ಅ.೬:ಮೇಕಪ್-ಕೇಶ ವಿನ್ಯಾಸ ಕಾರ್ಯಾಗಾರ

483

ಶಿವಮೊಗ್ಗ: ಐಜಿಬಿಎ ಇಂಟರ್ ನ್ಯಾಷನಲ್ ಗೋಲ್ಡನ್ ಬ್ಯೂಟಿ ಅಕಾಡೆಮಿ, ಎಂ.ಎಸ್ ಎಂಟರ್ ಪ್ರೈಸಸ್ ಹಾಗೂ ಸುಮಾ ಅಕಾಡೆಮಿ ಸಹಯೋಗದಲ್ಲಿ ಅ.೬ರ ಬೆಳಿಗ್ಗೆ ೧೧ ರಿಂದ ಸಂಜೆ ೪ರವರೆಗೂ ಪತ್ರಿಕಾ ಭವನ ದಲ್ಲಿ ಮೇಕಪ್ ಹಾಗೂ ಕೇಶ ವಿನ್ಯಾಸ ಕಲಿಕೆ ಬಗ್ಗೆ ಕಾರ್‍ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಐಜಿಬಿಎ ಇಂಟರ್‌ನ್ಯಾಷನಲ್ ಗೋಲ್ಡನ್ ಬ್ಯೂಟಿ ಅಕಾಡೆಮಿಯ ಕಲಾವಿದೆ ಸುಮಲತಾ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಬ್ಯೂಟಿಷಿಯನ್ ತಜ್ಞರು ಭಾಗವಹಿಸಿ ಮೇಕಪ್ ಮಾಡುವ ವಿಧಾನ ಹಾಗೂ ವಿವಿಧ ಬಗೆಯ ಕೇಶವಿನ್ಯಾಸಗಳನ್ನು ಮಾಡುವ ವಿಧಾನಗಳನ್ನು ತಿಳಿಸಿಕೊಡಲಿದ್ದಾರೆ ಎಂದು ವಿವರಿಸಿದರು.
ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ತರಬೇತಿ ಪಡೆದು ಉದ್ಯೋಗ ಕಲ್ಪಿಸಿಕೊಳ್ಳಲು ಈ ಕಾರ್ಯಾಗಾರ ಅನುಕೂಲವಾಗಲಿದೆ. ಕಾರ್ಯಾಗಾರ ದಲ್ಲಿ ೧೦೦ ಜನರಿಗೆ ಮಾತ್ರ ಅವಕಾಶ ವಿದ್ದು, ಪ್ರವೇಶದರ ಒಬ್ಬರಿಗೆ ೬೦೦ ರೂ.ಶುಲ್ಕ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೭೩೩೮೬೫೮೭೩೯ ಅಥವಾ ೯೪೪೯೫೪ ೩೬೧೪ರಲ್ಲಿ ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಮತಾಶೆಟ್ಟಿ ಉಪಸ್ಥಿತರಿದ್ದರು.