ಅ.೨೨: ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ಚಿತ್ರಕ್ಕೆ ಚಾಲನೆ

810

ನ್ಯಾಮತಿ: ಮಧ್ಯ ಕರ್ನಾಟಕದ ಪುರಾಣ ಪ್ರಸಿದ್ದ ಸಿದ್ದಿ ಪುರುಷ ಪವಾಡ ಪುರುಷ, ಭಕ್ತರ ಆರಾಧ್ಯ ದೈವ ರಾಂಪುರ, ಬಸವಾಪಟ್ಟಣ, ಗುಂಡೇರಿ ಹಿರಿಯೂರು ಕ್ಷೇತ್ರದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ `ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ’ ರುದ್ರ ಕಡೆಯಾರ್ ಅವರ ನಿರ್ದೇಶನ ದಲ್ಲಿ ಅ.೨೨ ರಂದು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಸಮ್ಮುಖದಲ್ಲಿ ಈ ಚಿತ್ರಕ್ಕೆ ಚಾಲನೆ ದೊರಕಲಿದೆ.
`ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ ‘ ಕುರಿತು ಸಿನಿಮಾ ಪೋಸ್ಟರ್‌ಗಳನ್ನು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಂಸ್ಥಾನ ಪೀಠಾಧ್ಯಕ್ಷ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಅನಾವರಣಗೊಳಿಸಿದರು.
ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮೀಜಿ ಮಾತನಾಡಿ , ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಇತಿಹಾಸ, ಚರಿತ್ರೆ, ಭಕ್ತಿ ಪ್ರಧಾನ ಸಾರುವ ಚಿತ್ರಗಳು ಕಾಣುತ್ತಿದ್ದವು ಅದರೆ ಇತ್ತೀಚಿನ ದಿನಗಳಲ್ಲಿ ಕೇವಲ ಕಮರ್ಷಿಯಲ್ ಸಿನಿಮಾಗಳಿಗೆ ಸೀಮಿತವಾಗಿರುವ ದಿನಮಾನಗಳಲ್ಲಿ ಭಕ್ತಿ ಪ್ರಧಾನ ಒಳಗೊಂಡ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ ಸಿನಿಮಾ ಗಳನ್ನೂ ತರುವ ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿಯವರು ಈಗಲೂ ಸಕಲ ಸಂಕಷ್ಟಗಳನ್ನು ಭಕಾಧಿಗಳಿಗೆ ಪರಿಹರಿಸಿರುವ ಉದಾಹರಣೆಗಳಿವೆ. ಇಂತಹ ಸಿದ್ದಿಪುರುಷರ ಅನೇಕ ಪವಾಡಗಳು ಈಗಲೂ ಪ್ರಚಲಿತ. ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಬಗ್ಗೆ ಹಲವಾರು ವಿಚಾರಗಳನ್ನು ಅನೇಕ ಕೋನಗಳಲ್ಲಿ ಸನ್ನಿವೇಶ ಪರದೆಯ ಮೇಲೆ ತರಲು ಸಕಲ ಸಿದ್ದತೆ ಮಾಡಿ ಕೊಳ್ಳಲಾಗಿದೆ ಎಂದು ಚಿತ್ರ ನಿರ್ದೇಶಕ ರುದ್ರ ಕಡೆಯಾರ್ ತಿಳಿಸಿದರು.
ಕಡೆಯಾರ್ ಸಿನಿಮಾಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ವಾಗುತ್ತಿದ್ದು ನಿರ್ಮಾಣದ ಹೊಣೆ ಯನ್ನು ಶಿಲ್ಪರುದ್ರೇಶವರು ಹೊತ್ತಿzರೆ, ಛಾಯಾಗ್ರಾಹಣ ರವಿ ದಶವಾರ, ಸಂಕಲನ ಈಗಲ್ ಸುಡಿಯೋ, ಕಲೆ ಶಿವಕಾಂತ, ಸಂಗೀತ ಚೇತನ್ ನಾರಾಯಣಸ್ವಾಮಿ, ಕಲೆ ಶಿವಕಾಂತ ಎಸ್.ಥರಕಾರ, ಸಹನಿರ್ದೇಶನ ರಕಿತ್ ಉತ್ತಿನದ್ಕ , ನಿರ್ಮಾಣ ಸಹಕಾರ ನಿರಂಜನ್ ಮೂರ್ತಿ, ಪ್ರಸಾದನ ನವೀನ್ ನಂಜನಗೂಡು, ಮ್ಯಾನೇಜರ್ ಓ.ಬಸವರಾಜು, ಸ್ಟೀಲ್ ಮೋಹನ್ ಕುಮಾರ್ ನಲ್ಲೂರು ಹೊತ್ತಿzರೆ, ಹೆಸರಾಂತ ನಟ ನಟಿಯರು ಅಲ್ಲದೆ . ಸ್ಥಳೀಯ ಪ್ರತಿಬೆಗಳು ಈ ಸಿನಿಮಾದಲ್ಲಿ ಕಾಣಿಸಿ ಕೊಳ್ಳಲಿದ್ದು ಚಿತ್ರದ ಚಿತ್ರಿಕರಣವನ್ನು ರಾಂಪುರ, ಬಸವಾಪಟ್ಟಣ, ಗುಂಡೇರಿ, ಹಿರಿಯೂರು, ಕುರುವಗೆಡ್ಡೆ, ಹೊನ್ನಾಳಿ, ತೀರ್ಥರಾಮೇಶ್ವರ, ಕರಡಿಕಲ್ಲು ಸೇರಿದಂತೆ ಸುತ್ತ ಮುತ್ತ ಪರಿಸರದಲ್ಲಿ ನಡೆಯಲಿದೆ ಎಂದರು.
`ಸದ್ಗುರು ಶಿವಯೋಗಿ ಶ್ರೀ ಹಾಲಸ್ವಾಮಿ ಚರಿತ್ರೆ’ ಕುರಿತು ಸಿನಿಮಾ ಪೋಸ್ಟರ್ ಅನಾವರಣ ಕಾರ್ಯಕ್ರಮ ದಲ್ಲಿ ಮಠದ ವಕ್ತಾರ ಎಂ.ಎಸ್. ಶಾಸ್ತ್ರಿಹೊಳೆಮಠ್, ಶಿವಾನಂದಯ್ಯ ಮಠದ್, ಬೆನಕನಹಳ್ಳಿಕುಮಾರ್, ಛಾಯಾಗ್ರಾಹಕ ರವಿ ದಶವಾರ, ಶಿವಕಾಂತ ಎಸ್.ಥರಕಾರ ,ಅಭಿನವ್ ಎನ್.ಬೇವೂರು, ಗ್ರಾಮದ ಮುಖಂಡರಾದ ಪ್ರಕಾಶ್‌ಯ್ಯ, ತಿಮ್ಮಯ್ಯ, ಮತ್ಯುಂಜಯಯ್ಯ ಸೇರಿದಂತೆ ಇತರರು ಹಾಜರಿದ್ದರು.