ಆ.೩೧ರಿಂದ ಉದಯ ಟಿವಿಯ ಹೊಸ ಧಾರಾವಾಹಿ ಯಾರಿವಳು

499

ಉದಯ ವಾಹಿನಿಯ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ.
ನಂದಿನಿ, ಮನಸಾರೆ, ಕಾವ್ಯಾಂಜಲಿ, ಆಕೃತಿ, ಕಸ್ತೂರಿ ನಿವಾಸದಂತಹ ಕೂತೂಹಲಕಾರಿ ಕಥೆಗಳನ್ನು ನೀಡಿದ ವಾಹಿನಿಯ ಹೆಗ್ಗಳಿಕೆ ಹೆಚ್ಚಿಸಲು ಇದೀಗ ಯಾರಿವಳು ಹೆಸರಿನ ಹೊಸ ಧಾರಾವಾಹಿಯು ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ. ಯಾರಿವಳು ಆ.೩೧ ರಿಂದ ಸೋಮವಾರದಿಂದ ಶುಕ್ರವಾರದವರಗೆ ಪ್ರತಿದಿನ ರಾತ್ರಿ ೮ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
ಬದಲಾಗ್ತಿದೆ ಸಮಯ ಬದಲಾಗ್ತಿದೆ ಉದಯ – ಟ್ಯಾಗ್ ಲೈನ್‌ಗೆ ಅನುಗುಣವಾಗಿ ಯಾರಿವಳು ಕಥೆಯು ಹಿಂದೆಂದಿಗಿಂತ ಹೊಸರೂಪದಲ್ಲಿ ಅದ್ದೂರಿಯಾಗಿ ಕಿರುತರೆಗೆ ಪಾದಾರ್ಪಣೆ ಆಗಲಿದೆ. ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಕಥೆ, ಚಿತ್ರಕಥೆ, ಮೇಕಿಂಗ್ ಹಾಗೂ ತಾರಾಬಳಗವನ್ನು ಈ ಕಥೆ ಒಳಗೊಂಡಿದೆ.
ಶ್ರೀಮಂತ ಮನೆತನಕ್ಕೆ ಸೇರಿದ ಶ್ರೇಷ್ಟ ಸ್ವಂತ ಅಪ್ಪ-ಅಮ್ಮನ ಪ್ರೀತಿ ವಂಚಿತ ಮಗು. ಅಪ್ಪ ಪ್ರೀತಿ ತೋರದಿರಲು ಸ್ವಂತ ಮಗಳ ಹೆಸರಲ್ಲಿರುವ ಆಸ್ತಿ. ಇನ್ನು ಸ್ವಂತ ಅಮ್ಮನನ್ನು ಕಾಣೆಯಾಗಿಸಿ ಹೊಸ ಅಮ್ಮನನ್ನು ಇವಳೇ ನಿಮ್ಮಮ್ಮ ಎಂದು ನಂಬಿಸುತ್ತಿರುವ ಅಪ್ಪ. ಈ ಇಬ್ಬರ ಹಿಂಸೆಗೆ ಮೂಲೆ ಗುಂಪಾದವರಲ್ಲಿ ಶ್ರೇಷ್ಟಳ ಅಜ್ಜ ದೇವರಾಯ ಕೂಡ. ಶ್ರೇಷ್ಟಳ ಕಷ್ಟಕ್ಕೆ ಬೆನ್ನೆಲುಬಾಗಿ ಮಂಗಳಮುಖಿಯೊಬ್ಬಳು ಈ ಕಥೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವುದು ವಿಶೇಷ. ಈ ವಿಶೇಷ ಪಾತ್ರದ ಜೊತೆಗೆ ಪೋಷಕ ಪಾತ್ರಗಳಿಗೆ ತಂಡವು ಮಂಗಳಮುಖಿ ಸಮುದಾಯದ ಸದಸ್ಯರನ್ನೇ ಆಯ್ಕೆ ಮಾಡಿಕೊಂಡಿರುವುದು ಈ ಧಾರಾವಾಹಿಯ ಹೆಗ್ಗಳಿಕೆಯಾಗಿದೆ.
