ಅಪ್ಪಾಜಿಗೌಡರ ಸಾವಿಗೆ ಜಿಲ್ಲಾಡಳಿತದ ನಿರ್ಲಕ್ಷವೇ ಕಾರಣ: ಆರ್‌ಎಂಎಂ

486

ತೀರ್ಥಹಳ್ಳಿ : ಭದ್ರಾವತಿಯ ಮಾಜಿ ಶಾಸಕ ಅಪ್ಪಾಜಿ ಗೌಡರ ನಿಧನಕ್ಕೆ ಜಿಡಳಿತದ ನಿರ್ಲಕ್ಷ್ಯತನವೇ ಕಾರಣ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಜೆಡಿಎಸ್ ಮುಖಂಡರೂ ಆದಂತಹ ಆರ್.ಎಂ.ಮಂಜುನಾಥ ಗೌಡ ಆರೋಪಿಸಿzರೆ.
ಭದ್ರಾವತಿಯ ಮಾಜಿ ಶಾಸಕರು, ಜನರ ನಡುವೆಯೇ ಬದುಕನ್ನು ಸಾಗಿಸುತ್ತ ಸದಾ ಹೋರಾಟದಲ್ಲಿ ತೊಡಗಿಕೊಂಡಿದ್ದಂತಹ ಜಿಯ ಜೆಡಿಎಸ್‌ನ ಪ್ರಮುಖ ನಾಯಕರು ಅದಂತಹ ಅಪ್ಪಾಜಿ ಗೌಡರು ಸೂಕ್ತ ಚಿಕಿತ್ಸೆ ದೊರಕದೆ ಕೊರೋನ ಹಿನ್ನೆಲೆಯಲ್ಲಿ ಮೃತಪಟ್ಟಿzರೆ.
ಇದಕ್ಕೆ ಜಿಡಳಿತದ ನಿರ್ಲಕ್ಷ್ಯ ತನವೇ ಕಾರಣವಾಗಿದ್ದು ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಗೌಡರು ಒತ್ತಾಯಿಸಿzರೆ.
ಅಪ್ಪಾಜಿ ಗೌಡರಿಗೆ ಸೂಕ್ತ ಚಿಕಿತ್ಸೆ ದೊರಕದಿರುವುದೇ ಅವರ ನಿಧನಕ್ಕೆ ಕಾರಣವಾಗಿದೆ. ಮಾಜಿ ಶಾಸಕರು ಗಳಿಗೇ ಇಂತಹ ಪರಿಸ್ಥಿತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು. ಅವರ ಆರೋಗ್ಯ ಹದಗೆಡುತ್ತಿದ್ದಂತೆಯೇ ಅನೇಕ ಆಸ್ಪತ್ರೆಗಳನ್ನು ಸಂಪರ್ಕಿಸ ಲಾಯಿತು. ಮೊನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಪ್ರಯತ್ನಿಸಲಾಯಿತು. ಅಪ್ಪಾಜಿಯವರಿಗೆ ಖಾಸಗಿ ,ಆಸ್ಪತ್ರೆಗಳು ಬೆಡ್ ನೀಡದೆ ಮೆಗ್ಗಾನ್‌ನಲ್ಲೂ ವೆಂಟಿಲೇಟರ್ ಬೆಡ್ ಇಲ್ಲ ಎಂದಾಗ ಡಿಸಿಗೆ ಫೋನಾಯಿಸಿದರೆ ಬೆಂಗಳೂರಿನ ಲ್ಲಿದ್ದೇನೆ ಎಂದರು. ಕೊನೆಯಲ್ಲಿ ಮೆಗ್ಗಾನ್ ನಲ್ಲಿ ಕೊನೆ ಹಂತದಲ್ಲಿ ಬೆಡ್ ಸಿಕ್ಕಿತು ಅಂತ ಬಂದರೆ ಅಷ್ಟರೊಳಗೆ ಅಪ್ಪಾಜಿಯವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸೂಕ್ತ ಚಿಕಿತ್ಸೆ ದೊರಕದೆ, ವೆಂಟಿಲೇಟರ್ ಸಿಗದೆಅವರು ಸಾವನ್ನಪ್ಪ ಬೇಕಾದಂತಹ ಪರಿಸ್ಥಿತಿ ಉದ್ಭವವಾಯಿತು.
