ಆ.೩೧: ಆರಾಧನಾ ಸಮಿತಿ ಅಧ್ಯಕ್ಷರಾಗಿ ಮಧುಸೂದನ್ ಅಧಿಕಾರ ಸ್ವೀಕಾರ

491

ಶಿವಮೊಗ್ಗ: ಶಿವಮೊಗ್ಗ ಆರಾಧನಾ ಸಮಿತಿ ಅಧ್ಯಕ್ಷರಾಗಿ ಬಿಜೆಪಿಯ ಯುವ ಮುಖಂಡ ಹಾಗೂ ಆರ್‌ಎಸ್‌ಎಸ್‌ನ ನಿಷ್ಟಾವಂತ ಕಾರ್ಯಕರ್ತ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳ ರಾಯಭಾರಿ ರೀತಿ ಸೇವೆ ಸಲ್ಲಿಸುತ್ತಿರುವ ಬಿ.ಆರ್. ಮಧುಸೂದನ್ ಆಯ್ಕೆಯಾಗಿದ್ದಾರೆ.
ಈ ಮೊದಲು ಆರಾಧನಾ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿರುತ್ತಿದ್ದರು. ಆದರೆ ಕಾರ್ಯಭಾರಗಳ ಒತ್ತಡದಿಂದ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಈ ಸ್ಥಾನವನ್ನು ಅರ್ಹತೆ ಹೊಂದಿದ ಮಧುಸೂದನ್‌ರಿಗೆ ಧಾರೆ ಎರೆದಿದ್ದಾರೆ. ಆ. ೩೧ರ ಸೋಮವಾರ ಬೆಳಿಗ್ಗೆ ೧೧.೩೦ಕ್ಕೆ ಬಾಲರಾಜ ಅರಸ್ ರಸ್ತೆ ಹಳೆ ಡಿಸಿ ಕಛೇರಿ ಕಟ್ಟಡದ ತಹಶೀಲ್ದಾರ್ ಕಛೇರಿಯಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.