಕಿತರು ಮೆಗ್ಗಾನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ೪೧೫ ಮಂದಿ ಕೊರೋನಾ ಕೇರ್ ಸೆಂಟರ್‌ನಲ್ಲಿ , ೧೫೧ ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ, ೧೭೯ ಮಂದಿ ಸೋಂಕಿತರು ಮನೆಯಲ್ಲಿ ಐಸೋಲೇಷನ್ ಆಗಿ ಚಿಕಿತೆ ಪಡೆಯುತ್ತಿದ್ದಾರೆ.
ಆಯುರ್ವೆದಿಕ್ ಕಾಲೇಜ್ ಆಸ್ಪತ್ರೆಯಲ್ಲಿ ೮೯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು ೧೦೫೭ ಮಂದಿ ಸಕ್ರಿಯ ಕೊರೋನಾ ಪಾಸಿಟಿವ್ ರೋಗಿಗಳೆಂದು ಹೆಲ್ತ್ ಬುಲಿಟಿನ್ ತಿಳಿಸಿದೆ.
ಸೋಂಕಿನ ಹೆಚ್ಚಳದಿಂದಾಗಿ ಕಂಟೈನ್ಮೆಂಟ್ ಜೋನ್‌ಗಳು ಸಹ ಹೆಚ್ಚಾಗಿವೆ. ನಿನ್ನೆಯವರೆಗೆ ೧,೦೯೨ ಕಂಟೈನ್ಮೆಂಟ್ ಜೋನ್‌ಗಳಿದ್ದ ಜಿಯಲ್ಲಿ ಇಂದು ೧೧೨೮ ಕ್ಕೇರಿದೆ. ೩೭೯ ಡಿನೋಟಿಫೈಡ್ ಕಂಟೈನ್ಮೆಂಟ್ ಜೋನ್‌ಗಳು ೩೮೬ ಎಂದು ಬುಲಿಟಿನ್ ಪ್ರಕಟಿಸಿವೆ.
ಜಿಯಲ್ಲಿ ೧೩೮ ಕೊರೋನ ಪಾಸಿಟಿವ್ ಎಂದು ಪ್ರಕಟಗೊಂಡ ಬೆನ್ನ ತಾಲೂಕವಾರು ಪತ್ತೆಯಾಗಿರುವ ಬಗ್ಗೆ ಮಾಹಿತಿಗಳು ಹೀಗಿವೆ. ಶಿವಮೊಗ್ಗ ನಗರ ಮತ್ತು ತಾಲೂಕಿನಲ್ಲಿ- ೮೩, ಭದ್ರಾವತಿಯಲ್ಲಿ- ೩೩, ಶಿಕಾರಿಪುರ-೧೪ ಸಾಗರ-೦೨, ತೀರ್ಥಹಳ್ಳಿ ೩ ಜನರಿಗೆ ಪತ್ತೆಯಾಗಿದ್ದು, ಇತರೆ ಜಿಯಿಂದ ಬಂದು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ೩ ಎಂದು ಹೆಲ್ತ್ ಬುಟಿಲಿಟಿನ್ ಪ್ರಕಟಿಸಿದೆ.