ಆಯುಷ್ ಇಲಾಖೆಯಿಂದ ಔಷಧ ವಿತರಣೆ

461

ದಾವಣಗೆರೆ : ಜಿಡಳಿತ, ಜಿಪಂ ಹಾಗೂ ಜಿ ಆಯುಷ್ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಹೊನ್ನಾಳಿ ತಾಲ್ಲೂಕು ಕುಂಬಳೂರಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ದಲ್ಲಿ ಆಯುಷ್ ಇಲಾಖೆಯಿಂದ ಸರರಬರಾಜು ಮಾಡಲ್ಪಟ್ಟಿರುವ ಆಯುಷ್ ರೋಗ ನಿರೋಧಕ ಶಕ್ತಿ ವರ್ಧಕ ಔಷಧಗಳನ್ನು ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ ಅವರು ಆಶಾ ಕಾರ್ಯಕರ್ತೆಯರಿಗೆ ಹಾಗೂ ೫೦ ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ| ಚಂದ್ರಕಾಂತ್ ಎಸ್. ನಾಗಸಮುದ್ರ ಹಾಗೂ ಪಂಚಾಯಿತಿ ಅಧಿಕಾರಿಗಳಾದ ಲಕ್ಷ್ಮೀಬಾಯಿ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಸಿಬ್ಬಂದಿ ವರ್ಗದವರು ಸೇರಿದಂತೆ ಮತ್ತಿತರರು ಹಾಜರಿದ್ದರು.