ಆರ್‌ಎಂಎಂ ಪದಚ್ಯುತಿ: ಬಿಜೆಪಿ ದ್ವೇಷದ ರಾಜಕಾರಣ: ಹಕ್ರೆ ಆರೋಪ

464

ಸಾಗರ : ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡರನ್ನು ಡಿಸಿಸಿ ಬ್ಯಾಂಕ್ ಪ್ರಾಥಮಿಕ ಸದಸ್ಯತ್ವ ದಿಂದ ವಜಗೊಳಿಸಿರುವುದರ ಹಿಂದೆ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣ ಅಡಗಿದೆ ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿzರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತಮ್ಮ ಮಾತು ಕೇಳದೆ ಇರುವವರನ್ನು ಅಧಿಕಾರ ಸ್ಥಾನದಿಂದ ಇಳಿಸುವ ಸಂಚು ರೂಪಿಸಲಾಗುತ್ತಿದೆ. ಬಿಜೆಪಿ ಸೇಡಿನ ರಾಜಕಾರಣಕ್ಕೆ ಇಳಿದಿದೆ ಎಂದು ದೂರಿದರು.
ಡಿಸಿಸಿ ಬ್ಯಾಂಕ್‌ನ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಿಓಡಿ ತನಿಖೆ ನಡೆದಿದ್ದು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈ ಸಂಬಂಧ ಚಾರ್ಜ್‌ಶೀಟ್ ಹಾಕುವಾಗ ಮಂಜುನಾಥ ಗೌಡರ ಹೆಸರು ಇರಲಿಲ್ಲ. ಆದರೆ ರಾಜ್ಯ ಸರ್ಕಾರ ಪ್ರಕರಣಕ್ಕೆ ಮರುಜೀವ ನೀಡಿ ಮಂಜುನಾಥ ಗೌಡ ಸಹಕಾರಿ ಕಾಯ್ದೆ ೨೯ಸಿ ಅಡಿಯಲ್ಲಿ ಕ್ರಮ ಕೈಗೊಂಡಿದೆ. ಇದು ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ. ಡಿಸಿಸಿ ಬ್ಯಾಂಕ್ ಅಭಿವೃದ್ದಿಯಾಗಿರು ವುದು ಮಂಜುನಾಥ ಗೌಡರು ಬ್ಯಾಂಕ್‌ಗೆ ಚುನಾಯಿತರಾಗಿ ಬಂದ ಮೇಲೆ ಅಂತಹ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಹಾಳು ಮಾಡಿ, ತಮ್ಮ ಪಕ್ಷವೇ ಡಿಸಿಸಿ ಬ್ಯಾಂಕ್‌ನಲ್ಲಿ ಅಧಿಕಾರಕ್ಕೆ ಬರಬೇಕು ಎನ್ನುವ ದೂರಾಲೋಚನೆ ಮತ್ತು ದುರಾಲೋಚನೆಯಲ್ಲಿ ಮಂಜುನಾಥ ಗೌಡ ಅವರ ಪ್ರಾಥಮಿಕ ಸದಸ್ಯತ್ವವನ್ನು ವಜಗೊಳಿಸಿದೆ ಎಂದರು.
ಈ ಆರ್ಥಿಕ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಸುಮಾರು ೧೯ ಕೋಟಿ ರೂ. ಲಾಭ ಗಳಿಸಿದೆ. ೧ಸಾವಿರ ಕೋಟಿ ರೂ. ಫಿಕ್ಸಡ್ ಡಿಪಾಜಿಟ್ ಮಂಜುನಾಥ ಗೌಡರ ನೇತೃತ್ವದಲ್ಲಿ ತರಲಾಗಿದೆ. ೧೯೯೭ರಲ್ಲಿ ರೈತರಿಗೆ ಕೇವಲ ೩ಸಾವಿರ ರೂ. ಸಾಲ ನೀಡುತ್ತಿದ್ದದ್ದು ಈಗ ಲಕ್ಷಾಂತರ ರೂಪಾಯಿ ಸಾಲ ನೀಡು ವಂತೆ ಆಗಿದೆ. ಒಂದು ಲಕ್ಷ ರೈತರಿಗೆ ಸುಮಾರು ೭೦೦ ಕೋಟಿ ರೂ. ಬೆಳೆಸಾಲ ನೀಡಿದೆ, ಆದರೆ ರಾಜ್ಯ ಸರ್ಕಾರವು ಕೊರೋನಾ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪ ನಡೆಯದೆ ಇರುವಾಗ ಏಕಾಏಕಿ ಮಂಜುನಾಥ ಗೌಡರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವ ಕೆಲಸ ಮಾಡಿದೆ. ಇದರ ಹಿಂದೆ ಸದ್ಯದ ನಡೆಯಲಿರುವ ಅಪೆಕ್ಸ್ ಬ್ಯಾಂಕ್ ಚುನಾವಣೆಯಲ್ಲಿ ಮಂಜುನಾಥ ಗೌಡರನ್ನು ದೂರ ಇರಿಸುವ ಸಂಚು ಅಡಗಿದೆ ಎಂದು ದೂರಿದರು.
ಆರ್.ಎಂ.ಮಂಜುನಾಥ ಗೌಡರನ್ನು ಡಿಸಿಸಿ ಬ್ಯಾಂಕ್ ಪ್ರಾಥಮಿಕ ಸದಸ್ಯತ್ವದಿಂದ ವಜಗೊಳಿಸಿರುವ ಕ್ರಮವನ್ನು ಖಂಡಿಸಿ ಜಿದ್ಯಂತ ಪ್ರತಿಭಟನೆ ನಡೆಸುವುದು ಅನಿವಾರ್ಯ ವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೆ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಅನೇಕ ರೈತ ವಿರೋಧ ಕಾಯ್ದೆಯನ್ನು ಸುಗ್ರಿವಾe ಮೂಲಕ ಜರಿಗೆ ತರುತ್ತಿದೆ. ಇದೀಗ ಸಹಕಾರಿ ಸಂಸ್ಥೆಗಳಲ್ಲಿ ನೇರವಾಗಿ ರಾಜಕೀಯ ಹಸ್ತಕ್ಷೇಪ ಮಾಡಲು ಮುಂದಾಗಿದೆ ಎಂದರು.
ಗೋಷ್ಟಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಅಶೋಕ ಬರದವಳ್ಳಿ, ಟಿಎಪಿಎಂಸಿಎಸ್ ಅಧ್ಯಕ್ಷ ವೀರೇಶ್ ಬರೂರು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೇವಪ್ಪ ಕೆಳದಿ, ಪ್ರಮುಖರಾದ ಗಣಪತಿ ಹೆನಗೆರೆ, ನಾಗರಾಜ ಮಜ್ಜಿಗೆರೆ, ಶ್ರೀಧರ್, ದೇವರಾಜ್, ಮೋಹನ್, ಸ್ವಾಮಿ ಗೌಡ ಇನ್ನಿತರರು ಹಾಜರಿದ್ದರು.