ಅವೈಜ್ಞಾನಿಕವಾಗಿ ನಡೆದುಕೊಳ್ಳಿ ಎಂದು ಸಂತರು- ಶರಣರು ಹೇಳಿಲ್ಲ…

511

ಹೊನ್ನಾಳಿ: ಧಾರ್ಮಿಕ, ಸಾಂಪ್ರದಾಯಿಕ ಸೇರಿದಂತೆ ಯಾವುದೇ ಕಾರ್ಯಕ್ರಮವಾದರೂ ಮಾಸ್ಕ್ ಧರಿಸುವುದನ್ನು ಮಾತ್ರ ಯಾರೂ ಮರೆಯಬಾರದು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ತಾಲೂಕಿನ ಕೊಡಚಗೊಂಡನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವೀರಭದ್ರದೇವರ ಕೆಂಡದರ್ಚನೆ ಹಾಗೂ ಗುಗ್ಗುಳ ಮಹೋತ್ಸವದಲ್ಲಿ ದೇವರುಗಳನ್ನು ಹೊತ್ತಿದ್ದ ಭಕ್ತರು ಮಾಸ್ಕ್ ಧರಿಸದೇ ಇದ್ದ ಪ್ರಯುಕ್ತ ಅವರಿಗೆ ಮಾಸ್ಕ್ ತೊಡಿಸಿ ನಂತರ ಅವರು ಮಾತನಾಡಿದರು.
ಜನರು ಸೇರುವ ಯಾವುದೇ ಸಭೆ, ಸಮಾರಂಭವಾಗಲಿ, ಉತ್ಸವಗಳಾಗಲಿ ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬಾರದು. ಜನ ಸೇರುವ ಸ್ಥಳದಲ್ಲಿ ಕೊರೊನಾ ವೈರಸ್ ಸೋಂಕು ವೇಗವಾಗಿ ಹರಡುತ್ತದೆ. ಆದ್ದರಿಂದ, ಜನರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ನಮ್ಮ ದೇಶದ ಜನರಿಗೆ ದೇವರಲ್ಲಿ ಭಕ್ತಿ, ಗೌರವ ಹೆಚ್ಚಾಗಿದೆ. ದೇವರಲ್ಲಿ ಭಕ್ತಿ ಗೌರವವನ್ನು ಇಟ್ಟುಕೊಂಡು ವಿಶ್ವವ್ಯಾಪಿ ಯಾಗಿರುವ ಕೊರೊನಾ ಹೊಡೆ ದೋಡಿಸಲು ಮಾಸ್ಕ್ ಧರಿಸುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಅವೈeನಿಕವಾಗಿ ನಡೆದುಕೊಳ್ಳಿ ಎಂದು ನಮ್ಮ ಸಂತ, ಶರಣರು ಯಾವತ್ತೂ ಹೇಳಿಲ್ಲ. ಅಂಥವರನ್ನು ಆಶಿರ್ವದಿಸುವುದೂ ಇಲ್ಲ. ಧರ್ಮದ ತಳಹದಿಯ ಮೇಲೆ ನೀವೆಲ್ಲರೂ ಬಾಳಿರಿ ಎಂದು ಬೋಧಿಸುವ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಸಿಕೊಂಡು ಹೋಗುವಂತೆ ಅರಿವು ಮೂಡಿಸುತ್ತಾ ಬಂದಿzರೆ ಎಂದ ಅವರು, ನಿಮ್ಮಗಳ ಆರೋಗ್ಯ ಕಾಪಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದು ವಿವರಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಈಗಾಗಲೇ ಕೊರೊನಾ ತನ್ನ ಅಟ್ಟಹಾಸ ಮೆರೆದು ೩೦೦ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ದರಿಂದ, ನಾನು ಮದುವೆ, ದೇವರ ಉತ್ಸವ ಕಾರ್ಯಗಳಿಗೆ ತಪ್ಪದೇ ಹಾಜರಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಜಾಗೃತಿ ಮೂಡಿಸುತ್ತಿದ್ದೇನೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ಸದಸ್ಯೆ ಉಮಾ ರಮೇಶ್, ನ್ಯಾಮತಿ ತಾಪಂ ಉಪಾಧ್ಯಕ್ಷ ಡಿ. ಮರಿಕನ್ನಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.