ಜಿಯಲ್ಲಿ ಕೊರೋನವನ್ನು ಸಮರ್ಪಕವಾಗಿ ಎದುರಿಸುವ ರೀತಿ ಯಲ್ಲಿ ಜಿಡಳಿತ ಕ್ರಮಕೈಗೊಳ್ಳ ಬೇಕಿತ್ತು. ಎ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಅವಶ್ಯಕವಾಗಿ ಬೇಕಾದಂತಹ ವೆಂಟಿಲೇಟರ್‌ಗಳನ್ನು ಅಳವಡಿಸುವಂತಹ ಕೆಲಸ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರ ಕುವಂತಹ ವ್ಯವಸ್ಥೆಯನ್ನು ಕಲ್ಪಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಶಾಸಕರುಗಳಿಗೆ ಕೊರೋನ ತಗುಲಿದರೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆ ರವಾನಿಸು ವಂತಹ ಕೆಲಸ ಮಾಡುತ್ತಾರೆ ಆದರೆ ಮಾಜಿ ಶಾಸಕರುಗಳಿಗೇ ಇಂತಹ ಪರಿಸ್ಥಿತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿರುವ ಅವರು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಿಳಿಸಿzರೆ.
ನಾಲ್ಕು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿ ಅನೇಕ ಹೋರಾಟಗಳನ್ನು ನಡೆಸಿರುವ ಜಿಯ ಪ್ರಮುಖ ರಾಜಕಾರಣಿಗಳಲ್ಲಿ ಅಪ್ಪಾಜಿ ಗೌಡ ಸಹ ಒಬ್ಬರು .ಇಂತಹವರಿಗೇ ಈ ಪರಿಸ್ಥಿತಿ ಯಾದರೆ ಇನ್ನು ಜನಸಾಮಾನ್ಯರ ಪಾಡೇನು. ಈ ಬಗ್ಗೆ ಸಮಗ್ರವಾಗಿ ತನಿಖೆ ಯಾಗಬೇಕು. ಚಿಕಿತ್ಸೆಗೋಸ್ಕರ ಎ ಆಸ್ಪತ್ರೆಯನ್ನು ಅಲೆಯುವಂತೆ ಮಾಜಿ ಶಾಸಕರಿಗೆ ಆಗಿದ್ದು ಮಾತ್ರ ಈ ಜಿಯ ದುರಂತವೇ ಸೈ. ಮುಖ್ಯಮಂತ್ರಿಗಳ ತವರು ಜಿಯಾದ ಶಿವಮೆಗ್ಗ ಜಿಯಲ್ಲಿಯೇ ಕೋವಿಡ್ ರೋಗಿಗಳಿಗೆ ಈ ಪರಿಸ್ಥಿತಿ ಯಾಗಿದೆ. ಅದರಲ್ಲೂ ಮಾಜಿ ಶಾಸಕರಿಗೆ ಈ ರೀತಿ ಚಿಕಿತ್ಸೆ ದೊರಕದೆ ಸಾವನ್ನಪ್ಪಿರುವುದು ನಾಚಿಕೆಕೇಡು. ಇದರ ಸಮಗ್ರ ತನಿಖೆಯಾಗಬೇಕು ಜಿಡಳಿತ ಕೇವಲ ಬಾಯಿ ಮಾತಿನಲ್ಲಿ ಮಾತ್ರ ಕೋವಿಡ್ ನಿಯಂತ್ರಣ,ಚಿಕಿತ್ಸೆಯ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ದಿನಬೆಳಗಾದರೆ ಬೋಪರಾಕು ಹಾಕಿಕೊಳ್ಳುವುದನ್ನು ನೋಡುತ್ತಿದ್ದರೆ ಅಧಿಕಾರರೂಡರಿಗೆ ಮಾತ್ರ ಇಲ್ಲಿ ಟ್ರೀಟ್ ಮೆಂಟ್ ಇಲ್ಲದೆ ಹೋದಲ್ಲಿ ಆಸ್ಪತ್ರೆ ಆಸ್ಪತ್ರೆಗಳನ್ನು ಅಲೆಯುವಂತಹ ಪರಿಸ್ಥಿತಿಯಾ ಎಂದು ಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರು ಪ್ರಶ್ನಿಸಿzರೆ.