ಆತಂಕದ ನಡುವೆಯೇ ಆರ್ಥಿಕತೆಗೆ ಒತ್ತು; ಸಂಡೇ ಕರ್ಫ್ಯೂನೂ ಕ್ಲೋಸ್!!

473

ಬೆಂಗಳೂರು: ಕೇಂದ್ರ ಸರ್ಕಾರ ಅನ್‌ಲಾಕ್ ೩ಗೆ ಮಾರ್ಗಸೂಚಿ ಪ್ರಕಟಿಸಿರುವ ಬೆನ್ನ ರಾಜ್ಯ ಸರ್ಕಾರ ಯಥಾವತ್ತಾಗಿ ಅದನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರ ಜೊತೆಗೆ ಸಂಡೇ ಲಾಕ್‌ಡೌನ್, ಶನಿವಾರ ರಜೆ ದಿನವನ್ನೂ ರದ್ದುಗೊಳಿಸಿ ಆದೇಶಿಸಿದೆ.
ಕೇಂದ್ರದ ಮಾರ್ಗಸೂಚಿಯಂತೆ ಆ.೧ರಿಂದ ನೈಟ್ ಕರ್ಫ್ಯೂ ರದ್ದು, ಆಗಸ್ಟ್ ೫ರಿಂದ ಯೋಗ, ಜಿಮ್ ಓಪನ್ ಸೇರಿದಂತೆ ಆಗಸ್ಟ್ ೩೧ರವರೆಗೆ ಶಾಲೆ ಕಾಲೇಜ್ ನಿರ್ಬಂಧ ಮುಂದುವರಿಕೆಯನ್ನು ಪಾಲಿಸಿದೆ. ಜೊತೆಗೆ ಥಿಯೇಟರ್, ಬಾರ್, ರೆಸ್ಟೋರೆಂಟ್, ಮೆಟ್ರೋಗೆ ಅವಕಾಶ ಇಲ್ಲ ಎನ್ನಲಾಗಿದೆ. ದಿನೇ ದಿನೇ ರಾಜ್ಯದೆಲ್ಲೆಡೆ ಕರೋನಾ ಆರ್ಭಟ ಹೆಚ್ಚಾಗುತ್ತಿದ್ದರೂ ಸರ್ಕಾರದ ಈ ನಡೆ ಆಶ್ಚರ್ಯ ತಂದಿದೆ.