ಅಲೆಮಾರಿಗಳಿಗೆ ಉಚಿತ ದಿನಸಿ

632

ಶಿವಮೊಗ್ಗ: ನಗರದಲ್ಲಿ ಕೋವಿಡ್-೧೯ ವೈರಸ್ ತಡೆಗಾಗಿ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದ ಮಂಗಳ ಮಂದಿರದ ಸಮೀಪ ಆಂಧ್ರ ಪ್ರದೇಶದಿಂದ ಬಂದಿರುವ ಸುಮಾರು ೨೦ ಅಲೆಮಾರಿ ಕುಟುಂಬಗಳಿಗೆ ಹಸಿವಿನಿಂದ ರಕ್ಷಿಸುವ ಸಲುವಾಗಿ ನಗರದ ಅಮೃತಹಸ್ತ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅನಂದ್ ಯಾದವ್ ತಿಪಟೂರು ಮತ್ತು ಪುಣ್ಯಭೂಮಿ ತುಳುನಾಡು ಸೇವಾ ಫೌಂಡೇಶನ್ ಸಂಸ್ಥಾಪಕ ಚಂದ್ರಶೇಖರ್ ಪೂಜಾರಿ ಅವರುಗಳು ತಮ್ಮ ಟ್ರಸ್ಟ್‌ಗಳ ವತಿಯಿಂದ ಈ ಕುಟುಂಬಗಳಿಗೆ ಬೇಕಾಗುವ ದಿನಸಿ ಪದಾರ್ಥಗಳನ್ನು ಕೊಡುಗೆಯಾಗಿ ನೀಡಿ ಹೃದಯವೈಶಾಲ್ಯತೆ ಮೆರೆದಿದ್ದಾರೆ.
ಶಿವಮೊಗ್ಗ ದೊಡ್ಡಪೇಟೆ ವೃತ್ತ ನೀರಿಕ್ಷಕ ವಸಂತ್ ಕುಮಾರ್ ಅವರು ಸದರಿ ಕುಟುಂಬಗಳಿಗೆ ಟ್ರಸ್ಟ್ ವತಿಯಿಂದ ನೀಡಲಾದ ದಿನಸಿ ವಿತರಣೆ ಮಾಡಿದರು .
ಎ.ಎಮ್. ಎಂಟರ್ ಪ್ರೈಸಸ್‌ನ ರಾಜು ಅರ್, ನಾಗರಾಜ್ ಮತ್ತು ಶಿಕ್ಷಕ ಯೊಗೀಶ್ ಉಪಸ್ಥಿತರಿದ್ದರು.