ಅಲೆಮಾರಿ ಜನಾಂಗಕ್ಕೆ ಶಾಶ್ವತ ವಸತಿ ಕಲ್ಪಿಸಲು ಆಗ್ರಹಿಸಿ ಬಿಎಸ್‌ಪಿಯಿಂದ ಡಿಸಿಗೆ ಮನವಿ

444

ಶಿವಮೊಗ್ಗ: ಅಲೆಮಾರಿ ಹಕ್ಕಿಪಿಕ್ಕಿ ಜನಾಂಗಕ್ಕೆ ಶಾಶ್ವತ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿಯ ನೇತೃತ್ವದಲ್ಲಿ ಸಾಗರ ರಸ್ತೆಯ ಶ್ರೀರಾಂಪುರ ಗ್ರಾಮದ ಅಲೆಮಾರಿ ಜನಾಂಗದವರು ಇಂದು ಡಿಸಿಗೆ ಮನವಿ ಸಲ್ಲಿಸಿದರು.
ಸಾಗರ ರಸ್ತೆಯ ಶ್ರೀರಾಂ ಪುರ ಗ್ರಾಮದ ಹತ್ತಿರ ಇರುವ ಖಾಸಗಿ ಜಮೀನಿನಲ್ಲಿ ಹಕ್ಕಿಪಿಕ್ಕಿ ಜನಾಂಗದವರು ತಾತ್ಕಾಲಿಕ ಜೋಪಡಿಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕುಟುಂಬಗಳು ವಾಸಮಾಡುತ್ತಿದೆ. ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರ ಮಾಡುತ್ತಾರೆ. ಒಮ್ಮೆ ಸಂಸದರು ಹೀಗೆ ಪೆನ್ನು ಮಾರಾಟ ಮಾಡಲು ಹೋದಾಗ ಭಿಕ್ಷುಕರು ಎಂದು ರಿಮ್ಯಾಂಡ್ ಹೋಂಗೆ ಕಳುಹಿ ಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಡಳಿತ ಈ ಅಲೆಮಾರಿಗಾಗಿ ವೀರಣ್ಣನಬೆನವಳ್ಳಿ ಗ್ರಾಮದ ಸ.ನಂ.೭೮ರಲ್ಲಿ ೪ ಎಕರೆ ಜಮೀನನ್ನು ನೀಡಿದೆ. ಆದರೆ ಅಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಗಳಿಲ್ಲ. ಹಾಗಾಗಿ ಈ ಅಲೆಮಾರಿಗಳಿಗೆ ಪಡಿತರ ಕಾರ್ಡ್ ನೀಡಬೇಕು, ಮನೆ ಕಟ್ಟಿಸಿಕೊಡಬೇಕು,ಆಧಾರ್ ಕಾರ್ಡ್ ನೀಡಬೇಕು, ಮತದಾನದ ಹಕ್ಕು ಕೊಡಬೇಕು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸ ಬೇಕು, ರುದ್ರಭೂಮಿ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ, ಪ್ರಮುಖ ರಾದ ಮಾರುತಿ, ತಮ್ಮಡಿಹಳ್ಳಿ ಲೋಕೇಶ್, ರಾಜು, ರವಿ, ಲಕ್ಷ್ಮೀಪತಿ, ಗೌರಮ್ಮ, ರೂಪ ಇನ್ನಿತರರು ಭಾಗವಹಿಸಿದ್ದರು. ಶಿವಮೊಗ್ಗ: ಅಲೆಮಾರಿ ಹಕ್ಕಿಪಿಕ್ಕಿ ಜನಾಂಗಕ್ಕೆ ಶಾಶ್ವತ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಾರ್ಟಿಯ ನೇತೃತ್ವದಲ್ಲಿ ಸಾಗರ ರಸ್ತೆಯ ಶ್ರೀರಾಂಪುರ ಗ್ರಾಮದ ಅಲೆಮಾರಿ ಜನಾಂಗದವರು ಇಂದು ಡಿಸಿಗೆ ಮನವಿ ಸಲ್ಲಿಸಿದರು.
ಸಾಗರ ರಸ್ತೆಯ ಶ್ರೀರಾಂ ಪುರ ಗ್ರಾಮದ ಹತ್ತಿರ ಇರುವ ಖಾಸಗಿ ಜಮೀನಿನಲ್ಲಿ ಹಕ್ಕಿಪಿಕ್ಕಿ ಜನಾಂಗದವರು ತಾತ್ಕಾಲಿಕ ಜೋಪಡಿಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಕುಟುಂಬಗಳು ವಾಸಮಾಡುತ್ತಿದೆ. ಹೊಟ್ಟೆಪಾಡಿಗಾಗಿ ಬೀದಿ ವ್ಯಾಪಾರ ಮಾಡುತ್ತಾರೆ. ಒಮ್ಮೆ ಸಂಸದರು ಹೀಗೆ ಪೆನ್ನು ಮಾರಾಟ ಮಾಡಲು ಹೋದಾಗ ಭಿಕ್ಷುಕರು ಎಂದು ರಿಮ್ಯಾಂಡ್ ಹೋಂಗೆ ಕಳುಹಿ ಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಡಳಿತ ಈ ಅಲೆಮಾರಿಗಾಗಿ ವೀರಣ್ಣನಬೆನವಳ್ಳಿ ಗ್ರಾಮದ ಸ.ನಂ.೭೮ರಲ್ಲಿ ೪ ಎಕರೆ ಜಮೀನನ್ನು ನೀಡಿದೆ. ಆದರೆ ಅಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಗಳಿಲ್ಲ. ಹಾಗಾಗಿ ಈ ಅಲೆಮಾರಿಗಳಿಗೆ ಪಡಿತರ ಕಾರ್ಡ್ ನೀಡಬೇಕು, ಮನೆ ಕಟ್ಟಿಸಿಕೊಡಬೇಕು,ಆಧಾರ್ ಕಾರ್ಡ್ ನೀಡಬೇಕು, ಮತದಾನದ ಹಕ್ಕು ಕೊಡಬೇಕು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸ ಬೇಕು, ರುದ್ರಭೂಮಿ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎ.ಡಿ.ಶಿವಪ್ಪ, ಪ್ರಮುಖ ರಾದ ಮಾರುತಿ, ತಮ್ಮಡಿಹಳ್ಳಿ ಲೋಕೇಶ್, ರಾಜು, ರವಿ, ಲಕ್ಷ್ಮೀಪತಿ, ಗೌರಮ್ಮ, ರೂಪ ಇನ್ನಿತರರು ಭಾಗವಹಿಸಿದ್ದರು.