ಅವಳಿ ಸಹೋದರಿಯರ ಸಾಧನೆಗೊಂದು ಸಲಾಂ…

476

ಶಿವಮೊಗ್ಗ ಜಿಯ ಸಾಗರ ತಾಲ್ಲೂಕಿನ ಲಾವಿಗೆರೆ ಎಂಬ ಪುಟ್ಟ ಹಳ್ಳಿಯ ಅವಳಿ ಹೆಣ್ಣು ಮಕ್ಕಳ ಜೀವನ ಯಶೋಗಾಥೆಯ ಕಥೆಯಿದು..
ಆ ಊರಿನ ಪುಟ್ಟ ರೈತ ಕುಟುಂಬದ ಗzಯಲ್ಲಿ ಕೆಲಸ ಮಾಡೋ ಭಾಗ್ಯಮ್ಮ ಮತ್ತು ಲಿಂಗಪ್ಪರಿಗೆ ನಾಲ್ವರು ಪುತ್ರಿಯರು. ಲಿಂಗಪ್ಪ ನವರು ಸ್ವರ್ಗಸ್ಥರಾಗಿದ್ದು ಕುಟುಂಬದ ನಿರ್ವಹಣೆ ಭಾಗ್ಯಮ್ಮರ ಮೇಲಿದೆ.
ಅವಳಿ ಸಹೋದರಿಯರಾದ ಮಧು ಮತ್ತು ಮಮತಾ ಪೋಲಿಸ್ ಹುzಯ ಕನಸು ಕಂಡ ಹಳ್ಳಿಯ ಹೆಣ್ಣು ಮಕ್ಕಳು. ಕೊನೆಗೂ ಲಾಠಿ ಮತ್ತು ಖಾಕಿ ಇವರ ಕೈ ಸೇರಿದೆ. ಹೌದು ಅವಳಿ ಸಹೋದರಿಯರು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುz ಗಿಟ್ಟಿಸಿzರೆ. ಅದೂ ಏಕ ಕಾಲಕ್ಕೆ!
ಅವಳಿ ಸಹೋದರಿಯರ ಓದಿನ ಪ್ರೀತಿ ಅವರನ್ನು ಪೋಲೀಸ್ ಹುzಯತ್ತ ಕೊಂಡೊಯ್ದಿದೆ ಎಂದರೆ ತಪ್ಪಲ್ಲ. ಎಂ.ಎ. ಬಿಎಡ್ ಪದವಿ ಗಳಿಸಿ ಹಗಲು ರಾತ್ರಿ ಪರಿಶ್ರಮದಿಂದ ಕೊನೆಗೂ ಸಾಧನೆಯ ಮೆಟ್ಟಿಲೇರಿzರೆ.
ತಂದೆಯಿಲ್ಲದ ಪರಿಸ್ಥಿತಿಯಲ್ಲಿಯೂ ಹಳ್ಳಿಲ್ಲಿ ಹುಟ್ಟಿ ಬೆಳೆದ ಈ ಅವಳಿ ಸಹೋದರಿಯರು ಬಹು ಪ್ರಯಾಸದಿಂದ ತಮ್ಮ ಕನಸನ್ನು ಮುಟ್ಟಿದ ಪರಿಯಿದೆ ಅಲ್ವಾ.. ಖಟ ಐಠಿ ಞ್ಠoಠಿ ಚಿಛಿ Zmmಛ್ಚಿಜಿZಚ್ಝಿಛಿ. ಇಂತಹ ಹೆಣ್ಣು ಮಕ್ಕಳ ಜೀವನ ಯಶೋಗಾಥೆ ನೂರಾರು ಹೆಣ್ಣು ಮಕ್ಕಳ ಮನದಲ್ಲಿ ಚಿಗುರಲಿ, ಶಿಕ್ಷಣದ ಮಹತ್ವ ತಿಳಿಯಲಿ ಎಂಬುದೇ ನಮ್ಮ ಆಸೆ..
ಹೊಸನಾವಿಕ ಬಳಗದಿಂದ ಆ ಅವಳಿ ಸಹೋದರಿಯರಿಗೊಂದು ಸಲಾಂ.