ಅ.೫: ದತ್ತಿ ಉಪನ್ಯಾಸ ಕಾರ್ಯಕ್ರಮ

428

ಹೊನ್ನಾಳಿ: ತಾಲೂಕು ಕಸಾಪ ಮತ್ತು ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ಅ.೫ರ ಬೆಳಿಗ್ಗೆ ೧೧.೩೦ಕ್ಕೆ ಇಲ್ಲಿನ ಟಿಬಿ ವೃತ್ತದ ನಿವತ್ತ ನೌಕರರ ಭವನದಲ್ಲಿ ೨೦೨೦-೨೧ನೇ ಸಾಲಿನ ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಎಚ್. ಗೋವಿಂದಪ್ಪ ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಶರಣರ ವಚನಗಳಲ್ಲಿ ಬದುಕಿನ ಶ್ರೇಷ್ಠತೆ ಎಂಬ ವಿಷಯ ಕುರಿತು ಸಾಹಿತಿ ಯು.ಎನ್. ಸಂಗನಾಳಮಠ ಉಪನ್ಯಾಸ ನೀಡುವರು. ಶಿಮುಲ್ ಮಾಜಿ ಅಧ್ಯಕ್ಷ ಡಿ.ಜಿ. ಷಣ್ಮುಖ ಪಾಟೀಲ್, ದತ್ತಿ ದಾನಿಗಳಾದ ಎಚ್.ಎಸ್. ಬಸವರಾಜ್, ಜಯಮ್ಮ ರುದ್ರಪ್ಪ, ಕುರುವ ಶಾಲೆಯ ಮುಖ್ಯ ಶಿಕ್ಷಕ ಎ.ಕೆ. ಚನ್ನೇಶ್ವರ, ಕಸಾಪ ಗೌರವ ಕಾರ್ಯದರ್ಶಿ ಕೆ. ಶೇಖರಪ್ಪ, ಕೆ.ಜಿ. ಕರಿಬಸಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಂ. ಸಿದ್ಧಯ್ಯ, ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಎಂ. ಜಯಪ್ಪ ಮತ್ತಿತರರು ಅತಿಥಿ ಗಳಾಗಿ ಭಾಗವಹಿಸುವರು. ಶಾಂತಾ ದೇವಿ ಹಿರೇಮಠ ವಚನ ಗಾಯನ ಕಾರ್ಯಕ್ರಮ ನಡೆಸಿಕೊಡುವರು.
ಶ್ರೀಮತಿ ಶ್ರೀ ಗುರುನಂಜಪ್ಪ ಗೌಡ್ರ ಹನುಮಂತಪ್ಪ, ಶ್ರೀಮತಿ ಪಂಕಜ ಶ್ರೀ ಶರತ್‌ಕುಮಾರ್ ಎಸ್.ಪಾಟೀಲ್ ದತ್ತಿ, ಕೋಟೆಹಾಳ್ ಶ್ರೀಮತಿ ಬಸಮ್ಮ ಹಂಪೋಳ್ ಶಿವಪ್ಪ ದತ್ತಿ, ದಿ. ಕೋಟೆ ಕರಿಗೌಡ್ರ ರುದ್ರಪ್ಪ ದತ್ತಿ ಕಾರ್ಯಕ್ರಮ ಗಳು ನಡೆಯಲಿವೆ. ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸ ಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ವಿನಂತಿಸಿzರೆ.
ಕಾದಂಬರಿ ಲೋಕಾರ್ಪಣೆ:
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಂ. ಸಿದ್ಧಯ್ಯ ವಿರಚಿತ ಕವಿದ ಕಾರ್ಮೋಡ ಕಳಚಿತು ಕಾದಂಬರಿ ಲೋಕಾರ್ಪಣೆ ಸಮಾರಂಭ ಅ.೫ರ ಸೋಮವಾರ ಬೆಳಿಗ್ಗೆ ೧೧.೩೦ಕ್ಕೆ ಇಲ್ಲಿನ ಟಿಬಿ ವೃತ್ತದ ನಿವೃತ್ತ ನೌಕರರ ಭವನದಲ್ಲಿ ನಡೆಯಲಿದೆ. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎನ್.ಎಚ್. ಗೋವಿಂದಪ್ಪ ಕಾದಂಬರಿ ಬಿಡುಗಡೆ ಮಾಡುವರು.
ಸಿರಿಗನ್ನಡ ವೇದಿಕೆ ಅಧ್ಯಕ್ಷ ಯು.ಎನ್. ಸಂಗನಾಳಮಠ, ಸಾಹಿತಿ ಕೆ.ಪಿ. ದೇವೇಂದ್ರಯ್ಯ ಕಾದಂಬರಿ ಕುರಿತು ಮಾತನಾಡುವರು ಎಂದು ಪ್ರಕಟಣೆ ತಿಳಿಸಿದೆ.