ಅಪಘಾತ: ಬುಕ್ ನಾಗಣ್ಣ ನಿಧನ

274

(ಹೊಸ ನಾವಿಕ ನ್ಯೂಸ್)
ಹೊನ್ನಾಳಿ: ಮಲೇಬೆನ್ನೂರು ಕಣಿವೆಯ ತಿರುವಿನ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಹೊನ್ನಾಳಿ ಬಿಇಒ ಕಚೇರಿಯ ಅಧಿಕಾರಿ ಯೊಬ್ಬರು ದಾವಣಗೆರೆಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿರುವ ದುರ್ಘಟನೆ ನಡೆದಿದೆ. ಹೊನ್ನಾಳಿ ಬಿಇಒ ಕಚೇರಿಯಲ್ಲಿ ಸಮವಸ್ತ್ರ-ಪಠ್ಯಪುಸ್ತಕ ವಿತರಣೆ ಉಸ್ತುವಾರಿ ಅಧಿಕಾರಿ ಎಚ್. ನಾಗರಾಜಪ್ಪ(೬೦) ಮೃತ ದುರ್ದೈವಿ. ೨೦೨೧ರ ಆಗಸ್ಟ್‌ನಲ್ಲಿ ಅವರು ನಿವೃತ್ತಿಯಾಗುವವರಿದ್ದರು.
ಶುಕ್ರವಾರ ಬಿಇಒ ಕಚೇರಿಯಲ್ಲಿ ಕೆಲಸ ಮುಗಿದ ಬಳಿಕ ತಮ್ಮ ಹರಿಹರದ ನಿವಾಸಕ್ಕೆ ದ್ವಿಚಕ್ರ ವಾಹನ ದಲ್ಲಿ ತೆರಳುತ್ತಿದ್ದರು. ಹೊನ್ನಾಳಿ ತಾಲೂಕಿನ ಅರಕೆರೆ ಎ.ಕೆ. ಕಾಲೋನಿ ಹಾಗೂ ಹರಿಹರ ತಾಲೂಕಿನ ಕೊಮಾರನಹಳ್ಳಿ ಗ್ರಾಮಗಳ ಮಧ್ಯೆ ಇರುವ ಮಲೇಬೆನ್ನೂರು ಮನ್ನಾ ಜಂಗಲ್ ವ್ಯಾಪ್ತಿಯ ರಸ್ತೆ ತಿರುವುಗಳ ಬಳಿ ಮುಂದೆ ಹೋಗುತ್ತಿದ್ದ ಲಘು ವಾಹನವನ್ನು ಓವರ್‌ಟೇಕ್ ಮಾಡುವ ವೇಳೆ ಎದುರಿನಿಂದ ವೇಗವಾಗಿ ಬಂದ ಕಾರ್, ಎಚ್. ನಾಗರಾಜಪ್ಪ ಪಯಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಸಾರ್ವಜನಿಕರು ದಾವಣಗೆರೆ ಜಿಸ್ಪತ್ರೆಗೆ ದಾಖಲಿಸಿzರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವಿಗೀಡಾಗಿzರೆ.
ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇzರೆ. ಅಂತ್ಯಕ್ರಿಯೆ ಶನಿವಾರ ಧೂಳೆಹೊಳೆ ಗ್ರಾಮದಲ್ಲಿ ನೆರವೇರಿತು.
ಬುಕ್ ನಾಗಣ್ಣ: ಹೊನ್ನಾಳಿ ಬಿಇಒ ಕಚೇರಿಯಲ್ಲಿ ಹಲವಾರು ವರ್ಷಗಳ ಕಾಲ ಸಮವಸ್ತ್ರ- ಪಠ್ಯಪುಸ್ತಕ ವಿತರಣಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಬುಕ್ ನಾಗಣ್ಣ ಎಂದೇ ಪ್ರಸಿದ್ಧರಾಗಿದ್ದ ಅವರು ಶಿಕ್ಷಕ ಸಮೂಹದ ಪ್ರೀತಿಗೆ ಪಾತ್ರರಾಗಿದ್ದರು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎಸ್. ಉಮಾಶಂಕರ್ ತಿಳಿಸಿದರು.
ಸಮನ್ವಯ ಶಿಕ್ಷಣ ಜವಾಬ್ದಾರಿ ನಿರ್ವಹಣೆ, ಪ್ರಭಾರ ಸಿಆರ್‌ಪಿ, ಪ್ರಭಾರ ಬಿಆರ್‌ಪಿ, ಕಂಪ್ಯೂಟರ್ ಕೆಲಸ, ಅಕ್ಷರ ದಾಸೋಹ ಡಾಟಾ ಎಂಟ್ರಿ, ನ್ಯಾಮತಿ ತಾಲೂಕಿನ ಗಡೇಕಟ್ಟೆ ಗ್ರಾಮದ ಪ್ರಭಾರ ಮುಖ್ಯ ಶಿಕ್ಷಕ ಹುz ಹೀಗೆ ಯಾವುದೇ ಹುzಯ ಜವಾಬ್ದಾರಿ ವಹಿಸಿದರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಎಚ್. ನಾಗರಾಜಪ್ಪ ಅವರ ನಿಧನಕ್ಕೆ ಶಿಕ್ಷಣ ಇಲಾಖೆಯ ಹಿರಿ-ಕಿರಿಯ ಅಧಿಕಾರಿಗಳು, ಶಿಕ್ಷಕರು, ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಪದಾಧಿಕಾರಿಗಳು ಕಂಬನಿ ಮಿಡಿದಿzರೆ.