ಆಸ್ಪತ್ರೆ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ತುತ್ತಾದ ಸ್ವಾಬ್‌ಬೂತ್: ಪಾಲಿಕೆಯಿಂದ ಕ್ರಮದ ಎಚ್ಚರಿಕೆ…

531

ಸುದ್ದಿ ಹಾಗೂ ಜಹೀರಾತಿಗಾಗಿ ಸಂಪರ್ಕಿಸಿ: +91 948 248 2182, +91 725 971 4220 ಇ ಮೇಲ್:hosanavika@gmail.com

ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ಮೆಗ್ಗಾನ್ ಆಸ್ಪತ್ರೆಗೆ ನೀಡಲಾಗಿದ್ದ ಸ್ವಾಬ್ ಬೂತ್ ಮಳೆಗೆ ಹಾನಿಗೊಳಗಾಗಿದ್ದರಿಂದ ಜಿಲ್ಲೆಯ ಜನತೆಗೆ ಅನುಕೂಲವಾಗಲೆಂದು ಕೋವಿಡ್-೧೯ ಪರೀಕ್ಷೆಗಾಗಿ ಗಂಟಲಿನ ದ್ರವ ತೆಗೆಯುವ ಸ್ವ್ಯಾಬ್ ಬೂತ್ ಮತ್ತೊಂದು ಬೂತ್‌ನ್ನ ಮೆಗ್ಗಾನ್‌ಗೆ ನೀಡಲು ಪಾಲಿಕೆ ನಿರ್ಧರಿಸಿದೆ.
ಶಂಕಿತ ವ್ಯಕ್ತಿಗಳಿಂದ ಗಂಟಲಿನ ಪರೀಕ್ಷೆಗಾಗಿ ಎರಡು ಸ್ವ್ಯಾಬ್ ಬೂತ್ ಗಳನ್ನ ಪಾಲಿಕೆಯ ವತಿಯಿಂದ ಮೆಗ್ಗಾನ್‌ಗೆ ನೀಡಲಾಗಿತ್ತು. ಆದರೆ ಕಳೆದ ವಾರ ನಗರದಲ್ಲಿ ಬಿದ್ದ ಮಳೆಯಿಂದಾಗಿ ಹಾಗೂ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದಿಂದ ಸ್ವ್ಯಾಬ್ ಬೂತ್ ಸಂಪೂರ್ಣ ಹಾಳಾಗಿತ್ತು.
ಇಂದು ಬೆಳಿಗ್ಗೆ ಪಾಲಿಕೆ ವಿಪಕ್ಷ ನಾಯಕ ಹೆಚ್. ಎಸ್. ಯೋಗೇಶ್ ನೇತೃತ್ವದ ತಂಡ ಮೆಗ್ಗಾನ್‌ಗೆ ಭೇಟಿ ನೀಡಿ ಮಳೆ ಗಾಳಿಯಿಂದಾಗಿ ಹಾಳಾಗಿರುವ ಸ್ವ್ಯಾಬ್ ಬೂತ್ ಪರಿಶೀಲಿಸಿ ಮೆಗ್ಗಾನ್ ನಿರ್ವಾಹಣೆ ಕುರಿತು ಸಿಡಿಮಿಡಿಗೊಂಡಿದ್ದರು.
ಆಸ್ಪತ್ರೆ ಆಡಳಿತ ಮಂಡಳಿದ ಈ ರೀತಿಯ ದಿವ್ಯ ನಿರ್ಲಕ್ಷ್ಯವನ್ನು ಅವರು ಪಾಲಿಕೆಯ ಆಯುಕ್ತರ ಗಮನಕ್ಕೆ ತಂದು ಸ್ವ್ಯಾಬ್ ಕುರಿತು ಕ್ರಮ ಜರುಗಿಸುವಂತೆ ಕೋರಿದ್ದರು.
ಇಂದು ಸಂಜೆ ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರುಳೀಧರ್ ಹಾಗೂ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಮೊದಲಾದವರ ಜೊತೆ ಭೇಟಿ ನೀಡಿದ ಪಾಲಿಕೆ ಆಯುಕ್ತರು ಹಾಳಾಗಿರುವ ಕುರಿತು ಪರಿಶೀಲಿಸಿದರು.
ಇದರಲ್ಲಿ ಒಂದು ಬೂತ್‌ನ್ನ ಕೋವಿಡ್-೧೯ರ ಆಸ್ಪತ್ರೆಯ ಒಳಗೆ ಇದ್ದು ಇನ್ನೊಂದು ಆಸ್ಪತ್ರೆಯ ಪ್ರವೇಶದ್ವಾರದ ಮೆಟ್ಟಿಲು ಕೆಳಗೆ ಇಡಲಾಗಿತ್ತು. ಕೆಳಗಿರುವ ಬೂತ್ ಮಳೆ-ಗಾಳಿಗೆ ಹಾಳಾಗಿರುವ ಹಿನ್ನಲೆಯಲ್ಲಿ ಮತ್ತೊಂದು ಬೂತ್ ನ್ನ ಮೆಗ್ಗಾನ್‌ಗೆ ನೀಡಲು ಆಯುಕ್ತ ಚಿದಾನಂದ್ ವಠಾರೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಎರಡೂ ಬೂತ್‌ಗಳನ್ನ ಇನ್ನುಮುಂದೆ ಆಸ್ಪತ್ರೆಯ ಒಳಗೆ ಇಡಲು ಆಯುಕ್ತರು ಸೂಚಿಸಿದ್ದು, ಮುಂದೆ ಈ ರೀತಿಯ ನಿರ್ಲಕ್ಷ್ಯ ವಹಿಸಿದರೆ ಕ್ರಮ ಜರುಗಿಸುವ ಎಚ್ಚರಿಕೆ ಸಹ ನೀಡಿದ್ದಾರೆ ಎನ್ನಲಾಗಿದೆ.