ಆಶಾ ಕಾರ್‍ಯಕರ್ತೆಯರಿಗೆ ಆಶಾಕಿರಣವಾದ ಕಾರ್ಗಿಲ್ ಕಂಪನಿ

434

ಹರಿಹರ : ಕೊರೊನಾ ದೇಶದ ಜನರ ಬದುಕು ಮತ್ತು ಜೀವನವನ್ನು ಕಸಿದುಕೊಂಡ ಮಹಾ ಹೆಮ್ಮಾರಿ.
ಈ ಮಹಾ ಹೆಮ್ಮಾರಿ ವೈರಸ್ಸಿನ ಜೊತೆ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಟ ಮಾಡುತ್ತಿರುವ ವಾರಿಯರ್ಸ್‌ಗಳಲ್ಲಿ ಆಶಾ ಕಾರ್‍ಯಕರ್ತೆ ಯರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.
ಸರ್ಕಾರದ ಕನಿಷ್ಠ ಸೌಲಭ್ಯವನ್ನು ಪಡೆಯುವಲ್ಲಿ ಹೋರಾಟಕ್ಕಿಳಿದಿರುವ ಆಶಾ ಕಾರ್ಯಕರ್ತೆಯರ ಬದುಕು ಅತ್ಯಂತ ಶೋಚನೀಯವಾಗಿದೆ. ತಮ್ಮ ಕುಟುಂಬದ ನಿರ್ವಹಣೆಗಾಗಿ ಕನಿಷ್ಠ ಸೌಲಭ್ಯವನ್ನು ನೀಡಿ ಎಂದು ಸರ್ಕಾರದ ಮುಂದೆ ಬೇಡಿಕೆಯನ್ನು ಇಡುತ್ತಿದ್ದರೂ ಆಳುವಂತಹ ಸರ್ಕಾರಗಳು ನಾಚಿಕೆ ಇಲ್ಲದಂತೆ ವರ್ತಿಸುತ್ತಿವೆ.
ಕರೋನಾ ವೈರಸ್‌ನ ಭೀಕರತೆ ಹಾಗೂ ವೈರಸ್ ನಿಯಂತ್ರಣದ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿರುವ ಹರಿಹರದ ಆಶಾ ಕಾರ್ಯಕರ್ತೆಯರಿಗೆ ಬೆಳ್ಳೂಡಿಯ ಕಾರ್ಗಿಲ್ ಕಂಪನಿಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಹಾರ ಸಾಮಗ್ರಿಯ ಕಿಟ್ಟನ್ನು ನೀಡಿ ಅವರ ಹಸಿವನ್ನು ನೀಗಿಸುವ ಪುಣ್ಯದ ಕೆಲಸ ಮಾಡಿzರೆ .
ಕಾರ್ಯಕರ್ತೆಯರಿಗೆ ಸಾಮಗ್ರಿಯ ಕಿಟ್ಟನ್ನು ತಾಲ್ಲೂಕು ದಂಡಾಧಿಕಾರಿ ಹಾಗೂ ಕಾರ್ಗಿಲ್ ಕಂಪನಿಯ ನೌಕರರು ಕಾರ್ಯಕರ್ತೆಯರಿಗೆ ಆಹಾರದ ಸಾಮಗ್ರಿಯನ್ನು ಕಿಟ್ಟನ್ನು ನೀಡಿ ಆತ್ಮಸ್ಥೈರ್ಯ ತುಂಬಿದರು.
ಈ ಸರಳ ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಕೆ.ಬಿ. ರಾಮಚಂದ್ರಪ್ಪ , ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಕಾರ್ಗಿಲ್ ಕಂಪನಿಯ ಟೆಕ್ನಿಕಲ್ ನೌಕರ ಶ್ರೀಕಾಂತ್ ಭಟ್ ಹಾಗೂ ತಾಲ್ಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.