ಅಪಘಾತ: ಕಾರು ಚಾಲಕ ಸ್ಥಳದಲ್ಲಿಯೇ ಸಾವು

493

ಶಿವಮೊಗ್ಗ: ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾಗಿದ್ದು, ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗದಿಂದ ಆಲ್ಟೋ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ದೇವೇಂದ್ರ ನಾಯ್ಕ್ ಕುಂಸಿ ಬಳಿ ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್ ಆರ್ ಟಿ ಸಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿzರೆ. ಈ ಅಪಘಾತದಲ್ಲಿ ದೇವೇಂದ್ರ ನಾಯ್ಕ್ ಸ್ಥಳದಲ್ಲಿಯೇ ಸಾವನ್ನಪ್ಪಿzರೆ.
ದೇವೇಂದ್ರ ನಾಯ್ಕ್ ಸೊರಬ ತಾಲೂಕಿನ ಆನವಟ್ಟಿ ಗ್ರಾಮದ ಹಂಚೀತಾಂಡದ ನಿವಾಸಿ ಎಂದು ತಿಳಿದುಬಂದಿದ್ದು ಕೆ.ಎ.೧೫ ಎಂ ಎಫ್ ೮೮೨೦ ಕ್ರಮ ಸಂಖ್ಯೆಯ ಆಲ್ಟೋ ಕಾರಿನಲ್ಲಿ ಆನಂದಪುರದಲ್ಲಿದ್ದ ಮಗನನ್ನ ನೋಡಿಕೊಂಡು ಬರಲು ಹೋಗುವ ವೇಳೆ ಅಪಘಾತ ನಡೆದಿದೆ. ಕಾರಿನಲ್ಲಿ ನಾಯ್ಕ್ ಒಬ್ಬರೇ ಇದ್ದರು ಎನ್ನಲಾಗಿದೆ.