ಆರೋಗ್ಯ ಸಚಿವರ ಹೆಗಲೇರಿದ ಮಹಾಮಾರಿ ಕೊರೋನಾ

540

ಬೆಂಗಳೂರು : ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಜನಪ್ರತಿನಿಧಿಗಳ ಬೆನ್ನು ಹತ್ತಿರುವ ಕೊರೊನಾ ಇದೀಗ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೂ ತಗುಲಿದೆ.
ಸಚಿವ ಬಿ ಶ್ರೀರಾಮುಲುಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದು, ಶ್ರೀರಾಮುಲು ಅವರು ಸರಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿzರೆ. ಸಾಮಾನ್ಯ ಜನರಿಗೆ ನೀಡುವ ಟ್ರೀಟ್ಮೆಂಟ್ ಸಚಿವರಿಗೂ ನೀಡಲಾಗುತ್ತಿದೆ. ಈಗ ಬೇಸಿಕ್ ಟೆಸ್ಟ್ ಗಳು ಮುಗಿದಿದೆ. ಟ್ರೀಟ್ ಮೆಂಟ್ ಈಗ ಶುರುವಾಗಿದೆ. ಸ್ವಲ್ಪ ಜ್ವರ ಮತ್ತು ಕೆಮ್ಮು ಇದೆ. ಯಾವುದೇ ಆತಂಕದ ಅಗತ್ಯ ಇಲ್ಲ ಎಂದು ಶ್ರೀರಾಮುಲು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿzರೆ.
ಸಚಿವರು ಆಸ್ಪತ್ರೆಯಲ್ಲಿ ನೀಡುವ ಡಯಟ್ ಫುಡ್ ಸೇವಿಸಲಿದ್ದು , ವೈದ್ಯರ ಸಲಹೆಯಂತೆ ಆಹಾರ ತೆಗೆದುಕೊಳ್ಳಲಿzರೆ.
ಟ್ವೀಟ್: ಇಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನನ್ನ ಇಲಾಖೆ ಸೇರಿದಂತೆ ಸರ್ಕಾರದ ಎ ಇಲಾಖೆಗಳೂ ಜೀವದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹಗಲಿರುಳೂ ಶ್ರಮಿಸುತ್ತಿರುವೆ.
ಕೊರೋನಾ ಕಾಣಿಸಿಕೊಂಡ ಸಮಯದಿಂದಲೂ ೩೦ ಜಿಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡುವ ಸರ್ಕಾರದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ನನಗೆ ಸತ್ವಪರೀಕ್ಷೆಯ ಸಮಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದೇನೆ. ಆದಷ್ಟೂ ಬೇಗ ಗುಣಮುಖನಾಗಿ ಸಂಕಷ್ಟ ಸಮಯದಲ್ಲಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಡುವಂತೆ ಭಗವಂತ ನಲ್ಲಿ ಪ್ರಾರ್ಥಿಸುತ್ತೇನೆ. ಇತ್ತೀಚಿಗೆ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ವಹಿಸಲು ಕೋರುತ್ತೇನೆ ಎಂದು ಮನವಿ ಮಾಡಿಕೊಂಡಿzರೆ.