ಇದೆಲ್ಲ ಒಂದೆಡೆಯಾದರೆ ಮತ್ತೊಂದೆಡೆ ನಮ್ಮ ಕಥಾನಾಯಕಿ ಮಾಯಾ, ಆಂಜನೇಯನ ಪರಮ ಭಕ್ತೆ. ಏಲ್ಲ ಕೆಲಸದಲ್ಲೂ ಭಜರಂಗಿಯನ್ನು ನೆನಯುವ ಇವಳು ಭಂಡ ಧೈರ್ಯದಿಂದ ಮುನ್ನುಗ್ಗುವ ಸ್ವಭಾವದವಳು. ಇವಳು ಮತ್ತು ಮಗು ಶ್ರೇಷ್ಟಳ ಸ್ವಂತ ಅಮ್ಮ ಅಹಲ್ಯ ನೋಡಲು ಒಂದೇ ತರಇದ್ದು, ಇವರಿಬ್ಬರಿಗಿರುವ ಅವಿನಾಭಾವ ಸಂಬಂಧವನ್ನು ಕಥೆಯಲ್ಲಿ ಹೆಣೆಯಲಾಗಿದೆ. ಅಹಲ್ಯತg ಇರುವ ಮಾಯಾ ಯಾರು? ಮಾಯಾ ಹಿಂದಿನ ಕಥೆಯೇನು? ಯಾರಿವಳು ಎಂಬ ಶೀರ್ಷಿಕೆಗೆ ಉತ್ತರ ಈ ಕಥೆಯಲ್ಲಡಗಿದೆ.
ಬಾಹುಬಲಿ ಸರಣಿ ಚಿತ್ರಗಳನ್ನು ಹಾಗೂ ಬಾಲಿವುಡ್ ಕ್ಷೇತ್ರದಲ್ಲಿ ಜನಪ್ರಿಯ ಹೈ ಬಜೆಟ್ ಧಾರಾವಾಹಿಗಳನ್ನು ಕೊಟ್ಟ ನಿರ್ಮಾಣ ಸಂಸ್ಥೆ ಅರ್ಕಾ ಮೀಡಿಯಾ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು ದರ್ಶಿತ್ ಭಟ್ ನಿರ್ದೇಶಿಸುತ್ತಿzರೆ. ಮಂಡ್ಯ ಮಂಜು ಅವರ ಛಾಯಾಗ್ರಹಣವಿದೆ. ಕಥಾ ನಾಯಕಿಯಾಗಿ ಬ್ಯೂಟಿಫುಲ್ ಮನಸುಗಳು, ಕಮರೊಟ್ಟು ಚೆಕ್‌ಪೋಸ್ಟ್, ವೆನಿ, ಕಟ್ಟುಕಥೆ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ ಸ್ವಾತಿಕೊಂಡೆ ಮಾಯಾ ಪಾತ್ರವನ್ನು, ಕಥಾ ನಾಯಕ ನಿಖಿಲ್ ಪಾತ್ರವನ್ನು ನಂದಿನಿ ಧಾರಾವಾಹಿ ಖ್ಯಾತಿಯ ಆರವ್ ಸೂರ್ಯ ನಿರ್ವಹಿಸುತ್ತಿದ್ದು ಶ್ರೇಷ್ಟ ಪಾತ್ರವನ್ನು ಜಂಟಲ್ ಮ್ಯಾನ್ ಸಿನೇಮಾ ಖ್ಯಾತಿಯ ಬಾಲ ನಟಿ ಆರಾಧ್ಯ ನಿರ್ವಹಿಸುತ್ತಿzರೆ.
ಕಥೆಯ ಖಳ ಪಾತ್ರಗಳನ್ನು ಅಂಬರೀಶ್ ಸಾರಂಗಿ ಹಾಗೂ ಶರ್ಮಿತಾ ನಿರ್ವಹಿಸುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ಹಿರಿಯಕಲಾವಿದ ಅಶೋಕ ಹೆಗಡೆ, ಬಾಲರಾಜ್, ವಾಣಿಶ್ರೀ, ದೀಪಾ ಪಾರ್ವತಿ, ನಾಗರಾಜ್ ಭಟ್, ಮಂಗಳಮುಖಿ ಪಾತ್ರಧಾರಿಗಳಾಗಿ ಸನಾ ಸುಮನ್ ಹಾಗೂ ಲೋಹಿತ್ ಪಟೇಲ್‌ಇzರೆ.
ಇದೇ ಆ.೩೧ರಿಂದ ಸೋಮವಾರದಿಂದ ಶುಕ್ರವಾರರಾತ್ರಿ ೮ಕ್ಕೆ ಉದಯ ಟಿವಿಯಲ್ಲಿ ಯಾರಿವಳು ದಾರಾವಾಹಿ ಪ್ರಾರಂಭವಾಗಲಿದೆ.