ಅವೈಜ್ಞಾನಿಕ ಕಾಮಗಾರಿ: ಸಾರ್ವಜನಿಕರ ಆಕ್ರೋಶ

474

ಭದ್ರಾವತಿ: ನಗರದ ಭೂತನಗುಡಿ ಪ್ರದೇಶದಲ್ಲಿ ನಗರಸಭೆ ವತಿಯಿಂದ ಲಕ್ಷಾಂತರ ರೂ ವೆಚ್ಚದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಸಮಯದಲ್ಲಿ ರಸ್ತೆ ವಿಸ್ತರಣೆ ಆಗುವುದರ ಬದಲಿಗೆ ರಸ್ತೆ ಬದಿಯಲ್ಲಿರುವ ಲೈಟ್ ಕಂಬಗಳನ್ನು ಚರಂಡಿ ಕಾಮಗಾರಿ ಪ್ರಯುಕ್ತ ರಸ್ತೆ ಬದಿಗೆ ನಿಲ್ಲಿಸಿ ರಸ್ತೆಯನ್ನು ಕಿರಿದಾಗಿ ಮಾಡುವ ಮೂಲಕ ಕಾಮಗಾರಿ ನಡೆಸುತ್ತಿರು ವುದು ವಿಪರ್ಯಾಸದ ಸಂಗತಿಯಾಗಿದೆ.
ದಶಕಗಳ ಕಾಲದ ಹಳೇ ಚರಂಡಿಯನ್ನು ಬಾಕ್ಸ್ ಡ್ರೈನೇಜ್ ಆಗಿ ನಿರ್ಮಾಣ ಮಾಡಿದ್ದರು. ಆದರೆ ಈಗ ಪುನಃ ಅದೇ ಚರಂಡಿಯನ್ನು ರಾಜ ಕಾಲುವೆ ನೀರು ಹೋಗುವ ಸಲುವಾಗಿ ದೊಡ್ಡದಾಗಿ ಚರಂಡಿ ನಿರ್ಮಾಣ ಮಾಡುವ ಕಾಮಗಾರಿಯನ್ನು ನಡೆಸುತ್ತಿzರೆ.
ಆದರೆ ಈ ಹಿಂದೆ ಬಾಕ್ಸ್ ಡ್ರೈನೇಜ್ ಕಾಮಗಾರಿ ನಡೆಸುವ ಸಂಧರ್ಭದಲ್ಲಿ ಮುಂದಾಲೋಚನೆ ಯಿಂದ ನಗರಸಭೆ ಇಂಜೀನೀಯರ್ ಗಳು ರಾಜ ಕಾಲುವೆ ಚರಂಡಿ ಕಾಮಗಾರಿಯ ಪ್ಲಾನ್ ಮಾಡಿ ಕಾಮಗಾರಿ ಮಾಡಿದ್ದರೆ ನಗರಸಭೆಗೆ ಲಕ್ಷಾಂತರ ರೂಗಳ ಉಳಿತಾಯವಾಗುತ್ತಿತ್ತು.
ಒಟ್ಟಿನಲ್ಲಿ ನಗರಸಭೆಯಲ್ಲಿ ಈಗ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಅಧಿಕಾರಿಗಳು ಹಾಗು ಇಂಜೀನೀಯರ್‌ಗಳ ದರ್ಬಾರ್ ನಡೆಯುತ್ತಿz ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.